ಬೆಂಗಳೂರು: ಹೆಣ್ಣು ಮಗು ಹುಟ್ಟಿದ್ದ ಶುಭ ಸುದ್ದಿ ತಲುಪುವ ಮುನ್ನವೇ ತಂದೆ ಇಹಲೋಕ ತ್ಯಜಿಸಿದ ಹೃದಯ ವಿದ್ರಾವಕ ಘಟನೆ ವಿಜಯನಗರದಲ್ಲಿ ಗುರುವಾರ ನಡೆದಿದೆ. ಬಾಗಲಕೋಟೆ ಮೂಲದ ರಾಘವೇಂದ್ರ (35) ಮೃತರು.
ರಾಘವೇಂದ್ರ ಅವರ ಪತ್ನಿ ಗುರುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಶುಭ ಸುದ್ದಿಯನ್ನು ಬೆಂಗಳೂರಿನ ವಿಜಯನಗರದಲ್ಲಿ ವಾಸವಿದ್ದ ರಾಘವೇಂದ್ರ ಅವರಿಗೆ ತಿಳಿಸಲು ಪತ್ನಿಯ ಕುಟುಂಬಸ್ಥರು ಅನೇಕ ಬಾರಿ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಬಹುಶಃ ಕೆಲಸದ ಒತ್ತಡದಲ್ಲಿ ಕರೆ ಸ್ವೀಕರಿಸಿಲ್ಲ ಎಂದು ಮನೆಯವರು ಸುಮ್ಮನಾಗಿದ್ದಾರೆ. ನಂತರ ರಾಘವೇಂದ್ರ ವಾಸವಿದ್ದ ಮನೆಯ ಮಾಲೀಕರು ರಾಘವೇಂದ್ರ ಹೃದಾಯಾಘಾತದಿಂದ ಮೃತಪಟ್ಟಿರುವ ಸುದ್ದಿಯನ್ನು ದೂರವಾಣಿ ಕರೆ ಮಾಡಿ ಪತ್ನಿಯ ಕುಟುಂಬಸ್ಥರಿಗೆ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಗುರುವಾರ ಮುಂಜಾನೆ 4 ಗಂಟೆ ಸುಮಾರಿಗೆ ರಾಘವೇಂದ್ರ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸಾಗಿದ್ದರು. ಮನೆಗೆ ಬಂದು ಬಾಗಿಲು ಲಾಕ್ ಮಾಡಿ ಒಳ ಹೋಗುತ್ತಿದ್ದಂತೆ ನಡು ಮನೆಯಲ್ಲಿ ಕುಸಿದು ಬಿದ್ದು ಹೃದಯಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬೆಳಗ್ಗೆ 9 ಗಂಟೆ ಆದರೂ ರಾಘವೇಂದ್ರ ಮನೆಯಿಂದ ಹೊರಬಂದಿಲ್ಲ. ಇದರಿಂದ ಅನುಮಾಧಿನಗೊಂಡ ಮನೆ ಮಾಲೀಕರು ಕಿಟಕಿ ಮೂಲಕ ರಾಘವೇಂದ್ರನನ್ನು ಕರೆಯಲು ಯತ್ನಿಸಿದ್ದಾರೆ. ಮನೆ ಮಾಲೀಕರು, ಪೊಲೀಸರು ಮತ್ತು 108 ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದ 108 ಸಿಬ್ಬಂದಿ ರಾಘವೇಂದ್ರ ಹೃದಯಧಿಘಾತದಿಂದ ಸಾವನ್ನಪ್ಪಿಧಿದ್ದಾರೆ ಎಂದು ದೃಢಪಡಿಸಿಧಿದರು. ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.