Advertisement

ಪೊಲೀಸ್‌ ದೌರ್ಜನ್ಯದಿಂದ ತಂದೆ ಸಾವು; ಇಲಾಖೆಯಲ್ಲಿ ಇದ್ದರೂ ಕುಟುಂಬಕ್ಕೆ ರಕ್ಷಣೆ ಸಿಗುತ್ತಿಲ್ಲ

11:07 AM Nov 05, 2020 | sudhir |

ವಿಜಯಪುರ: ಜಿಲ್ಲೆಯ ಸಿಂದಗಿ ಠಾಣೆ ಪೊಲೀಸರು ತಮ್ಮ ತಂದೆ ಸಾವಿಗೆ ಕಾರಣವಾಗಿದ್ದಾರೆ. ತಾಯಿ ಹಾಗೂ ಸಹೋದರ
ಮೇಲೆ ದೌರ್ಜನ್ಯ ನಡೆಸಿದ್ದಾರೆ. ಇಲಾಖೆಯಲ್ಲಿ ಇದ್ದರೂ ಕುಟುಂಬಕ್ಕೆ ರಕ್ಷಣೆ ಸಿಗುತ್ತಿಲ್ಲ. ಮುಖ್ಯಮಂತ್ರಿ ಕಚೇರಿಯಿಂದ
ಆದೇಶ ಬಂದರೂ ಸಿಂದಗಿ ಪೊಲೀಸರು ತಮಗೆ ನ್ಯಾಯ ದೊರಕಿಸಿಕೊಡುತ್ತಿಲ್ಲ ಎಂದು ಬೆಂಗಳೂರು ಪೊಲೀಸ್‌ ಠಾಣೆಯೊಂದರ ಪೇದೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಇಲಾಖೆ ಮೇಲಧಿಕಾರಿಗಳ ವಿರುದ್ಧ ಹರಿಹಾಯ್ದ ವಿಡಿಯೋ ವೈರಲ್‌ ಆಗಿದೆ.

Advertisement

ವಿಜಯಪುರ ಜಿಲ್ಲೆ ಸಿಂದಗಿ ಠಾಣೆ ಪೊಲೀಸರು ತಮ್ಮ ತಂದೆಯ ಹತ್ಯೆಗೆ ಕಾರಣ ಎಂದು ಯಲಹಂಕ ಪೊಲೀಸ್‌ ಠಾಣೆ ಹೆಡ್‌ ಕಾನ್‌ಸ್ಟೆಬಲ್‌ ಬಸವರಾಜ ಪಾಟೀಲ ಆರೋಪ ಮಾಡಿದ್ದಾರೆ. ಚಿಕ್ಕಪ್ಪನ ಕುಮ್ಮಕ್ಕಿನಿಂದ ನಮ್ಮ ಕುಟುಂಬದ ಸದಸ್ಯರ ಮೇಲೆ ಈಗಾಗಲೇ ವಿವಿಧ ರೀತಿಯ 7 ಪ್ರಕರಣಗಳನ್ನು ದಾಖಲಿಸಿ ಬಂಧಿ ಸುವ, ಹತ್ಯೆ ಮಾಡುವ ಬೆದರಿಕೆ ಹಾಕಿದ್ದಾರೆ. ಇದಲ್ಲದೇ ನನ್ನ ವಿರುದ್ಧವೂ ಪ್ರಕರಣ ದಾಖಲಿಸಿ ಸರ್ಕಾರಿ ಉದ್ಯೋಗಕ್ಕೆ ಕುತ್ತು ತರುವ ಹುನ್ನಾರ ನಡೆಸಿದ್ದಾರೆ ಎಂದು ದೂರಿದ್ದಾರೆ.

ದೌರ್ಜನ್ಯ ಕುರಿತು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿ ಮಾಡಿದರೂ ಯಾರೂ ನೆರವಿಗೆ ಬರುತ್ತಿಲ್ಲ. ಆರ್‌ಟಿಐ ಮೂಲಕ ದಾಖಲೆ ಕೇಳಿದರೂ ನಮ್ಮ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ನನ್ನ ನೋವು ನಿವೇದಿಸಿಕೊಂಡಿದ್ದೇನೆಂದು ಬೆಂಗಳೂರಿನ ಯಲಹಂಕ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹೆಡ್‌ ಕಾನ್‌ಸ್ಟೆಬಲ್‌ ಬಸವರಾಜ ಪಾಟೀಲ “ಉದಯವಾಣಿ’ ಜತೆ ಮಾತನಾಡಿ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ಸಂಚಾರ ನಿಯಮ ಉಲ್ಲಂಘಿಸಿದರೆ, ಮನೆಗೆ ಬರಲಿದೆ ಪೊಲೀಸ್‌ ತಂಡ

ಏನಿದು ವಿವಾದ?: ಸಿಂದಗಿ ತಾಲೂಕು ಭಂಟನೂರು ಗ್ರಾಮದ ತಮ್ಮ ತಂದೆ ಹನುಮಂತ್ರಾಯ ಪಾಟೀಲ ಹಾಗೂ ಚಿಕ್ಕಪ್ಪ ಶಿವಪ್ಪ ಮಧ್ಯೆ ಆಸ್ತಿ ವಿವಾದ ಇದ್ದು, ಚಿಕ್ಕಪ್ಪನ ಕುಮ್ಮಕ್ಕಿ ನಿಂದ ನಮ್ಮ ಕುಟುಂಬಕ್ಕೆ ಸಿಂದಗಿ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ತಂದೆ, ತಾಯಿ ಮಲ್ಲಮ್ಮ ಹಾಗೂ ಸಹೋದರ ರಮೇಶ ಮೇಲೆ ನಿರಂತರ ದೌರ್ಜನ್ಯ ನಡೆಸಿದ್ದಾರೆ. ಈ
ಕಾರಣದಿಂದ ನಮ್ಮ ತಂದೆ ಸಾವಿಗೀಡಾಗಿದ್ದು, ತಾಯಿ, ಅಣ್ಣ ಜೀವ ಭಯದಲ್ಲೇ ಬದುಕುವಂತಾಗಿದೆ ಎಂದು ಆರೋಪಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ಸರ್ಕಾರ ಹಾಗೂ ಇಲಾಖೆಯೇ ನಮ್ಮ ಕುಟುಂಬದ ನೆರವಿಗೆ ಬಾರದ ಹಿನ್ನೆಲೆಯಲ್ಲಿ ಜೀವ ರಕ್ಷಣೆ ಹಾಗೂ ನ್ಯಾಯಕ್ಕಾಗಿ
ನೇರವಾಗಿ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗಿದೆ.

– ಬಸವರಾಜ ಪಾಟೀಲ, ಹೆಡ್‌ ಕಾನ್‌ಸ್ಟೆಬಲ್‌, ಯಲಹಂಕ ಪೊಲೀಸ್‌ ಠಾಣೆ, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next