Advertisement

ಬೀದರ್:ಇತಿಹಾಸದಲ್ಲಿ ಪ್ರಥಮ ಬಾರಿಗೆ ಐಎಎಫ್ ಯುದ್ಧ ವಿಮಾನ ಹಾರಿಸಿದ ಅಪ್ಪ-ಮಗಳು

12:31 PM Jul 06, 2022 | Team Udayavani |

ಬೀದರ್: ಅಪ್ಪ ಸಂಜಯ್‌ ಶರ್ಮಾ ವಾಯುಪಡೆಯ ಯುದ್ಧ ವಿಮಾನಗಳ ಪೈಲೆಟ್‌. ಅವರನ್ನೇ ನೋಡಿ ಬೆಳೆದ ಮಗಳು ಅನನ್ಯಾ ಶರ್ಮಾ ಕೂಡ ಇದೀಗ ಯುದ್ಧ ವಿಮಾನಗಳ ಪೈಲೆಟ್‌ ಆಗಿದ್ದಾರೆ. ಭಾರತೀಯ ವಾಯುಪಡೆಯಲ್ಲಿ ಮೊದಲನೇ ಬಾರಿಗೆ ಅಪ್ಪ-ಮಗಳ ಜೋಡಿ ಒಟ್ಟಿಗೇ ಸೇವೆ ಸಲ್ಲಿಸಿ ದಾಖಲೆ ಬರೆದಿದೆ.

Advertisement

ಇದನ್ನೂ ಓದಿ:ಮೊದಲ ಬಾರಿಗೆ ಹಿಂದೂ ಸಂಪ್ರದಾಯ ಮೂಲಕ ದಾಂಪತ್ಯ ಜೀವನಕ್ಕೆ ಗೇ ಕಪಲ್ಸ್‌!

ಅಂದ ಹಾಗೆ ಈ ಜೋಡಿ ಮೇ ತಿಂಗಳಾಂತ್ಯದಲ್ಲಿ ಕರ್ನಾಟಕದ ಬೀದರ್‌ನಲ್ಲಿ Hawk-132 ಯುದ್ಧವಿಮಾನವನ್ನು ಜತೆಯಾಗಿ ನಡೆಸಿದೆ. ಅದರ ಫೋಟೋ ಇದೀಗ ಎಲ್ಲೆಡೆ ಹರಿದಾಡಿದೆ.

ಅನನ್ಯ ಬಿ.ಟೆಕ್‌ ಪದವಿ ಪಡೆದಿದ್ದು, 2021ರ ಡಿಸೆಂಬರ್ ನಿಂದ ಬೀದರ್‌ನಲ್ಲಿ ವಾಯುಪಡೆಯ ಉನ್ನತ ಮಟ್ಟದ ಯುದ್ಧವಿಮಾನಗಳ ತರಬೇತಿ ಪಡೆದಿದ್ದು, 2022ರ ಮೇ 30ರಿಂದ Hawk-132 ಯುದ್ಧವಿಮಾನದ ತರಬೇತಿ ಪಡೆದಿದ್ದರು. ಸಂಜಯ್‌ ಶರ್ಮಾ ಅವರು ಮಿಗ್‌-21 ಯುದ್ಧ ವಿಮಾನದ ಪೈಲೆಟ್‌ ಆಗಿ ಅನುಭವ ಹೊಂದಿದ್ದಾರೆ.

Advertisement

“ಐಎಎಫ್ ನಲ್ಲಿ ತಂದೆ ಮತ್ತು ಮಗಳು ಜತೆಯಾಗಿ ಯುದ್ಧ ವಿಮಾನದ ಹಾರಾಟ ನಡೆಸಿರುವುದು ಇದೇ ಮೊದಲ ಬಾರಿಯಾಗಿದ್ದು, ಇದೊಂದು ನೂತನ ಇತಿಹಾಸ” ಎಂದು ಐಎಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐಎಎಫ್ ನಲ್ಲಿ ಅನನ್ಯ ಶರ್ಮಾ ಅವರ ಪಾಲಿಗೆ ಸಂಜಯ್ ಶರ್ಮಾ ಕೇವಲ ತಂದೆ ಮಾತ್ರವಲ್ಲ, ಹಿರಿಯ ಅಧಿಕಾರಿಯಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ತಾನು ಯುದ್ಧ ವಿಮಾನದ ಪೈಲಟ್ ಆಗಬೇಕೆಂಬ ದೀರ್ಘಾವಧಿಯ ಕನಸು ನನಸಾಗಿದೆ ಎಂಬುದು ಅನನ್ಯ ಶರ್ಮಾ ಪ್ರತಿಕ್ರಿಯೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next