Advertisement

ತಂದೆ-ತಾಯಿ ಕಡೆಗಣಿಸದಿರಿ

02:52 PM Apr 12, 2017 | Team Udayavani |

ಹೊನ್ನಾಳಿ: ಇಳಿ ವಯಸ್ಸಿನಲ್ಲಿ ತಂದೆ-ತಾಯಿಗಳನ್ನು ಯಾರೂ ಕಡೆಗಣಿಸಬಾರದು ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು. ಇಲ್ಲಿನ ಹಿರೇಕಲ್ಮಠದ ಗುರುನಿವಾಸದಲ್ಲಿ ಭಾನುವಾರ ರಾತ್ರಿ ನಡೆದ ಸಂಸ್ಕೃತಿ-ಸಂಸ್ಕಾರ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಈಚಿನ ದಿನಗಳಲ್ಲಿ ಕೂಡು ಕುಟುಂಬಗಳು ಕಣ್ಮರೆಯಾಗುತ್ತಿವೆ. ಹಿರಿಯ ಜೀವಗಳ ನೈತಿಕ ಕಥೆಗಳ ಆಲಿಕೆಯ ಭಾಗ್ಯವೂ ಅವರಿಗಿಲ್ಲವಾಗಿದೆ. ಇದು ನಮ್ಮ ಮಕ್ಕಳಲ್ಲಿ ಸಂಸ್ಕೃತಿ-ಸಂಸ್ಕಾರ ಕಡಿಮೆಯಾಗಲು ಕಾರಣವಾಗುತ್ತಿದೆ. ಇಂಥ ಕಾಲಘಟ್ಟದಲ್ಲಿ ಹಿರೇಕಲ್ಮಠದಲ್ಲಿ ಸಂಸ್ಕೃತಿ-ಸಂಸ್ಕಾರ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು. 

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಸಂಸ್ಕಾರ ಇಲ್ಲದ ವ್ಯಕ್ತಿಯ ಜೀವನ ನಿರರ್ಥಕ. ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಸಂಸ್ಕಾರ ನೀಡಬೇಕು. ಆಗ ಮಾತ್ರ ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡಲು ಸಾಧ್ಯ ಎಂದು ತಿಳಿಸಿದರು. ಹಿರೇಕಲ್ಮಠದ ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಮಕ್ಕಳನ್ನು ದಂಡಿಸದೇ ಶಿಕ್ಷಣ ನೀಡಬೇಕು.

ಒಳ್ಳೆಯ ಬುದ್ಧಿ ಕಲಿಸಬೇಕು.  ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳು, ಬೋಧಕರು ಚಿಂತಿಸಬೇಕು ಎಂದರು. ಮಕ್ಕಳು ಸಸಿಗಳಂತೆ. ಬೆಳೆಯುವ ಅವಧಿಧಿಯಲ್ಲೇ ಅವರಿಗೆ ಸಂಸ್ಕಾರ ಕಲಿಸಬೇಕು. ನೈತಿಕ ಬದುಕಿಗೆ ಅವಶ್ಯಕವಾದ ನೀತಿ ಕಥೆ, ಹಾಡು ಹೇಳುವುದು ಮತ್ತಿತರ ವಿಷಯಗಳನ್ನು ಕಲಿಸಬೇಕು.

ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಯುವಕರು ತಮ್ಮ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಲು ಸೂಕ್ತ ತರಬೇತಿ ನೀಡಲಾಗುವುದು. 15ರಿಂದ ಪ್ರತಿ ದಿನ ಬೆಳಿಗ್ಗೆ 6ರಿಂದ 7ರವರೆಗೆ ಮತ್ತು ಸಂಜೆ 5.30ರಿಂದ 6.30ರವರೆಗೆ ಉಚಿತ ಯೋಗಾಸನ ತರಬೇತಿ ಶಿಬಿರ ಆಯೋಜಿಸಲಾಗುವುದು ಎಂದರು.

Advertisement

ಡಾ| ಎಚ್‌.ಪಿ. ರಾಜ್‌ಕುಮಾರ್‌, ಶಾಂತರಾಜ್‌ ಪಾಟೀಲ್‌, ಪ್ರೇಮ್‌ಕುಮಾರ್‌ ಭಂಡಿಗಡಿ, ಎಸ್‌.ಎ. ಹುಡೇದ್‌, ಪಿಎಸ್‌ಐ ಎನ್‌.ಸಿ. ಕಾಡದೇವರ ಮತ್ತಿತರರಿದ್ದರು. ಚನ್ನಪ್ಪಸ್ವಾಮಿ ವಿದ್ಯಾಪೀಠದ ನಿರ್ದೇಶಕರಾದ ಎಚ್‌.ಪಿ. ರಾಮಮೂರ್ತಿ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಹೊಸಕೇರಿ ಸುರೇಶ್‌, ಎಚ್‌.ಎ. ಉಮಾಪತಿ, ಪಪಂ ಸದಸ್ಯ ಮಂಜುನಾಥ್‌ ಸರಳಿನಮನೆ, ಕುಮಾರಸ್ವಾಮಿ, ರಾಜು, ಡಾ| ಲಿಂಗರಾಜ್‌ ಮತ್ತಿತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next