Advertisement
ಮಗನ ಸಾಧನೆಯನ್ನು ಕಣ್ತುಂಬಿಕೊಳ್ಳಲು ಆಟೋ ನಗರದ ಕೆಎಸ್‌ಸಿಎ ಮೈದಾನಕ್ಕೆ ಬಂದಿದ್ದ ಕರ್ನಾಟಕ ತಂಡದ ವೇಗದ ಬೌಲರ್ ರೋನಿತ್‌ನ ತಾಯಿ ಸರಿತಾ ಮೋರೆ ಉದಯವಾಣಿಯೊಂದಿಗೆ ಸಂತಸ ಹಂಚಿಕೊಂಡರು.ಕರ್ನಾಟಕ ತಂಡದ ಪರವಾಗಿ ಇದೇ ಮೊದಲ ರಣಜಿ ಟ್ರೋಫಿ ಆಡುತ್ತಿರುವ ರೋನಿತ್ ಮೋರೆ ಕುಂದಾನಗರಿಯಲ್ಲಿ ಮೊದಲ ಪಂದ್ಯ ಇದಾಗಿದೆ. ರಾಜ್ಯ ತಂಡದಲ್ಲಿ ಅವಕಾಶ ಸಿಗದಿದ್ದಕ್ಕೆ ಹಿಮಾಚಲ ಪ್ರದೇಶದ ಪರವಾಗಿ ಆಡಿದ್ದ ರೋನಿತ್‌ಗೆ ಮೂರು ವರ್ಷಗಳ ಬಳಿಕ ಅವಕಾಶ ಸಿಕ್ಕಿದೆ. ಬೆಳಗಾವಿಯಲ್ಲಿ ಅಭಿಮಾನಿಗಳ ಹಷೋದ್ಘಾರದ ಮಧ್ಯೆಯೇ ಆಟ ಆರಂಭಿಸಿರುವ ರೋನಿತ್ ಐದು ವಿಕೆಟ್ ಪಡೆದು ಬೆಳಗಾವಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Related Articles
Advertisement
ತಮ್ಮನ ಆಟ ನೋಡಲು ಬೆಂಗಳೂರಿ ನಿಂದ ಬಂದಿದ್ದೇನೆ. ಉತ್ತಮ ಪ್ರದರ್ಶನ ನೀಡುತ್ತಾನೆ ಎಂಬುದು ನಮಗೆ ಮೊದಲೇ ಗೊತ್ತಿತ್ತು. ಬೆಳಗಾವಿಯಲ್ಲಿ ಕರ್ನಾಟಕ ತಂಡ ಗೆಲ್ಲುವ ವಿಶ್ವಾಸವಿದೆ. ನನ್ನ ಸಹೋದರನೊಂದಿಗೆ ಉಳಿದ ಎಲ್ಲ ಆಟಗಾರರ ಶ್ರಮವೂ ಇದೆ ಎನ್ನುತ್ತಾರೆ ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿರುವ ರೋನಿತ್‌ನ ಸಹೋದರ ನಿಖೀಲ್.
ಕೈ ಬೀಸಿದ ಮಗ-ಪೋಷಕರ ಆನಂದ ಮಗನ ಸಾಧನೆಯನ್ನು ಕಣ್ತುಂಬಿಕೊಳ್ಳಲು ಮೈದಾನದ ಪ್ರಸ್‌ಕ್ಲಬ್ ಬಾಕ್ಸ್‌ನಲ್ಲಿ ಕುಳಿತಿದ್ದ ರೋನಿತ್ ಪೋಷಕರು ಆನಂದ ಬಾಷ್ಪ ಹರಿಸಿದರು. ಮಗ 5 ವಿಕೆಟ್ ಕಬಳಿಸಿ ಆಲೌಟ್ ಮಾಡಿ ಪೆವಿಲಿಯನ್‌ನತ್ತ ಬರುವಾಗ ತಂದೆ-ತಾಯಿಯನ್ನು ನೋಡಿ ಕೈ ಬೀಸಿದನು. ಆಗ ಎದ್ದು ನಿಂತು ಸಂಭ್ರಮಿಸುತ್ತಿದ್ದ ತಂದೆ ಗಜಾನನ ಹಾಗೂ ತಾಯಿ-ಸರಿತಾ ಅವರು ಮಗನನ್ನು ನೋಡಿ ಆನಂದ ಭಾಷ್ಪ ಸುರಿಸಿದರು.
ಧೋನಿ ಅಭಿಮಾನಿರೋನಿತ್ ಮೋರೆ ಕ್ರಿಕೆಟ್ ಆಡುವಾಗ ಅನೇಕ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಆಟ ನೋಡುತ್ತಿದ್ದ. ಜೊತೆಗೆ ಈತ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರಸಿಂಗ್ ಅವರ ಅಭಿಮಾನಿ ಎಂದು ಅಭಿಮಾನದಿಂದ ಹೇಳಿಕೊಂಡರು ತಾಯಿ ಸರಿತಾ. ಭೈರೋಬಾ ಕಾಂಬಳೆ