Advertisement

ಜಪಾನ್‌ಗೊಬ್ಬ ಪುಟಾಣಿ ದೊರೆ

11:08 PM Oct 18, 2019 | Team Udayavani |

ಟೋಕಿಯೋ: ಜಪಾನ್‌ ರಾಜ ಮನೆತನದ ಭವಿಷ್ಯ ಈಗ 13 ವರ್ಷದ ಬಾಲಕ ಹಿಸಾಹಿಟೋ ಮೇಲೆ ನಿಂತಿದೆ. ರಾಜ ಮನೆತನದಲ್ಲಿ ಗಂಡು ಸಂತಾನ ವಿರಳವಾಗಿರುವ ಕಾರಣ, ಹಾಲಿ ದೊರೆಯ ಪದತ್ಯಾಗ ಬಳಿಕ ಅವರ ಕಿರಿಯ ಸಹೋದರ ಅಕಿಶಿನೋ ದೊರೆಯ ಸ್ಥಾನಕ್ಕೇರಲಿದ್ದಾರೆ. ತದಅನಂತರ ಇರುವುದು ಈ ಬಾಲಕ ಮಾತ್ರ. ಹೀಗಾಗಿ, ಆತನನ್ನು ಈಗಲೇ ಮುಂದಿನ ದೊರೆ ಎಂದು ಬಿಂಬಿಸಿ, ಆ ಹೊಣೆ ಹೊರಲು ಅವನನ್ನು ತಯಾರು ಮಾಡಲಾಗುತ್ತಿದೆ.

Advertisement

ಹಿಂದಿನ ದೊರೆ ಅಕಿಹಿಟೋ ಅವರ ಪದ ತ್ಯಾಗದ ಅನಂತರ ನರುಹಿಟೋ(59) ಅವರು ಮೇ 1ರಂದು ದೊರೆಯ ಹೊಣೆಗಾರಿಕೆ ವಹಿಸಿಕೊಂಡಿದ್ದರು. ಇದೇ 22ರಂದು ವಿದೇಶಿ, ದೇಶೀಯ ಗಣ್ಯರ ಸಮ್ಮುಖದಲ್ಲಿ ನರುಹಿಟೋ ಅಧಿಕೃತ ಪಟ್ಟಾಭಿಷೇಕ ನಡೆಯಲಿದೆ. ಅನಂತರದಲ್ಲಿ ಅವರ ಕಿರಿಯ ಸಹೋದರ ಪ್ರಿನ್ಸ್‌ ಅಕಿಶಿನೋ(53) ರಾಜನ ಪಟ್ಟಕ್ಕೇರುತ್ತಾರೆ. ಅನಂತರ ಪಟ್ಟಕ್ಕೇರಲು ಗಂಡು ಸಂತಾನ ಎಂದು ಇರುವುದು ಹಿಸಾಹಿಟೋ ಮಾತ್ರ.

ಆಗಸ್ಟ್‌ನಲ್ಲಿ ಈ ಕಿರಿಯ ರಾಜಕುಮಾರ ಹಿಸಾಹಿಟೋ ಭೂತಾನ್‌ಗೆ ಭೇಟಿ ನೀಡಿದ್ದು, ಅದು ಆತನ ಮೊದಲ ಸಾಗರೋತ್ತರ ಪ್ರಯಾಣವಾಗಿತ್ತು. ಜಪಾನ್‌ನ ಭವಿಷ್ಯದ ದೊರೆಯನ್ನು ಜಾಗತಿಕ ವೇದಿಕೆಯಲ್ಲಿ ಪರಿಚಯಿಸ ಲೆಂದೇ ಹಿಸಾಹಿಟೋನನ್ನು ಭೂತಾನ್‌ಗೆ ಕರೆದೊಯ್ಯಲಾಗಿತ್ತು ಎಂಬ ಮಾತುಗಳು ಕೇಳಿಬಂದಿದ್ದವು.

ಸಾಂಪ್ರದಾಯಿಕ “ಹಕಾಮಾ’ ಕಿಮೋನೋ ಧರಿಸಿಕೊಂಡು ಆತಿಥೇಯರಿಗೆ ನಮಿಸಿದ ಶೈಲಿ, ಆರ್ಚರಿಯತ್ತ ತೋರಿದ ಆಸಕ್ತಿ ಎಲ್ಲವನ್ನೂ ಗಮನಿಸಿದ್ದ ಮಂದಿ, ಮುಂದಿನ ಜಪಾನ್‌ ರಾಜನನ್ನು ಹಿಸಾಹಿಟೋನಲ್ಲಿ ಕಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next