Advertisement

ನಿವೃತ್ತ ಸೈನಿಕನ ಮೇಲೆ ಮಾರಣಾಂತಿಕ ಹಲ್ಲೆ : ನ್ಯಾಯಕ್ಕಾಗಿ ಮೊರೆಯಿಡುತ್ತಿರುವ ಮಡದಿ

07:01 PM Dec 10, 2020 | sudhir |

ದಾಂಡೇಲಿ: ಜೊಯಿಡಾ ತಾಲೂಕಿನ ಬಿರಿಯಂಪಾಲಿ ಗ್ರಾಮದ ಅಕ್ವೋಡಾ ಮಜರೆಯಲ್ಲಿ ಸ್ವಂತ ಜಮೀನಿನಲ್ಲಿರುವ ಹೋಂ ಸ್ಟೇಯಲ್ಲಿ ಕೆಲಸ ಮಾಡುತ್ತಿದ್ದ ನಿವೃತ್ತ ಸೈನಿಕನ ಮೇಲೆ ಸ್ಥಳೀಯ 16 ಜನರ ತಂಡವೊಂದು ಹಠಾತ್‌ ದಾಳಿ ನಡೆಸಿ, ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.

Advertisement

18 ವರ್ಷಗಳಿಂದ ಸೈನಿಕನಾಗಿ ಸೇವೆ ಸಲ್ಲಿಸಿ, ನಿವೃತ್ತಿ ಬಳಿಕ ಶಿವಾಜಿ ಲಕ್ಷ್ಮಣ ಗೌಂಡನಕರ (40) ಜೊಯಿಡಾ ತಾಲೂಕಿನ ಬಿರಿಯಂಪಾಲಿ ಗ್ರಾಮದ ಅಕ್ವೋಡಾ ಮಜರೆಯಲ್ಲಿ ಜಾಗ ಖರೀದಿಸಿ ಕೃಷಿ ಕೆಲಸ ಮಾಡುತ್ತಿದ್ದರು. ಇಲ್ಲಿ ರಸ್ತೆ ವಿಚಾರಕ್ಕೆ ಸಂಬಂಧಪಟ್ಟಂತೆ ಬಹಳ ದಿನಗಳಿಂದ ಸ್ಥಳೀಯರು ಹಾಗೂ ಇವರ ನಡುವೆ ಮನಸ್ತಾಪ ಉಂಟಾಗಿತ್ತು. ಇದನ್ನು ತಹಶೀಲ್ದಾರ್‌
ಇತ್ಯರ್ಥ ಪಡಿಸಿದ್ದರು. ಆದರೆ ಮಂಗಳವಾರ ಸಂಜೆ ಶಿವಾಜಿ ಲಕ್ಷ್ಮಣ ಗೌಂಡನಕರ ಕೂಲಿಗಳೊಂದಿಗೆ ಕೆಲಸ ಮಾಡುತ್ತಿದ್ದಾಗ
ಸ್ಥಳೀಯರಾದ ಪದ್ದು ಪಾವಣೆ, ಠಕ್ಕು ಪಾವಣೆ, ಭಾಗ್ಯಾ ಪಾವಣೆ, ಜ್ಯೋತಿಯಾ ಪಾವಣೆ, ಚೀಮಣಿ ಪಾವಣೆ, ಗಂಗಿ ಪಾವಣೆ, ನಾಗಿ ಪಾವಣೆ, ಜೆನ್ನಿ ಪಾವಣೆ, ಸಾಕರಿ ಪಾವಣೆ, ಸುನೀತಾ ಪಾವಣೆ, ಭಾಗೀರಥಿ ಪಾವಣೆ, ಸೋನಿ ಪಾವಣೆ, ವೀರು ಪಾವಣೆ, ಪುರುಷೋತ್ತಮ ಮಿರಾಶಿ, ಮಹೇಶ ಮಿರಾಶಿ, ಜೋಸೆಫ್‌ ಬಾಬು ಇವರೆಲ್ಲ ಸೇರಿ ಬಡಿಗೆಗಳಿಂದ ಹಲ್ಲೆ ಮಾಡಲು ಆರಂಭಿಸಿದರು.

ಇದನ್ನೂ ಓದಿ:ಪ್ರತಿಸ್ಪರ್ಧಿಗಳ ಹತ್ತಿಕ್ಕಿದ ಆರೋಪ: ಫೇಸ್‌ಬುಕ್‌ ವಿರುದ್ಧ 48 ಪ್ರಾಂತ್ಯಗಳಿಂದ ಕೇಸು

ಇದನ್ನು ತಡೆಯಲು ಬಂದ ಕೂಲಿ ಕಾರ್ಮಿಕರಾದ ಪರಿಶಿಷ್ಟ ಪಂಗಡದ ಚಂದ್ರಕಾಂತ ಮಾರುತಿ ನಾಯ್ಕ, ಪರಶುರಾಮ ರಾಣಬಾ ನಾಯ್ಕ ಮತ್ತು ಅಶ್ವತ್ಥ ಸತ್ಯಪ್ಪ ನಾಯ್ಕರ ಮೇಲೆಯೂ ಹಲ್ಲೆ ಮಾಡಿದ್ದಾರೆ ಎಂದು ಚಂದ್ರಕಾಂತ ಮಾರುತಿ ನಾಯ್ಕರು
ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಹಲ್ಲೆಯಿಂದಾಗಿ ಶಿವಾಜಿ ಲಕ್ಷ್ಮಣ ಗೌಂಡನಕರಗೆ ಗಂಭೀರ ಗಾಯವಾಗಿದ್ದು, ಹಲ್ಲೆ ಮಾಡಿದ ನಂತರ ಜೀವ ಬೆದರಿಕೆಯನ್ನೂ ಹಾಕಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.

Advertisement

ಶಿವಾಜಿ ಲಕ್ಷ್ಮಣ ಗೌಂಡನಕರಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಎಸ್‌ಡಿಎಂ ಆಸ್ಪತ್ರೆಗೆ ಕಳುಹಿಸಲಾಗಿದೆ. ಉಳಿದಂತೆ ಅಶ್ವತ್ಥ ಸತ್ಯಪ್ಪ ನಾಯ್ಕ, ಚಂದ್ರಕಾಂತ ಮಾರುತಿ ನಾಯ್ಕ, ಪರಶುರಾಮ ರಾಣಬಾ ನಾಯ್ಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಈ ಕುರಿತಂತೆ ಚಂದ್ರಕಾಂತ ನಾಯ್ಕ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ. ಪಿಎಸೈ ಹನುಮಂತ ಬಿರದಾರ ತನಿಖೆ ಕೈಗೊಂಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next