Advertisement
ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ ಮಾರ ಣಾಂತಿಕ ಅಪಘಾತಗಳ ಸಂಖ್ಯೆ 290 ಇತ್ತು. 2021- 22ನೇ ಸಾಲಿನಲ್ಲಿ ಈ ಸಂಖ್ಯೆ 263ಕ್ಕೆ ಕುಸಿದಿತ್ತಾದರೂ, 2022-23ನೇ ಸಾಲಿನಲ್ಲಿ 345ಕ್ಕೆ ಹೆಚ್ಚಳಗೊಂಡಿದೆ. ವರ್ಷದಿಂದ ವರ್ಷಕ್ಕೆ ಮಾರಣಾಂತಿಕ ಅಪಘಾತಗಳ ಪ್ರಮಾಣ ಹೆಚ್ಚುತ್ತಿರುವುದು ಜನರಲ್ಲಿ ಆತಂಕ ಹೆಚ್ಚು ವಂತೆ ಮಾಡಿದೆ. ಇನ್ನು 2022-23ನೇ ಸಾಲಿನ ಅಪ ಘಾತಗಳ ಪ್ರಮಾಣವನ್ನು ಮಾರ್ಚ್ ಅಂತ್ಯಕ್ಕೆ ಗಣನೆ ಮಾಡಿದ್ದು, 2023ರ ಮಾರ್ಚ್‌ಬಳಿಕ ಸಂಭವಿಸಿದ ಅಪ ಘಾತಗಳನ್ನು ಸಾರಿಗೆ ಹಾಗೂ ಪೊಲೀಸ್ ಇಲಾಖೆ ಇನ್ನೂ ಲೆಕ್ಕಹಾಕಿಲ್ಲ.
Related Articles
Advertisement
ರಾಮನಗರ ಜಿಲ್ಲೆ ಮಾತ್ರವಲ್ಲ ರಾಜ್ಯದಲ್ಲಿ ಸಹ ಮಾರಣಾಂತಿಕ ಅಪಘಾತಗಳ ಪ್ರಮಾಣ ಹೆಚ್ಚುತ್ತಿರುವುದು ಸಾರಿಗೆ ಇಲಾಖೆಯ ಅಂಕಿಅಂಶಗಳಿಂದ ಬಹಿರಂಗವಾಗಿದೆ. ರಾಜ್ಯದಲ್ಲಿ 2020-21ನೇ ಸಾಲಿನಲ್ಲಿ 9082, 2022-23ನೇ ಸಾಲಿನಲ್ಲಿ 9458, 2022-23ನೇ ಸಾಲಿನಲ್ಲಿ 10633 ಮಾರಣಾಂತಿಕ ರಸ್ತೆ ಅಪಘಾತಗಳು ಸಂಭವಿಸಿವೆ. ಇನ್ನು ಅಪಘಾತಕ್ಕೆ ಕಾರಣವಾದ ಅಡ್ಡಾದಿಟ್ಟಿ ಚಾಲನೆ ಮಾಡಿ ಪ್ರಯಾಣಿಕರಿಗೆ ಉಪದ್ರವ ನೀಡುತ್ತಿರುವ ಪ್ರಯಾಣಿಕರ ಚಾಲನಾ ಪರವಾನಗಿ ಯನ್ನು ರದ್ದುಪಡಿಸುವ ಕಾರ್ಯಕ್ಕೂ ಸಾರಿಗೆ ಇಲಾಖೆ ಮುಂದಾಗಿದ್ದು 2020-21ರಲ್ಲಿ 1417, 2021-22ರಲ್ಲಿ 2350, 2022-23ರಲ್ಲಿ 2198 ಮಂದಿಯ ಚಾಲನಾ ಪರವಾನಗಿಯನ್ನು ರದ್ದು ಪಡಿಸಲಾಗಿದೆ.
ಗ್ರಾಮೀಣ ಬೈಕ್ ಅಪಘಾತ ಹೆಚ್ಚು : ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ಹೊರತು ಪಡಿಸಿದರೆ ಜಿಲ್ಲೆಯ ಉಳಿದ ಕಡೆ ಸಂಭವಿಸುವ ರಸ್ತೆ ಅವಘಡಗಳಲ್ಲಿ ಬೈಕ್‌ಗಳಿಂದ ಸಂಭವಿಸುವ ಅಪಘಾತಗಳ ಪ್ರಮಾಣ ಹೆಚ್ಚಾ ಗಿದೆ. ಬೈಕ್ ಬೈಕ್‌ಗಳ ನಡುವೆ ಡಿಕ್ಕಿ, ಬೈಕ್‌ಗೆ ಲಘು ಹಾಗೂ ದೊಡ್ಡ ವಾಹನಗಳು ಡಿಕ್ಕಿ ಹೊಡೆಯುವುದರಿಂದ ಸಂಭವಿಸುವ ಅಪಘಾತಗಳು ನೂರಾರು ಪ್ರಾಣಗಳನ್ನು ಬಲಿಪಡೆದಿವೆ. ಬೈಕ್ ಸವಾರರು ಎಚ್ಚೆತ್ತುಕೊಂಡು ಹೆಲ್ಮೆಟ್ ದರಿಸಿ ಪ್ರಯಾಣಿಸುವುದು ಸೂಕ್ತ ಎಂಬುದು ಪೊಲೀಸ್ ಅಧಿಕಾರಿಗಳ ವಿವರಣೆಯಾಗಿದೆ.
– ಸು.ನಾ.ನಂದಕುಮಾರ್