Advertisement
ಪ್ರಾಪರ್ಟಿ ಕಾರ್ಡ್ ವಿತರಣೆಯ ಅವ್ಯವಸ್ಥೆಯನ್ನು ಖಂಡಿಸಿ ಮಂಗಳೂರಿನ ಮಿನಿ ವಿಧಾನಸೌಧದ ಆವರಣದ ಪ್ರಾಪ ರ್ಟಿ ಕಾರ್ಡ್ ವಿತರಣೆ ಕೇಂದ್ರದ ಎದುರು ಬಿಜೆಪಿ ನೇತೃತ್ವದಲ್ಲಿ ಸೋಮವಾರ ನಡೆದ ಪ್ರತಿಭಟನ ಸಭೆಯಲ್ಲಿ ಮಾತನಾಡಿದರು. ಮಂಗಳೂರು ಸಬ್‌ರಿಜಿಸ್ಟ್ರಾರ್ ತಾಲೂಕು, ನಗರದಲ್ಲಿ ಒಟ್ಟು 1,70,000ಕ್ಕೂ ಅಧಿಕ ಆಸ್ತಿಗಳಿದ್ದು, ಈಗ ದೊರಕಿರುವ ಮಾಹಿತಿ ಪ್ರಕಾರ ಕೇವಲ 30,000ರೂ.ಗಳಿಂದ 35,000 ಆಸ್ತಿಗಳಿಗೆ ಮಾತ್ರ ಪ್ರಾಪರ್ಟಿ ಕಾರ್ಡ್ ನೀಡಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಆಸ್ತಿ ಪರಭಾರೆಗೆ ಪ್ರಾಪರ್ಟಿ ಕಾರ್ಡ್ ಅನ್ನು ಕಡ್ಡಾಯಗೊಳಿಸುವಾಗ ಶೇ.80ಕ್ಕೂ ಅಧಿಕ ಜನರಿಗೆ ಪ್ರಾಪರ್ಟಿ ಕಾರ್ಡ್‌ನ್ನು ಜನರಿಗೆ ವಿತರಿಸಲಾಗಿತ್ತು. ಆದರೆ ಜನತೆಯ ತಾಳ್ಮೆಯನ್ನು ಪರಿಶೀಲಿಸಲು ಸರಕಾರವು ಇದನ್ನು ಹೇರಿರುವುದು ಖಂಡನೀಯ ಎಂದರು.
Related Articles
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಮಂಗಳೂರಿನ 32 ಗ್ರಾಮಗಳಲ್ಲಿರುವ ಆಸ್ತಿಗಳ ಪೈಕಿ ಶೇ.75ಕ್ಕಿಂತಲೂ ಅಧಿಕ ಆಸ್ತಿಗಳಿಗೆ ಪ್ರಾಪರ್ಟಿ ಕಾರ್ಡ್ ನೀಡಿದ ನಂತರ ಕಡ್ಡಾಯ ಮಾಡುವುದು ಸಮಂಜಸ. ಆದರೆ, ಮಂಗಳೂರಿನಲ್ಲಿ ಶೇ.20ರಷ್ಟು ಕೂಡ ಪ್ರಾಪರ್ಟಿ ಕಾರ್ಡ್ ನೀಡದೆ ಈಗ ಏಕಾಏಕಿ ಕಡ್ಡಾಯ ಮಾಡುವುದು ಸರಿಯಲ್ಲ. ಯಾವುದೇ ವ್ಯವಸ್ಥೆಗಳನ್ನು ಪೂರ್ಣವಾಗಿ ಮಾಡದೆ ಇದೀಗ ಸರಕಾರ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಮಾಡಲು ಮುಂದಾಗಿರುವುದು ಖಂಡನೀಯ ಎಂದರು.
Advertisement
ಪ್ರಾಪರ್ಟಿ ಕಾರ್ಡ್ ಕಡ್ಡಾಯ ಕ್ರಮ ಜಾರಿನಗರ ವ್ಯಾಪ್ತಿಯಲ್ಲಿ ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಕ್ರಮ ಸೋಮವಾರದಿಂದ ಮತ್ತೆ ಜಾರಿಗೆ ಬಂದಿದೆ. ಮಂಗಳೂರು ನಗರ, ಮಂಗಳೂರು ಗ್ರಾಮಾಂತರ, ಮೂಲ್ಕಿ ಉಪ ನೋಂದಣಿ ಕಚೇರಿಗಳಲ್ಲಿ ಆಸ್ತಿ ಮಾರಾಟ, ನೋಂದಣಿಗೆ ಸೋಮವಾರದಿಂದ ಪ್ರಾಪರ್ಟಿಕಾರ್ಡ್ ಕಡ್ಡಾಯವಾಗಿದೆ. ಕಡ್ಡಾಯಕ್ಕೆ ನೀಡಿದ್ದ ವಿನಾಯತಿ ಜೂ. 10ಕ್ಕೆ ಕೊನೆಗೊಂಡಿದೆ. ಉಪನೋಂದಣಿ ಕಚೇರಿಗಳ ಸರ್ವರ್‌ಗಳಿಗೆ ಪ್ರಾಪರ್ಟಿ ಕಾರ್ಡ್ ಸರ್ವರ್ ಜೋಡಣೆಯಾಗಿದೆ. ಕಾರ್ಡ್ ವಿತರಣೆ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದ್ದು, ಸೋಮವಾರ ಸುಮಾರು 70 ಪ್ರಾಪರ್ಟಿ ಕಾರ್ಡ್‌ಗಳನ್ನು ವಿತರಣೆ ಮಾಡಲಾಗಿದೆ ಎಂದು ಪ್ರಾಪರ್ಟಿ ಕಾರ್ಡ್ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.