Advertisement

ಡಿ.5 ರಿಂದ ಧಾರವಾಡ ಡಿಸಿ ಕಚೇರಿ ಎದುರು ಬಸವರಾಜ ಹೊರಟ್ಟಿ ಉಪವಾಸ ಸತ್ಯಾಗ್ರಹ

12:44 PM Nov 21, 2020 | keerthan |

ಧಾರವಾಡ: ಎನ್. ಎ. ಮುತ್ತಣ್ಣ ಪೊಲೀಸ್ ಮಕ್ಕಳ ವಸತಿ ಶಾಲೆಯ ಶಿಕ್ಷಕರ ವೇತನ ಬಿಡುಗಡೆ ಮಾಡುವುದರ ಜೊತೆಗೆ ಶಾಲೆ ಆರಂಭಿಸಲು ಅನುಮತಿ ನೀಡಬೇಕು ಎಂದು ವಿಧಾನ ಪರಿಷತ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

Advertisement

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ 2020-21 ನೇ ಸಾಲಿನಲ್ಲಿ 125 ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 80 ವಿದ್ಯಾರ್ಥಿಗಳು ಪ್ರವೇಶ ಪಡೆದು ಆನ್ ಲೈನ್ ತರಗತಿಗಳಿಗೆ ಹಾಜರಾಗಿದ್ದಾರೆ. ಆದರೆ ಕಳೆದ ಒಂಬತ್ತು ತಿಂಗಳಿಂದ ಶಾಲೆಯ ಶಿಕ್ಷಕರಿಗೆ ವೇತನವೇ ನೀಡಿಲ್ಲ ಎಂದು ದೂರಿದರು.

ಇದನ್ನೂ ಓದಿ:ನೈಟ್ ಬೀಟ್ ಪೊಲೀಸರ ಕಾರ್ಯಾಚರಣೆ: ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ವಶ; ಇಬ್ಬರು ವಶಕ್ಕೆ

ಈ ಶಾಲೆ ಉಳಿಸಲು ಸಿಎಂ ಭೇಟಿಯಾಗಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲು ಹಾಗೂ ಶಾಲೆಯ ಅನುದಾನ ಬಿಡುಗಡೆ ಮಾಡಲು ಕೋರಿದರೂ ಈವರೆಗೂ ಸ್ಪಂದನೆ ಲಭಿಸಿಲ್ಲ. ಈ ಕಾರಣದಿಂದ ಬೇಸತ್ತು ಡಿ.5 ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next