Advertisement
ಫಾಸ್ಟ್ಯಾಗ್ ಆರಂಭವಾಗುತ್ತಿದ್ದಂತೆ ಸ್ಥಳೀಯರಿಗೆ ಇದುವರೆಗೆ ನೀಡುತ್ತಿದ್ದ ಉಚಿತ ಪ್ರವೇಶ ರದ್ದುಪಡಿಸುವ ಹುನ್ನಾರ ನಡೆಯುತ್ತಿದೆ ಮತ್ತು ಸ್ಥಳೀಯರು ಹಾಗೂ ಫಾಸ್ಟ್ಯಾಗ್ ಇಲ್ಲದ ವಾಹನಗಳನ್ನು ಒಂದೇ ಗೇಟ್‌ನಲ್ಲಿ ಬಿಡಲಾಗುತ್ತದೆ. ಇದರಿಂದ ವಾಹನದಟ್ಟನೆ ಹೆಚ್ಚಿ ತಾಸು ಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಉಂಟಾಗಲಿದೆ. ಆದ್ದರಿಂದ ಸ್ಥಳೀಯ ಗೆ ಪ್ರತ್ಯೇಕ ಗೇಟ್ ವ್ಯವಸ್ಥೆ ಮಾಡಬೇಕು ಎಂದು ಜಾಗೃತಿ ಸಮಿತಿ ಅಧ್ಯಕ್ಷ ಪ್ರತಾಪ್ ಶೆಟ್ಟಿ ತಿಳಿಸಿದರು.
ಸ್ಥಳೀಯರಿಗೆ ನೀಡಲಾದ ಉಚಿತ ಪ್ರವೇಶ ರದ್ದುಪಡಿಸಿದರೆ ಮತ್ತು ಎಲ್ಲ ವಾಹನಗಳಿಗೆ ಒಂದೇ ಗೇಟ್‌ನಲ್ಲಿ ಪ್ರವೇಶಕ್ಕೆ ಅವಕಾಶ ನೀಡಿ ಟ್ರಾಫಿಕ್ ಜಾಮ್ ಉಂಟಾದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಲಾಯಿತು. ರಾ.ಹೆ. ಪ್ರಾಧಿಕಾರದ ಗಮನಕ್ಕೆ
ಫಾಸ್ಟ್ಯಾಗ್‌ಗೆ ಸಂಬಂಧಿಸಿ ಎಲ್ಲ ನಿರ್ಧಾರಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಕೈಗೊಳ್ಳುವುದರಿಂದ ಸಮಸ್ಯೆಯನ್ನು ಇಲಾಖೆಯ ಗಮನಕ್ಕೆ ತರಲಾಗುವುದು ಮತ್ತು ಅಲ್ಲಿನ ಆದೇಶದಂತೆ ಮುಂದುವರಿಯಲಾಗುವುದು ಎಂದು ಟೋಲ್‌ನ ನಿರ್ವಾಹಕ ಕೇಶಮೂರ್ತಿ ತಿಳಿಸಿದರು.
Related Articles
Advertisement
ಟೋಲ್ ನಿರ್ವಾಹಕರಿಗೆ ಮನವಿ ಮಾಡುತ್ತಿರುವ ಜಾಗೃತಿ ಸಮಿತಿಯ ಸದಸ್ಯರು.