ಹಾಸನ: ಇಂಧನ ಬೆಲೆ ಏರಿಕೆ ನಡುವೆಯೇ ಹೆದ್ದಾರಿಗಳಲ್ಲಿ ಫಾಸ್ಟ್ಯಾಗ್ ಕಡ್ಡಾಯ ಮಾಡಿರುವ ಕೇಂದ್ರ ಸರ್ಕಾರದ ನಡೆಗೆ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರು – ಮಂಗಳೂರು ರಾಷ್ಟೀಯ ಹೆದ್ದಾರಿ-75 ರಲ್ಲಿ ಹಾಸನ ತಾಲೂಕು ಶಾಂತಿಗ್ರಾಮದ ಬಳಿ ಇರುವ ಟೋಲ್‌ಗೇಟ್‌ನಲ್ಲಿ ಫಾಸ್ಟ್ಯಾಗ್ ಕಡ್ಡಾಯ ವಾದ ಮೊದಲ ದಿನ ಫಾಸ್ಟ್ಯಾಗ್‌ಇಲ್ಲದ ಪಾತ್‌ನಲ್ಲಿ ದುಪ್ಟಟ್ಟು ಶುಲ್ಕ ನೀಡಿ ವಾಹನಗಳು ಸಂಚರಿಸಿದವು. ವಾಹನ ಚಾಲಕರು ಕೇಂದ್ರ ಸರ್ಕಾರ ಕ್ರಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ರಸ್ತೆಗಳ ಟೋಲ್‌ಗೇಟ್‌ನಲ್ಲಿ ಶುಲ್ಕ ಪಾವತಿಗೆ ಡಿಜಿಟಲ್ ಫಾಸ್ಟ್ಯಾಗ್ ಬಳಕೆ ಕಡ್ಡಾಯ ಮಾಡಿದ್ದು, ಫಾಸ್ಟ್ಯಾಗ್ ಬಳಸದಿದ್ದರೆ ದುಪ್ಟಟ್ಟು ಶುಲ್ಕ ಪಾವತಿಸಬೇಕು ಎಂಬುದು ವಾಹನ ಚಾಲಕರಿಗೆ ಅನಗತ್ಯ ಹೊರೆ.ಪೆಟ್ರೋಲ್, ಡೀಸೆಲ್ ದರ ದಿನೇ ದಿನೆ ಏರುತ್ತಿದೆ. ಪೆಟ್ರೋಲ್ ದರ 100 ರೂ. ಸನಿಹದಲ್ಲಿದೆ. ಡೀಸೆಲ್ ದರ ಏರಿಕೆಯಿಂದ ದಿನಬಳಕೆ ವಸ್ತುಗಳ ದರ ಏರುತ್ತಿದೆ. ಗಾಯದ ಮೇಲೆ ಬರೆ ಎಂಬಂತೆ ಅಡುಗೆ ಅನಿಲದ ದರ ಒಂದೇ ಬಾರಿ 50 ರೂ. ಏರಿದೆ. ಜನಸಾಮಾನ್ಯರ ಬದುಕು ದುಸ್ತರವಾಗಿದೆ ಎಂದು ಚಾಲಕರ ತಮ್ಮ ಅಳಲು ತೋಡಿಕೊಂಡರು.
ಪ್ರಧಾನಿ ಹೇಳಿಕೆಗೆ ವ್ಯಂಗ್ಯ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜಿಡಿಪಿಯನ್ನು ಮೇಲೆತುತ್ತೇವೆ ಎಂದು ಹೇಳುತ್ತಿದ್ದರು. ಜಿಡಿಪಿ ಎಂದರೆ ಗ್ಯಾಸ್, ಡೀಸೆಲ್, ಪೆಟ್ರೋಲ್ ಏರಿಸುತ್ತೇವೆ ಎಂಬರ್ಥದಲ್ಲಿ ಮೋದಿ ಹೇಳಿದ್ದರು. ನಮಗೆ ಆಗ ಅರ್ಥವಾಗಿರಲಿಲ್ಲ. ಈಗ ಅರ್ಥವಾಗುತ್ತಿದೆ ಎಂದು ಕೆಲವು ವಾಹನಗಳ ಚಾಲಕರು ವ್ಯಂಗ್ಯವಾಡಿದರು.
ವಾಹನಗಳನ್ನು ಖರೀದಿಸುವಾಗ ಮಾಲಿಕರು ರೋಡ್ ಟ್ಯಾಕ್ಸ್ ಕಟ್ಟಿರುತ್ತಾರೆ. ಆದರೂ, ರಸ್ತೆಗಳಲ್ಲಿ ಸಂಚರಿಸುವ ವಾಹನಗಳಿಂದ ಟೋಲ್ ಶುಲ್ಕ ವಸೂಲಿ ಏಕೆ ಎಂದು ಪ್ರಶ್ನಿಸುತ್ತಿರುವ ವಾಹನ ಚಾಲಕರು, ರೋಡ್ ಟ್ಯಾಕ್ಸ್ ಅಥವಾ ಟೋಲ್ ಶುಲ್ಕದಲ್ಲಿ ಯಾವುದಾದರೊಂದನ್ನು ಸರ್ಕಾರ ರದ್ದು ಮಾಡಬೇಕು ಎಂದು ಆಗ್ರಹಪಡಿಸಿದರು.
ಶಾಂತಿಗ್ರಾಮದ ಎಲ್ಲ ಎಂಟು ದ್ವಾರಗಳಿಗೂ ಈಗ ಫಾಸ್ಟ್ಯಾಗ್‌ಅವಳಡಿಸಲಾಗಿದೆ. ಫಾಸ್ ಟ್ಯಾಂಗ್ ಅಳವಡಿಸಿಕೊಳ್ಳದ ಕೆಲವು ವಾಹನ ಚಾಲಕರು ದುಪ್ಟಟ್ಟು ಶುಲ್ಕ ಪಾವತಿಸಿ ಮುಂದೆ ಸಾಗಿದರೆ, ಕೆಲವು ವಾಹನಗಳ ಚಾಲಕರು ಟೋಲ್‌ಗೇಟ್ ಸಮೀಪವೇ ಫಾಸ್ಟ್ಯಾಗ್ ಅಳವಡಿಸಿಕೊಳ್ಳಲು ಪರದಾಡುತ್ತಿದ್ದರು