Advertisement

ಫಾಸ್ಟ್ಯಾಗ್ ಸಮಸ್ಯೆ: ತಲಪಾಡಿಯಲ್ಲಿ ಬಸ್‌ ಪ್ರಯಾಣಿಕರ ಪಾದಯಾತ್ರೆ!

11:09 PM Feb 16, 2020 | Sriram |

ಕುಂಬಳೆ: ಮಂಗಳೂರಿನಿಂದ ಕಾಸರಗೋಡಿಗೆ ಮತ್ತು ಕಾಸರಗೋಡಿನಿಂದ ಮಂಗಳೂರಿಗೆ ಖಾಸಗಿ ಬಸ್ಸುಗಳಲ್ಲಿ ತೆರಳುವ ಪ್ರಯಾಣಿಕರು ಪ್ರಕೃತ ತಲಪಾಡಿಯಲ್ಲಿ ಅತ್ತಿಂದಿತ್ತ ರಸ್ತೆಯಲ್ಲಿ ಸುಮಾರು 200 ಮೀಟರ್‌ ಪಾದಯಾತ್ರೆ ಮಾಡಬೇಕಾಗಿದೆ.

Advertisement

ವಾಹನಗಳಿಗೆ ಫಾಸ್ಟ್ಯಾಗ್ ವ್ಯವಸ್ಥೆಯ ಬಳಿಕ ತಲಪಾಡಿ ಟೋಲ್‌ಗೇಟ್‌ ನಲ್ಲಿ ಈ ದುರವಸ್ಥೆ ಉಂಟಾಗಿದೆ.ಈ ಹಿಂದೆ ಮಂಗಳೂರು ಖಾಸಗಿ ಬಸ್ಸುಗಳು ಮೇಲಿನ ತಲಪಾಡಿ ತನಕ ಆಗಮಿಸಿ ಪ್ರಯಾ ಣಿಕರನ್ನು ಇಳಿಸುತ್ತಿದ್ದವು. ಫಾಸ್ಟ್ಯಾಗ್ ವ್ಯವಸ್ಥೆಯ ಬಳಿಕ ತಲಪ್ಪಾಡಿ ಟೋಲ್‌ನಲ್ಲಿ ಕಾನೂನಿನ ಅಡ್ಡಿಯಿಂದಾಗಿ ಇದೀಗ ಮಂಗಳೂರಿನಿಂದ ಆಗಮಿಸಿದ ಖಾಸಗಿ ಬಸ್ಸುಗಳು ಪ್ರಯಾಣಿಕರನ್ನು ತಲಪಾಡಿ ಟೋಲ್‌ ಗೇಟ್‌ ಬಳಿಯಲ್ಲಿ ಇಳಿಸುವುದು. ಅಲ್ಲಿಂದ ಪ್ರಯಾಣಿಕರು ಕಾಸರಗೋಡು ಬಸೇÕರಲು ಗಂಟು ಮೂಟೆ ಹೊತ್ತು ಮೇಲಿನ ತಲಪ್ಪಾಡಿಗೆ ಪಾದಯಾತ್ರೆ ಬೆಳೆಸಬೇಕಾಗಿದೆ.ಲಗೇಜ್‌ ಹೊಂದಿದವರು ಮತ್ತು ಮಕ್ಕಳನ್ನು ಹೊತ್ತ ಮಹಿಳೆಯರ ಪಾಡಂತೂ ಹೇಳತೀರದು.ಕಾಸರಗೋಡಿನಿಂದ ಖಾಸಗಿ ಬಸ್ಸುಗಳಲ್ಲಿ ಆಗಮಿಸಿದ ಪ್ರಯಾಣಿಕರೂ ಇದೇ ರೀತಿ ಮೇಲಿನಿಂದ ಕೆಳಗಿನ ತಲಪಾಡಿ ಟೋಲ್‌ ಗೇಟಿನ ತನಕ ಸುಡು ಬಿಸಿಲಿಗೆ ನಡೆಯಬೇಕಾಗಿದೆ. ಇದೇ ರೀತಿ ಮುಂದುವರಿದಲ್ಲಿ ಮಳೆಗಾಲದ ಪಾಡಂತೂ ಹೇಳತೀರದು.

ತಲಪಾಡಿ ಟೋಲ್‌ ಗೇಟ್‌ ದಾಟಿದ ಬಸ್ಸುಗಳು ಕೇರಳಕ್ಕೆ ಪ್ರಯಾಣ ಬೆಳೆಸಿದಲ್ಲಿ ಫಾಸ್ಟ್ಯಾಗ್ ಮೂಲಕ ಹೇರಳ ಶುಲ್ಕ ಪಾವತಿಯಾಗುವ ಸಮಸ್ಯೆಯನ್ನು ತಪ್ಪಿಸಲು ಮಂಗಳೂರಿನಿಂದ ಆಗಮಿಸುವ ಬಸ್ಸುಗಳು ಟೋಲ್‌ ಗೇಟ್‌ ತನಕ ಮಾತ್ರ ಪ್ರಯಾಣ ಬೆಳೆಸುವುದರಿಂದ ಈ ಸಮಸ್ಯೆ ಸೃಷ್ಟಿಯಾಗಿದೆ. ಪ್ರಯಾಣಿಕರ ಈ ಗಂಭೀರ ಸಮಸ್ಯೆಯತ್ತ ಯಾವ ರಾಜಕೀಯ ಪಕ್ಷಗಳೂ ಈ ತನಕ ಸ್ಪಂದಿಸಿಲ್ಲ, ಮಾತ್ರವಲ್ಲ ಪ್ರಬಲ ಪ್ರತಿಭಟನೆ ನಡೆಸಿಲ್ಲವೆಂಬ ಆರೋಪ ಪ್ರಯಾಣಿಕರದು. ಕೇವಲ ಪತ್ರಿಕೆಯ ಹೇಳಿಕೆಗೆ ಮಾತ್ರ ಇವರ ಮಾತು ಸೀಮಿತವಾಗಿದೆ.ಆದುದಿಂದ ಸಮಸ್ಯೆಗೆ ಪರಿಹಾರವಾಗಬೇಕಾಗಿದೆ.

ಪರಿಹರಿಸಬೇಕಿದೆ
ಈ ಜಟಿಲ ಸಮಸ್ಯೆಯಿಂದ ಪ್ರಯಾಣಿಕರು ಸಂಕಷ್ಟ ಪಡುವಂತಾಗಿದೆ.ಖಾಸಗಿ ಬಸ್ಸಿಗೆ ಪ್ರಯಾಣಿಕರ ಸಂಖ್ಯೆ ಕುಂಠಿತವಾಗಿದೆ.ಸಮಸ್ಯೆಯನ್ನು ಸಂಬಂಧಪಟ್ಟವರು ಪರಿಹರಿಸಬೇಕಿದೆ.
-ಸಾಂತ ಆಳ್ವ ಬಳ್ಳಂಬೆಟ್ಟು,
ಖಾಸಗಿ ಬಸ್‌ ನಿರ್ವಾಹಕ

ಸ್ಪಂದಿಸಿಲ್ಲ
ಪ್ರಯಾಣಿಕರ ಅನನು ಕೂಲತೆಯ ಈ ಸಮಸ್ಯೆಯತ್ತ ಚುನಾಯಿತರಾಗಲಿ,ರಾಜಕೀಯ ಪಕ್ಷಗಳಾಗಲಿ ಸ್ಪಂದಿಸಿಲ್ಲ. ಚುನಾವಣೆಯ ಕಾಲವಾಗಿದ್ದಲ್ಲಿ ಮೊಸಳೆ ಕಣ್ಣೀರಿನ ಮೂಲಕ ಇಲ್ಲಿಗೆ ದೌಡಾಯಿಸಿ ಬಂದು ಸಮಸ್ಯೆಗೆ ಸ್ಪಂದಿಸುತ್ತಿದ್ದರೇನೋ?
– ಸಂತೋಶ್‌ ಕುಮಾರ್‌ ಮಂಜೇಶ್ವರ, ನಿತ್ಯ ಪ್ರಯಾಣಿಕ

Advertisement
Advertisement

Udayavani is now on Telegram. Click here to join our channel and stay updated with the latest news.

Next