Advertisement
ಉಡುಪಿ ಜಿಲ್ಲೆಯ ಹೆಜಮಾಡಿ, ತಲಪಾಡಿ ಮತ್ತು ಸಾಸ್ತಾನ ಹಾಗೂ ದ.ಕ. ಜಿಲ್ಲೆಯ ಬ್ರಹ್ಮರಕೂಟ್ಲು, ಸುರತ್ಕಲ್ ಟೋಲ್ ಪ್ಲಾಝಾಗಳಲ್ಲಿ ಪ್ರಾಯೋಗಿಕ ಫಾಸ್ಟಾಗ್ ಆರಂಭಿಸಲಾಗಿದೆ. ಸೂಚನಾ ಫಲಕ ಅಳವಡಿಸಿ, ವಾಹನ ಸವಾರರಿಗೆ ಕರಪತ್ರ ವಿತರಿಸಿ ಮಾಹಿತಿ ನೀಡಲಾಗುತ್ತಿದೆ.
ರೇಡಿಯೊ ಫ್ರೀ ಐಡೆಂಟಿಫಿಕೇಷನ್ (ಆರ್‌ಎಫ್‌ಐಡಿ) ಹೊಂದಿರುವ ” ಫಾಸ್ಟ್ಯಾಗ್’ ಅಳವಡಿಸಿದ ವಾಹನ ಟೋಲ್ ಬೂತ್‌ಗೆ ಆಗಮಿಸುತ್ತಿದ್ದಂತೆ ಟ್ಯಾಗ್ ಸ್ಕ್ಯಾನ್ ಆಗಿ ಖಾತೆಯಿಂದ ನಿಗದಿತ ಶುಲ್ಕ ಕಡಿತಗೊಳ್ಳುತ್ತದೆ. ಉಡುಪಿ, ದ.ಕ. ಜಿಲ್ಲೆಯಲ್ಲಿ ನಿತ್ಯ ಸಂಚರಿಸುವ ಶೇ. 30ಷ್ಟು ವಾಹನಗಳು ಈಗಾಗಲೇ ಫಾಸ್ಟ್ಯಾಗ್ ಅಳವಡಿಸಿಕೊಂಡಿವೆ. ಹೊಸ ವಾಹನಗಳ ಖರೀದಿ ವೇಳೆಗೆ ಫಾಸ್ಟ್ಯಾಗ್ ಅಳವಡಿಕೆ ಈಗಾಗಲೇ ಕಡ್ಡಾಯವಾಗಿದೆ.
Related Articles
ಎಲ್ಲ ಟೋಲ್ ಪ್ಲಾಜಾಗಳಲ್ಲಿ, ಆಯ್ದ ಬ್ಯಾಂಕ್ ಶಾಖೆಗಳಲ್ಲಿ ಫಾಸ್ಟ್ಯಾಗ್ ಅಳವಡಿಸಿಕೊಡಲಾಗುತ್ತದೆ. ಮೈಫಾಸ್ಟಾಗ್, ಫಾಸ್ಟ್ಯಾಗ್ ಪಾರ್ಟನರ್, ಫಾಸ್ಟ್ಯಾಗ್ ಮುಂತಾದ ಹಲವಾರು ಆ್ಯಪ್‌ಗ್ಳಿವೆ. ಪೇಟಿಎಂ, ಗೂಗಲ್ ಪೇಗಳಲ್ಲೂ ಈ ವ್ಯವಸ್ಥೆ ಇದೆ.
Advertisement
ಸಮಯ ಉಳಿತಾಯ; ಕಾರ್ಮಿಕರಿಗೆ ಚಿಂತೆಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡಲ್ಲಿ ಸಮಯದ ಉಳಿತಾಯದ ಜತೆಗೆ ಚಿಲ್ಲರೆ ಸಮಸ್ಯೆಗೂ ಮುಕ್ತಿ ದೊರೆಯಲಿದೆ. ಆದರೆ ಟೋಲ್‌ನಲ್ಲಿ ಇದುವರೆಗೆ ಕಾರ್ಯ ನಿರ್ವಹಿಸುತ್ತಿದ್ದ ಸಿಬಂದಿಗೆ ಉದ್ಯೋಗ ನಷ್ಟದ ಭೀತಿ ಎದುರಾಗಲಿದೆ. ಉಡುಪಿ ಜಿಲ್ಲೆಯ ಹೆಜಮಾಡಿ, ಸಾಸ್ತಾನ ಹಾಗೂ ದ.ಕ. ಜಿಲ್ಲೆಯ ತಲಪಾಡಿ, ಬ್ರಹ್ಮರಕೂಟ್ಲು, ಎನ್‌ಐಟಿಕೆ ಟೋಲ್ ಪ್ಲಾಝಾಗಳಲ್ಲಿ ಪ್ರಾಯೋಗಿಕ ಫಾಸ್ಟಾಗ್ ಆರಂಭಿಸಲಾಗಿದೆ. ಡಿ. 1ರಿಂದ ಕಡ್ಡಾಯವಾಗಿ ಜಾರಿಯಾಗಲಿದೆ.
– ಶಿಶುಪಾಲನ್, ಉಭಯ ಜಿಲ್ಲೆಗಳ , ಎನ್‌ಎಚ್‌ಎಐ ಪ್ರಾಜೆಕ್ಟ್ ಡೈರೆಕ್ಟರ್ ಹೆಜಮಾಡಿ, ತಲಪಾಡಿ ಮತ್ತು ಸಾಸ್ತಾನ ಟೋಲ್‌ಗಳಲ್ಲಿ ಫಾಸ್ಟಾಗ್ ಪ್ರಾಯೋಗಿಕ ಪ್ರಕ್ರಿಯೆ ನಡೆಯುತ್ತಿದೆ. ಡಿ.1ರಿಂದ ಈ ಮೂರೂ ಟೋಲ್‌ಗಳಲ್ಲಿ ಒಂದು ಗೇಟ್ ವಿನಾ ಮಿಕ್ಕೆಲ್ಲ ಕ್ಯಾಶ್‌ಲೆಸ್ ಆಗಲಿವೆ.
– ಶಿವಪ್ರಸಾದ್ ರೈ, ಹೆಜಮಾಡಿ, ತಲಪಾಡಿ, ಸಾಸ್ತಾನ ಟೋಲ್ ಮ್ಯಾನೇಜರ್