ಕೋಟ: ಎಲ್ಲ ಟೋಲ್‌ಪ್ಲಾಜಾಗಳಲ್ಲಿ ಫಾಸ್ಟ್ಯಾಗ್ ಕಡ್ಡಾಯಗೊಳ್ಳುತ್ತಿದ್ದು ಸ್ಥಳೀಯರಿಗೆ ನೀಡಲಾಗುತ್ತಿರುವ ವಿನಾಯಿತಿಯನ್ನು ರದ್ದುಗೊಳಿಸಲಾಗುತ್ತಿದೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸಾಸ್ತಾನ ಹೆದ್ದಾರಿ ಜಾಗೃತಿ ಸಮಿತಿ ಹೋರಾಟಕ್ಕೆ ಕರೆ ನೀಡಿದೆ. ಹೀಗಾಗಿ ಟೋಲ್‌ನ ಅಧಿಕಾರಿಗಳು, ಜಾಗೃತಿ ಸಮಿತಿ ಸದಸ್ಯರೊಂದಿಗೆ ಕೋಟ ಪೊಲೀಸ್ ಠಾಣೆಯಲ್ಲಿ ಫೆ. 14ರಂದು ಸೌಹಾರ್ದ ಸಭೆ ನಡೆಯಿತು.
ಇದುವರೆಗೂ ಸ್ಥಳೀಯರಿಗೆ ನೀಡಿರುವ ಸುಂಕ ವಿನಾಯಿತಿ ಮುಂದು ವರಿಸಬೇಕು. ಯಾವುದೇ ಕಾರಣಕ್ಕೂ ಸ್ಥಳೀಯರಿಂದ ಟೋಲ್ ಸಂಗ್ರಹಿಸು ವುದಕ್ಕೆ ನಮ್ಮ ವಿರೋಧವಿದ್ದು ಹೋರಾಟ ನಡೆಸುವುದಾಗಿ ಹೆದ್ದಾರಿ ಸಮಿತಿಯ ಸದಸ್ಯರು ತಿಳಿಸಿದರು.
ಫಾಸ್ಟಾಗ್ ಕಡ್ಡಾಯಗೊಂಡ ಮೇಲೆ ಸ್ಥಳೀಯರಿಗೆ ರಿಯಾಯಿತಿ ನೀಡುವುದು ಅಸಾಧ್ಯ ಎಂದು ಟೋಲ್ ಅಧಿಕಾರಿಗಳು ತಿಳಿಸಿದರು.
ಟೋಲ್ ವಿನಾಯಿತಿ ರದ್ದುಮಾಡುವ ನಿಯಮ ಜಿಲ್ಲಾ ಮಟ್ಟದ ಜನಪ್ರತಿನಿ ಧಿ ಗಳ, ಅ ಧಿಕಾರಿಗಳ ದಿಶಾ ಮೀಟಿಂಗ್ ನಲ್ಲಿ ನಿರ್ಧಾರವಾಗಬೇಕೇ ಹೊರತು ಯಾವುದೇ ಕಾರಣಕ್ಕೂ ಏಕಾಏಕಿ ಸುಂಕ ವಸೂಲಿಯಾಗಬಾರದು ಎಂದು ಹೆದ್ದಾರಿ ಜಾಗೃತಿ ಸಮಿತಿಯವರು ಎಚ್ಚರಿಕೆ ನೀಡಿದರು. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಮುಂದುವರಿಯುವಂತೆ ಬ್ರಹ್ಮಾವರ ವೃತ್ತ ನಿರೀಕ್ಷಕ ಆನಂತ ಪದ್ಮನಾಭ, ಕೋಟ ಠಾಣಾಧಿಕಾರಿ ಸಂತೋಷ್ ಬಿ. ತಿಳಿಸಿದರು.
ಹೆದ್ದಾರಿ ಜಾಗೃತಿ ಸಮಿತಿಯ ಮಾಜಿ ಅಧ್ಯಕ್ಷ ಪ್ರತಾಪ್ ಶೆಟ್ಟಿ, ಕಾರ್ಯದರ್ಶಿ ಅಲ್ವಿನ್ ಅಂದ್ರಾದೆ, ನಾಗರಾಜ್ ಗಾಣಿಗ, ವಿಟuಲ ಪೂಜಾರಿ, ಮೂರು ಟೋಲ್‌ಗಳ ಪ್ರಬಂಧಕ ಶಿವಪ್ರಸಾದ್ ರೈ, ಬಶೀರ್ ಉಪಸಿªತರಿದ್ದರು.