Advertisement

ರೈತರಿಗೆ ಶೀಘ್ರ ಹಿಂಗಾರು ಬೆಳೆ ವಿಮೆ: ಸಚಿವ ಕೃಷ್ಣ ಬೈರೇಗೌಡ

10:46 AM Jun 20, 2017 | Team Udayavani |

ವಿಧಾನಸಭೆ: ರಾಜ್ಯದ ರೈತರಿಗೆ ಶೀಘ್ರವೇ 1100 ಕೋಟಿ ರೂ. ಹಿಂಗಾರು ಬೆಳೆ ವಿಮೆ ಬರುವ ನಿರೀಕ್ಷೆ ಇದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ವಿಧಾನಸಭೆಯಲ್ಲಿ ಬೇಡಿಕೆ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು,
ಈಗಾಗಲೇ ಮುಂಗಾರು ಹಂಗಾಮಿನ 1100 ಕೋಟಿ ರೂ. ಬೆಳೆ ವಿಮೆ ಹಾಗೂ 1600 ಕೋಟಿ ಇನ್‌ಪುಟ್‌ ಸಬ್ಸಿಡಿ
ಹಣವನ್ನು ರೈತರಿಗೆ ನೇರವಾಗಿ ಬಿಡುಗಡೆ ಮಾಡಲಾಗಿದೆ. ಹಿಂಗಾರು ಇನ್‌ಪುಟ್‌ ಸಬ್ಸಿಡಿಗೆ ಕೇಂದ್ರ ಸರ್ಕಾರಕ್ಕೆ 3310
ಕೋಟಿ ರೂ.ಗೆ ಮನವಿ ಮಾಡಿದ್ದೇವೆ. ಕೇಂದ್ರದಿಂದ ಇನ್ನೂ ಹಣ ಬಿಡುಗಡೆಯಾಗಿಲ್ಲ ಎಂದರು.

Advertisement

ರೈತರಿಗೆ ಸಾವಯವ ಕೃಷಿ, ಸಿರಿ ಧಾನ್ಯ ಬೆಳೆಯಲು ಹೆಚ್ಚಿನ ಪೋ›ತ್ಸಾಹ ನೀಡಲಾಗುತ್ತಿದೆ. ರಾಜ್ಯದಲ್ಲಿ 18 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಮತ್ತು ಜೋಳ ಬೆಳೆಯಲಾಗುತ್ತಿದೆ. ಅದನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ರಾಗಿ ಮತ್ತು ಜೋಳಕ್ಕೆ ಪತ್ರಿ ವರ್ಷ ಮಾರುಕಟ್ಟೆ ದರದ ಮೇಲೆ 400 ರೂ.ಸಹಾಯಧನ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿದರು.

ಸಿರಿ ಧಾನ್ಯಗಳ ಬೆಳೆಯಲು ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದ್ದು, ನವಣೆ, ಸಜ್ಜೆ, ಅರ್ಕಾ ಬೆಳೆಯುವ ಪ್ರದೇಶವನ್ನು
ದ್ವಿಗುಣಗೊಳಿಸಲು ತೀರ್ಮಾನಿಸಲಾಗಿದೆ. ಅಲ್ಲದೇ ದ್ವಿದಳ ಧಾನ್ಯಗಳ ಬೆಳೆ ಹೆಚ್ಚಳಗೊಳಿಸಿ ಅವುಗಳನ್ನು ಪಡಿತರ
ವ್ಯವಸ್ಥೆಯಲ್ಲಿ ತರಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ತಂತ್ರಜಾnನ ಆಧಾರಿತ ಮಾಹಿತಿ:
ತಂತ್ರಜಾnನ ಬಳಸಿಕೊಂಡು ಗ್ರಾಪಂ ಮೂಲಕ ರೈತರಿಗೆ ಹವಾಮಾನ ಮಾಹಿತಿ ನೀಡಲಾಗುತ್ತಿದೆ. 25 ಲಕ್ಷ ರೈತರಿಗೆ ಮಾಹಿತಿ ಒದಗಿಸಲಾಗುತ್ತಿದೆ. ರೈತರ ವಾಟ್ಸ್‌ಆ್ಯಪ್‌ ಗ್ರೂಪ್‌ಗ್ಳನ್ನು ಮಾಡಲಾಗಿದ್ದು, ಬೆಳೆಗಳ ಮಾಹಿತಿಯನ್ನು ಕಾಲ ಕಾಲಕ್ಕೆ ರೈತರಿಗೆ ಒದಗಿಸಲಾಗುತ್ತಿದೆ ಎಂದರು.

ರಾಜ್ಯದ ಎಲ್ಲ ರೈತರಿಗೂ ಮಣ್ಣಿನ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲು ನಿರ್ಧರಿಸಲಾಗಿದೆ. ಪ್ರತಿ ರೈತರ ಹೊಲದ
ಮಣ್ಣಿನ ಗುಣಮಟ್ಟ ಪರೀಕ್ಷಿಸಿ ಕಾರ್ಡ್‌ ನೀಡಲಾಗುತ್ತಿದೆ. ಒಂದು ವರ್ಷದಲ್ಲಿ ರಾಜ್ಯದ ಎಲ್ಲ ರೈತರಿಗೂ ಮಣ್ಣಿನ ಗುಣ
ಮಟ್ಟದ ಕಾರ್ಡ್‌ ನೀಡಲಾಗುವುದು. ಇದರಿಂದ ರೈತರು ತಮ್ಮ ಬೆಳೆಗಳಿಗೆ ಅಗತ್ಯವಿರುಷ್ಟು ಗೊಬ್ಬರ ನೀಡಲು
ಅನುಕೂಲವಾಗಲಿದೆ ಎಂದು ಅವರು ಹೇಳಿದರು. 

Advertisement

ವಿದ್ಯುತ್‌ ಚಾಲಿತ ವಾಹನಗಳಿಗೆ ಚಾರ್ಜಿಂಗ್‌ ಸ್ಟೇಶನ್‌
ವಿಧಾನಸಭೆ:
ಪೆಟ್ರೋಲ್‌ ಬಂಕ್‌ ಮಾದರಿಯಲ್ಲಿ ವಿದ್ಯುತ್‌ ಚಾಲಿತ ವಾಹನಗಳಿಗೆ ಚಾರ್ಜಿಂಗ್‌ ಸ್ಟೇಶನ್‌ಗಳನ್ನು ರಾಜ್ಯದಲ್ಲಿ ತೆರೆಯಲಾಗುವುದು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ. ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ಚಾರ್ಜಿಂಗ್‌ ಸ್ಟೇಶನ್‌ ಆರಂಭಿಸಲು ಹೊಸ ನೀತಿ ಜಾರಿಗೆ ತರಲಾಗುತ್ತಿದೆ. ಈಗಾಗಲೇ ಈ ಕುರಿತು ವರದಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದು ಭವಿಷ್ಯದಲ್ಲಿ ಸಾಕಷ್ಟು
ಉಪಯುಕ್ತವಾಗಲಿದೆ. ದೇಶದಲ್ಲಿಯೇ ಇದು ಮೊದಲ ಪ್ರಯತ್ನವಾಗ ಲಿದೆ ಎಂದರು.

ಬರಗಾಲದಲ್ಲಿಯೂ ರಾಜ್ಯದಲ್ಲಿ ವಿದ್ಯುತ್‌ ಕೊರತೆಯಾಗದಂತೆ ಕ್ರಮಕೈಗೊಳ್ಳಲಾಗಿದೆ. ಬೆಂಗಳೂರು ಸೇರಿ ವಿವಿಧೆಡೆ 16 ತಾಸು, ಉತ್ತರ ಕರ್ನಾಟಕದಲ್ಲಿ 8 ತಾಸು 3 ಫೇಸ್‌ ವಿದ್ಯುತ್‌ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಬಿಜೆಪಿ ಅವಧಿಯಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದ್ದ ಛತ್ತೀಸ್‌ಘಡ ವಿದ್ಯುತ್‌ ಸ್ಥಾವರ ಸ್ಥಾಪನೆಗೆ ಕೋಲ್‌ ಬ್ಲಾಕ್‌ಗಾಗಿ ಅರ್ಜಿ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ಕಲ್ಲಿದ್ದಲು ನೀಡಲು ಒಪ್ಪಿದೆ ಎಂದು ಹೇಳಿದರು.

ರಾಯಚೂರಿಗೆ 24 ತಾಸು ವಿದ್ಯುತ್‌ ನೀಡಲು ಆಗ್ರಹ: ರಾಯಚೂರು ಎರಮರಸ್‌ ಕಲ್ಲಿದ್ದಲು ಘಟಕ ಸ್ಥಾಪನೆಗೆ ಜಮೀನು
ನೀಡಿದ ರೈತರ ಮಕ್ಕಳಿಗೆ ಉದ್ಯೋಗ ನೀಡಬೇಕು ಹಾಗೂ ರಾಯಚೂರು ತಾಲೂಕಿಗೆ 24 ಗಂಟೆ ವಿದ್ಯುತ್‌ ನೀಡುವಂತೆ
ಶಿವರಾಜ್‌ ಪಾಟೀಲ್‌ ಆಗ್ರಹಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ರೈತರ ಖಾತೆಗಳಲ್ಲಿ ವ್ಯತ್ಯಾಸವಾಗಿರುವುದರಿಂದ ಉದ್ಯೋಗ ನೀಡುವಲ್ಲಿ ಸಮಸ್ಯೆಯಾಗಿದೆ. ಕೆಐಎಡಿಬಿ ಬೇರೆ ಬೇರೆ ಕಾರಣಗಳಿಗೆ ಜಮೀನು ವಶ ಪಡಿಸಿಕೊಂಡಿರುವುದರಿಂದ ಉದ್ಯೋಗ ನೀಡಲು ಸಮಸ್ಯೆಯಾಗಿದೆ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next