ಹೊಸದಿಲ್ಲಿ/ನಾಗ್ಪುರ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫೆ. 16ರಿಂದ ಫಾಸ್ಟ್ಯಾಗ್ ಮೂಲಕ ಟೋಲ್ ಪಾವತಿ ಕಡ್ಡಾಯ. ಫಾಸ್ಟಾಗ್ ಅಳವಡಿಸಿ ಕೊಳ್ಳದಿದ್ದರೆ 2 ಪಟ್ಟು ಟೋಲ್ ಪಾವ ತಿಸಬೇಕು ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯ ರವಿವಾರ ಆದೇಶ ಹೊರಡಿಸಿದೆ. ಸೋಮವಾರ ಮಧ್ಯರಾತ್ರಿ ಯಿಂದಲೇ ಇದು ಜಾರಿಗೆ ಬರಲಿದೆ ಎಂದು ಆದೇಶದಲ್ಲಿ ಉಲ್ಲೇಖೀಸಲಾಗಿದೆ.
ಗಡುವು ವಿಸ್ತರಣೆ ಇಲ್ಲ :
ಈಗಾಗಲೇ 3-4 ಬಾರಿ ಗಡುವು ವಿಸ್ತರಿಸಲಾಗಿದೆ. ಇನ್ನು ವಿಸ್ತರಣೆ ಇಲ್ಲ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಕೆಲವು ರೂಟ್‌ಗಳಲ್ಲಿ ಫಾಸ್ಟ್ಯಾಗ್ ನೋಂದಣಿ ಶೇ. 90 ಮೀರಿದೆ. ಕೇವಲ ಶೇ. 10ರಷ್ಟು ಮಂದಿ ಮಾತ್ರವೇ ಫಾಸ್ಟ್ಯಾಗ್ ಹಾಕಿಸಿಲ್ಲ. ಈಗ ಫಾಸ್ಟಾಗ್ ಎಲ್ಲೆಡೆ ಲಭ್ಯ. ಟೋಲ್‌ಗಳ ಸಮೀಪದಲ್ಲೂ ಲಭ್ಯವಿದ್ದು, ಅಲ್ಲೇ ಖರೀದಿಸಬಹುದು ಎಂದಿದ್ದಾರೆ.
ನಿಯಮಗಳೇನು? :
- ವಾಹನ ಚಾಲಕರು 25-30 ಕಿ.ಮೀ. ವೇಗದಲ್ಲಿ ಟೋಲ್ ಪ್ಲಾಜಾ ಪ್ರವೇಶಿಸಬೇಕು.
- ಟ್ಯಾಗ್ ಆರಂಭದಲ್ಲಿ ಕೆಂಪು ದೀಪದ ಮೂಲಕ ದೃಢಪಡಿಸಿ, ಹಸುರು ದೀಪದ ಮೂಲಕ ಚಾಲಕನಿಗೆ ಮುಂದೆ ಸಾಗಲು ಸೂಚಿಸುತ್ತದೆ.
- ಪ್ಲಾಜಾದಲ್ಲಿ ಚಾಲಕರು ವಾಹನ ನಿಲ್ಲಿಸುವ ಅಗತ್ಯವಿಲ್ಲ.
- ಟ್ಯಾಗ್ ಸ್ವಯಂಚಾಲಿತ ವಾಗಿ ದೃಢೀಕರಣಕ್ಕೆ ಒಳಗಾಗದೆ ಇದ್ದಲ್ಲಿ, ಚಾಲಕರು ಮುಂದಕ್ಕೆ ಸಾಗಿ ಪ್ಲಾಜಾದಲ್ಲಿರುವ ರೀಡರ್ ಮೂಲಕ ಅದನ್ನು ದೃಢಪಡಿಸಿಕೊಳ್ಳಬೇಕು.
- ಟ್ಯಾಗ್ ಸರಿಯಾದ ರೀತಿ ಯಲ್ಲಿ ಇರದೆ ಇದ್ದರೆ, ಶುಲ್ಕದ ಎರಡರಷ್ಟು ಪ್ರಮಾಣದಲ್ಲಿ ಟೋಲ್ ಪಾವತಿ ಮಾಡಬೇಕು.