ನೆಲಮಂಗಲ: ದೇಶದ ಎಲ್ಲಾ ಟೋಲ್‌ಗಳಲ್ಲಿ ಜ. 1ರಿಂದ ಫಾಸ್ಟ್‌ಟ್ಯಾಗ್ ಕಡ್ಡಾಯವಾಗುತ್ತಿದ್ದು,ಕೆಎಸ್ಸಾರ್ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳಿಗೂ ಅಳವಡಿಸುವ ಅನಿವಾರ್ಯತೆ ಎದುರಾಗಿದೆ.
ರಾಜ್ಯದ ಶೇ.90 ಕೆಎಸ್ಸಾರ್ಟಿಸಿ ಬಸ್‌ಗಳಿಗೆ ಈಗಾಗಲೇ ಫಾಸ್ಟ್‌ಟ್ಯಾಗ್ ಅಳವಡಿಸಲಾಗಿದ್ದು ಹಳ್ಳಿಗಳ ಕಡೆ ಸಂಚರಿಸುವ ಶೇ.10 ಬಸ್‌ಗಳಿಗೆ ಅಳವಡಿಸಲು ಸಿದ್ಧತೆ ಮಾಡಲಾಗಿದೆ. ಬಿಎಂಟಿಸಿ ಬಸ್‌ಟೋಲ್ ಮಾರ್ಗದಲ್ಲಿ ಹೋಗುವುದು ವಿರಳವಾಗಿರುವುದರಿಂದ ಪಾಸ್‌ಟ್ಯಾಗ್ ಅಳವಡಣೆ ಮಾಡಿರಲಿಲ್ಲ. ಆದರೆ ಜ. 1ರಿಂದ ಕಡ್ಡಾ ಯವಾಗಿರುವುದರಿಂದ ಫಾಸ್ಟ್‌ಟ್ಯಾಗ್ ಅಳವಡಿಸುವ ಅನಿವಾರ್ಯತೆ ಎದುರಾಗಿದೆ. ಇಲಾಖೆ ಹಣಪಾವತಿ: ಕೆಎಸ್ಸಾರ್ಟಿಸಿ ಬಸ್‌ಗಳ ನಂಬರ್‌ಗಳಿಗೆ ಅನುಗುಣವಾಗಿ ಫಾಸ್ಟ್‌ಟ್ಯಾಗ್ ಅಳವಡಿಸಲಾಗಿದ್ದು, ಬಸ್‌ಗಳ ಮಾರ್ಗವನ್ನು ಗಣನೆಗೆ ತೆಗೆದುಕೊಂಡು ಇಲಾಖೆ ಮೊದಲೇ ಹಣವನ್ನು ಪಾಸ್ಟ್‌ಟ್ಯಾಗ್‌ಗಳಿಗೆ ಪಾವತಿ ಮಾಡಿರುತ್ತದೆ. ಇದರಿಂದ ಬಸ್ ಸಂಚರಿಸುವ ಟೋಲ್ ಮಾಹಿತಿಗಳು ಇಲಾಖೆಗೆ ಲಭ್ಯವಾಗಲಿದೆ.
ಇಲಾಖೆಗೆ ಲಾಭಗಳು: ಫಾಸ್ಟ್‌ಟ್ಯಾಗ್ ಕಡ್ಡಾಯದಿಂದ ಸರಕಾರಿ ಬಸ್‌ಗಳು ಯಾವ ಟೋಲ್ ಮೂಲಕ ಸಂಚರಿಸುವ ಮಾಹಿತಿತಿಳಿಯಲಿದ್ದು, ಟೋಲ್ ಪಾವತಿಯ ಹಣವು ಮೊದಲೇ ಖಚಿತವಾಗಲಿದೆ. ದೂರ ಪ್ರಯಾಣ ಮಾಡುವ ಕೆಲವು ಬಸ್‌ಗಳಲ್ಲಿ ನಡೆಯುತಿದ್ದಟೋಲ್ ಮೋಸ ದೂರವಾಗಲಿದ್ದು, ಇಲಾಖೆಯು ಟೋಲ್ ಸುಂಕ ಕಟ್ಟುವ ಹಣದಪ್ರಮಾಣ ಪಾರದರ್ಶಕವಾಗಿ ಮಾಹಿತಿ ಸಿಗಲಿದೆ.
4ವರ್ಷದಿಂದ ಅಳವಡಿಕೆ: ಹೊರರಾಜ್ಯಗಳಿಗೆ ಹೋಗುವ ಕೆಲವು ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ 4ವರ್ಷದಿಂದಲೇ ಪಾಸ್ಟ್‌ಟ್ಯಾಗ್ ಅಳವಡಿಸಲಾಗಿದ್ದು ಟೋಲ್‌ಸುಂಕದಲ್ಲಿ ಕ್ಯಾಶ್‌ಲೆಸ್ ಮಾಡುವ ಯೋಜನೆಯನ್ನು ಸಾರಿಗೆ ಇಲಾಖೆ ಮೊದಲೇ ರೂಪಿಸಿಕೊಂಡಿತ್ತು. ಫಾಸ್ಟ್‌ಟ್ಯಾಗ್ ಕಡ್ಡಾಯ ದಿಂದ ಕೆಎಸ್ಸಾರ್ಟಿಸಿ ಇಲಾಖೆಗೆ ಯಾವುದೇಗೊಂದಲಗಳಿಲ್ಲದಿರುವುದು ತಿಳಿದುಬಂದಿದೆ.
ಕಡ್ಡಾಯದಿಂದ ನಷ್ಟ: ಬಿಎಂಟಿಸಿ ಬಸ್‌ಗಳು ಹಾಗೂ ಕೆಲವು ಕೆಎಸ್ಸಾರ್ಟಿಸಿ ಬಸ್‌ಗಳು ಹೆಚ್ಚು ಗ್ರಾಮೀಣ ಭಾಗದಲ್ಲಿ ಸಂಚರಿಸುತಿದ್ದು ಕೆಲವು ಬಾರಿ ಟೋಲ್ ಮೂಲಕ ಹೋಗುವುದರಿಂದ ಎಲ್ಲಾ ಬಸ್‌ಗಳಿಗೆ ಫಾಸ್ಟ್‌ಟ್ಯಾಗ್ ಅಳವಡಿಕೆ ದುಬಾರಿಯಾಗಬಹುದು,ಇದಲ್ಲದೇ ಎಲ್ಲಾಬಸ್‌ಗಳ ಟ್ಯಾಗ್‌ಗೆ ಹಣಪಾವತಿ ಮಾಡಿದರೇ ಇಲಾಖೆಗೆ ನಷ್ಟವು ಉಂಟಾಗಬಹುದು.
ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಈಗಾಗಲೇ ಫಾಸ್ಟ್‌ಟ್ಯಾಗ್‌ಗಳನ್ನು ಅಳವಡಿಸಲಾಗಿದ್ದು, ಕೆಲವು ಬಸ್‌ಗಳಲ್ಲಿ ಮಾತ್ರ ಅಳವಡಿಸಬೇಕಾಗಿದೆ. ಜ. 1ರಿಂದ ಕಡ್ಡಾಯವಾಗುವುದರಿಂದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದರು.
–ಸತೀಶ್, ಕೆಎಸ್ಸಾರ್ಟಿಸಿ ಚಾಲಕ
–ಕೋಟ್ರೇಶ್ ಆರ್