Advertisement

ಏಪ್ರಿಲ್‌ 1ರಿಂದ ವಾಣಿಜ್ಯ ವಾಹನಗಳಿಗೆ ಫಾಸ್ಟ್‌ ಟ್ಯಾಗ್‌

11:50 PM Oct 14, 2019 | Team Udayavani |

ಬೆಂಗಳೂರು: ಮುಂದಿನ ವರ್ಷದಿಂದ ವಾಣಿಜ್ಯ ವಾಹನಗಳಿಗೆ ಫಾಸ್ಟ್‌ ಟ್ಯಾಗ್‌ ಜಾರಿಗೆ ಸಿದ್ಧತೆ ನಡೆಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ. ದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಆಯೋಜಿ ಸಿದ್ದ ಏಕರೂಪದ ತೆರಿಗೆ ಟೋಲ್‌ ಶುಲ್ಕ ಕುರಿತು ಒನ್‌ ನೇಷನ್‌ -ಒನ್‌ ಫಾಸ್ಟ್‌ ಟ್ಯಾಗ್‌ ಸಂಕಿರಣದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದರು.

Advertisement

ದೇಶದ ಎಲ್ಲಾ ವಾಣಿಜ್ಯ ವಾಹನಗಳಿಗೆ ಏಪ್ರಿಲ್‌ 1, 2020ರಿಂದ ಜೆಎಸ್‌ಟಿಎನ್‌ಎ ವೇ ಬಿಲ್ಲುಗಳ ವ್ಯವಸ್ಥೆಗೆ ಫಾಸ್ಟ್‌ ಟ್ಯಾಗ್‌ನೊಂದಿಗೆ ಸಮನ್ವಯಗೊಳಿಸಲಾಗುವುದು. ಕರ್ನಾಟಕದಲ್ಲೂ ಜಾರಿ ಗೊಳಿಸಲಾಗುವುದು ಎಂದು ಹೇಳಿದರು. ಪ್ರಸ್ತುತ ಮ್ಯಾನ್ಯುಯಲ್‌ ಟೋಲ್‌ ರೀತಿಯಲ್ಲಿ ಸಂಗ್ರಹಿಸಲಾಗುತ್ತಿದೆ. ಇದರಿಂದ ಟೋಲ್‌ ಪ್ಲಾಜಾಗಳಲ್ಲಿ ವಾಹನಗಳ ದಟ್ಟಣೆ ಉಂಟಾಗಿ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಇದನ್ನು ತಪ್ಪಿಸಲು ಫಾಸ್ಟ್‌ ಟ್ಯಾಗ್‌ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರವು ಶೇ.50ರಷ್ಟು ಬಂಡ ವಾಳ ವೆಚ್ಚ ಹಾಗೂ ಶೇ.80 ರಷ್ಟು ನಿರ್ವಹಣೆ ವೆಚ್ಚ ಭರಿಸಲಿದೆ. ಕರ್ನಾಟಕದಲ್ಲಿ ಸುಮಾರು 32 ರಸ್ತೆಗಳಲ್ಲಿ ಫ್ಯಾಸ್ಟ್‌ಟ್ಯಾಗ್‌ ವ್ಯವಸ್ಥೆ ಅಳವಡಿಸಲು ಕೇಂದ್ರ ಸರ್ಕಾರದ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. 2019-20 ನೇ ಸಾಲಿನ ವಾರ್ಷಿಕ ಯೋಜನೆಯಡಿ 3919 ಕೋಟಿ ರೂ. ವೆಚ್ಚದ ರಾಷ್ಟ್ರೀಯ ಹೆದ್ದಾಗಿ ಕಾಮಗಾರಿಯ ಪ್ರಸ್ತಾವನೆ ಕೇಂದ್ರ ಸಾರಿಗೆ ಸಚಿವಾಲಯದ ಆನುಮತಿಗೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next