Advertisement
ಸರಿಯಾದ ಆಯ್ಕೆಸೀರೆಯೊಂದಿಗೆ ಹೊಂದಿಕೆಯಾಗುವ ಜಾಕೆಟ್‌ವೊಂದನ್ನು ಆರಿಸಿಕೊಳ್ಳಿ. ನಿಮ್ಮ ಸೀರೆಯನ್ನು ಡ್ರಾಪ್ ಮಾಡಿದ ಅನಂತರ, ಸೀರೆಯ ಮೇಲೆ ಜಾಕೆಟ್ ಧರಿಸಿ, ಆಗ ನಿಮ್ಮ ಸೀರೆಗೆ ಬೇಕಾದ ರೀತಿಯಲ್ಲಿ ಜಾಕೆಟ್ ಹೊಂದಿಸಿಕೊಂಡು ವಿಭಿನ್ನ ಬಗೆಯಲ್ಲಿ ಅದನ್ನು ಧರಿಸಬಹದು. ಕೆಲವರು ಡಿಪ್ ಜಾಕೆಟ್ ಹಾಕಿದರೆ ಇನ್ನು ಕೆಲವರು ಕೋಲರ್ ನೆಕ್ ಹಾಕುತ್ತಾರೆ.
ನಿಮ್ಮ ಸೀರೆಗೆ ನಿರ್ದಿಷ್ಟವಾದ ಬ್ಲಿಂಗ್ ಮತ್ತು ಸೌಂದರ್ಯವನ್ನು ಸೇರಿಸಲು ಜಾಕೆಟ್ ಬ್ಲೌಸ್‌ನಂತಹ ಉಡುಪಿನಲ್ಲಿ ಉತ್ತಮ ಪ್ರಮಾಣದ ಕನ್ನಡಿ ಅಥವಾ ಚಿನ್ನ ಅಥವಾ ದಾರದ ಕೆಲಸ ಇದ್ದರೆ ಅದು ಅಂದವಾಗಿ ಕಾಣುತ್ತದೆ. ನೀವು ವೆಸ್ಟರ್ನ್ ಬ್ಲೌಸ್ ಹಾಕಿ ಅದರ ಮೇಲೆ ಜಾಕೆಟ್ ಹಾಕಿಕೊಳ್ಳಬಹುದು. ಸೀರೆಯೊಂದಿಗೆ ಸಣ್ಣ ಜಾಕೆಟ್
ನಿಮ್ಮ ಮೊಣಕೈಯವರೆಗೆ ತೋಳುಗಳನ್ನು ಹೊಂದಿರುವ ಸಣ್ಣ ಜಾಕೆಟ್ -ಬ್ಲೌಸ್‌ಉತ್ತಮ ಆಕರ್ಷಕವಾಗಿ ಕಾಣುತ್ತದೆ. ಡಾರ್ಕ್ ಬಣ್ಣದ ಸೀರೆಗೆ ಸಣ್ಣ ಜಾಕೆಟ್ ಆರಿಸಿಕೊಳ್ಳಿ. ನಿಮ್ಮ ಸೀರೆಗೆ ಸ್ವಲ್ಪ ಬ್ಲಿಂಗ್ ಇದ್ದರೆ ಸಣ್ಣ ಜಾಕೆಟ್ ಬ್ಲೌಸ್ ಸುಂದರವಾಗಿ ಕಾಣುತ್ತದೆ.
Related Articles
40, 50ರ ದಶಕಗಳಲ್ಲಿ ಜನಪ್ರಿಯವಾಗಿದ್ದ ಮೊಣಕಾಲುಗಳವರೆಗೆ ತಲುಪುವ ಉದ್ದವಾದ ಜಾಕೆಟ್‌ಗಳು ಈಗಿನ ಫ್ಯಾಶನ್ ಆಗಿದೆ. ಹೊಳೆಯುವ ರೇಷ್ಮೆ ಜಾಕೆಟ್‌ಗಳು ಅಥವಾ ಕೈಯಿಂದ ನೇಯ್ದ ಬಟ್ಟೆಯೊಂದಿಗೆ ಈ ಉದ್ದವಾದ ಜಾಕೆಟ್‌ಗಳನ್ನು ಬಳಸಿ. ನಿಮ್ಮನ್ನು ಕ್ಲಾಸಿಯಾಗಿ ಕಾಣುವಂತೆ ಮಾಡುತ್ತದೆ.
Advertisement
ನಿಮ್ಮ ಜಾಕೆಟ್ ಸೀರೆ ಕುಪ್ಪಸವನ್ನು ಬೆಲ್ಟ… ಮಾಡಿಜಾಕೆಟ್ ಕುಪ್ಪಸ ಮತ್ತು ಸೀರೆಯನ್ನು ಉಟ್ಟ ಮೇಲೆ ನಿಮ್ಮ ಸೊಂಟದಲ್ಲಿ ಬೆಲ್ಟ… ಸೇರಿಸುವುದು ಕೂಡ ಈ ಜಾಕೆಟ್ ಸೀರೆಯ ಒಂದು ಫ್ಯಾಶನ್. ಇದು ಖಂಡಿತವಾಗಿಯೂ ಸೊಬಗನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಧೋತಿ ಸೀರೆಗಳೊಂದಿಗೆ ಜಾಕೆಟ್ ಬ್ಲೌಸ್
ಜಾಕೆಟ್ ಕುಪ್ಪಸ, ಧೋತಿ ಸೀರೆ ಪರಸ್ಪರ ಮ್ಯಾಚ್ ಆಗುತ್ತದೆ. ನೀವು ಧೋತಿ ಸೀರೆಯನ್ನು ಉಟ್ಟುಕೊಂಡರೆ ಸೊಂಟದವರೆಗೆ ಸಣ್ಣ ಜಾಕೆಟ್ ಹಾಕಿಕೊಳ್ಳಿ. ಇದು ಸೀರೆಯ ಅಂದ ಹೆಚ್ಚಿಸುವುದಲ್ಲದೆ ನಿಮ್ಮ ಅಂದವನ್ನು ಇಮ್ಮಡಿಗೊಳಿಸುತ್ತದೆ. ಪೂರ್ಣ ತೋಳಿನ ಕಾಲರ್ ಜಾಕೆಟ್
ನಿಮ್ಮ ಸೀರೆಗೆ ಉತ್ತಮ ಸೊಬಗು ಬರಬೇಕಾದರೆ, ನೀವು ಬಯಸಿದರೆ ಪೂರ್ಣ ತೋಳು ಮತ್ತು ಕಾಲರ್ ಜಾಕೆಟ್ ಸೀರೆಯೊಂದಿಗೆ ಮ್ಯಾಚ್ ಆಗುತ್ತದೆ. ನೀವು ಲೇಸ್, ರೇಷ್ಮೆ ಅಥವಾ ವೆಲ್ವೆಟ್ ಜಾಕೆಟ್‌ಗಳನ್ನು ಆಯ್ಕೆ ಮಾಡಬಹುದು, ಅವುಗಳ ಮೇಲೆ ಉತ್ತಮವಾದ ಕಸೂತಿ ತಯಾರಿಸಲಾಗುತ್ತದೆ ಇದು ಇನ್ನೂ ಸೌಂದರ್ಯವನ್ನು ಹೆಚ್ಚಿಸುತ್ತದೆ. - ಪೂರ್ಣಿಮಾ ಪೆರ್ಣಂಕಿಲ