Advertisement
ಇದು ಸ್ವಲ್ಪ ಡೀಪ್ ನೆಕ್ ಆಯ್ತು.. ಇದು ಟೈಟ್ ಇದೆಯಪ್ಪ..ಚೆನ್ನಾಗಿರೋಲ್ಲ. ಇದು ಸ್ವಲ್ಪ ಗಿಡ್ಡ ಆಯ್ತು ಸ್ಕರ್ಟ್.. ನಾನು ಹೀಗೆಲ್ಲ ಹೇಳುತ್ತಿದ್ದೆ. ಮಗಳು, ಅದನ್ನು ಕಿವಿ ಮೇಲೂ ಹಾಕಿಕೊಳ್ಳಲಿಲ್ಲ. ನಾನು ಬಿಟ್ಟೇನೆಯೆ? ಪ್ರವಚನಕ್ಕೆ ಶುರು ಹಚ್ಚಿಕೊಂಡೆ..
“ಅಫ್ಕೋರ್ಸ್ ಅಮ್ಮಾ..ನಾವೂ ಅವ್ರಿಗೆ ಇಂಥದೇ ಖುಷಿ ಕೊಡ್ತೀವಿ. ನೋಡು ಇಂಡಿಯನ್ ಆದ್ರೂ ನಮ್ ಹಾಗೇ ಡ್ರೆಸ್ ಮಾಡ್ಕೊಂಡಿದಾರೆ.. ವೆಸ್ಟರ್ನ್.. ಅಂತ..ಅವ್ರಿಗೂ ಹೆಮ್ಮೆ ಅಲ್ವಾ…?’ ಈ ಮಾತು ಕೇಳಿ ಅವಳಿಗೆ ಗುದ್ದಿ ಬಿಡಬೇಕು ಅನಿಸಿದರೂ, ಆಕೆಯ ತರ್ಕಕ್ಕೆ ಸೋತೆ. ಅದೇನು ನಮ್ಮ ಗ್ರಹಚಾರವೋ, ನಮ್ಮ ಸಂಸ್ಕೃತಿ, ಸಂಸ್ಕಾರ ಕಲಿಯಲಿ ಅಂತ ನಾವು ಹಿಂದುತ್ವಕ್ಕೆ ಮಹತ್ವ ಕೊಡುವ ಚಿನ್ಮಯ ವಿದ್ಯಾಲಯಕ್ಕೆ ಸೇರಿಸಿದರೆ…ಇವಳು ಪೂರ್ತಿ ವೆಸ್ಟರ್ನ್ ಆಗಿ ಹೊರಬಂದಳು ಅಲ್ಲಿಂದ!
Related Articles
ಅದೇನು ತರಾವರಿ ಹರಕು…! ಹರಿದುಕೊಂಡ ಮೇಲೆ ಧರಿಸ್ತಾರೋ.. ಧರಿಸಿದ ಮೇಲೆಯೇ ಹರಿದುಕೊಳ್ತಾರೋ… ಎಲ್ಲವೂ ಅಯೋಮಯ. ಹೆಚ್ಚು ಹೆಚ್ಚು ಹರಿದಷ್ಟೂ ಬಟ್ಟೆಯ ಬೆಲೆ ಹೆಚ್ಚು!
Advertisement
ಅದೊಮ್ಮೆ ನೆಂಟರಿಷ್ಟರೆಲ್ಲ ನಮ್ಮ ಮನೆಯಲ್ಲಿ ಸೇರಿ¨ªೆವು. ತಮ್ಮನ 4 ವರ್ಷದ ಮಗ ಅಂಡು ಸುಟ್ಟ ಬೆಕ್ಕಿನಂತೆ ನನ್ನ ಹಿಂದೆಯೇ ಅಲೆಯುತ್ತ ಏನೋ ಹೇಳಲು ಬರುತ್ತಿದ್ದ. ಕೆಲಸದ ಗಡಿಬಿಡಿಯಲ್ಲಿ ನಾನೂ ಗಮನಕೊಡಲಿಲ್ಲ. ಕಡೆಗೆ ನನ್ನ ಕಿವಿಯಲ್ಲಿ ಬಂದು ಹೇಳಿದ..”ಅತ್ತೇ.. ಭೂಮಿಕತ್ತಿ (ಭೂಮಿಕಾ ಅತ್ತೆ) ನೋಡ್ಕೊಂಡೇ ಇಲ್ಲ..ಅವಳ ಪ್ಯಾಂಟು ಮೊಣಕಾಲ ಹತ್ರ ಹರ್ದು ಹೋಗಿದೆ..ಎಲ್ರೂ ನೋಡ್ತಾರೆ… ನಾ ಹೇಳಿದ್ರೆ ಬೇಜಾರಾಗ್ಬೋದು ಅವ್ರಿಗೆ. ನೀನೇ ಹೇಳು..’ ಅಂತ. ಇದೇ ಫ್ಯಾಶನ್ನಂತೆ ಮಾರಾಯಾ ಅಂತ ಅವನಿಗೆ ಹೇಳಿದ್ದಾಯ್ತು ಕಡೆಗೆ!
ಹಾಗೆ ನೋಡಿದರೆ, ನನ್ನ ಕಾಲೇಜು ದಿನಗಳಲ್ಲಿ ನಾನೂ ಚೂಡಿ, ಮಿಡಿ, ಮ್ಯಾಕ್ಸಿ ಧರಿಸಿದವಳೇ. ಮದುವೆಯ ತನಕ ನನ್ನದೂ ತರಾಂತರ ಕುದುರೆ ಬಾಲದ ಕೂದಲೇ. ಮದುವೆಯ ನಂತರ ಕೂದಲು ಸೊಂಪಾಗಿ ಬೆಳೆದು ನೆಲ ಮುಟ್ಟುವಂತಾಗಿ, ಉದ್ದ ಜಡೆ ನನಗೊಂದು ಐಡೆಂಟಿಟಿಯನ್ನೇ ಕೊಟ್ಟಿತು. ಉದ್ದ ಜಡೆ ಆಧುನಿಕ ದಿರಿಸುಗಳಿಗೆ ಒಗ್ಗದ್ದು ಎಂಬ ಕಾರಣಕ್ಕೆ ನಾನು ಚೂಡಿ, ಸೀರೆಗೆ ನನ್ನನ್ನು ಸೀಮಿತಗೊಳಿಸಿಕೊಂಡೆ. ಬೇರೆಯವರು ಅವರಿಗೆ ಕಂಫರ್ಟ್ ಇದ್ದರೆ ಧರಿಸಲಿ. ನನ್ನ ಅಭ್ಯಂತರವಿಲ್ಲ.
ಆದರೂ ಅದ್ಯಾಕೋ ಹರಕು ಬಟ್ಟೆ ಮನಸಿಗೆ ಒಗ್ಗದ್ದು. ಅಲ್ಲದೆ ಅಂಗಾಂಗ ಪ್ರದರ್ಶನ ಮಾಡುವಂಥ ಬಟ್ಟೆಗಳನ್ನು ಧರಿಸುವುದರ ಬಗ್ಗೆ ಒಂದು ಅಸಹನೆಯಿದೆ ಇವತ್ತಿಗೂ. ಅದರ ಸಾಧಕ ಬಾಧಕಗಳ ಬಗ್ಗೆ ಪ್ರವಚನ ಕೊಡುತ್ತಿದ್ದೆ ಯಾವಾಗಲೂ.
“ಅಯ್ಯಯ್ಯ..ಅದ್ಯಾವ ಓಬೀರಾಯನ ಕಾಲದಲ್ಲಿದ್ದಿ ಮಾರಾಯ್ತಿà..ಅವರೂ ನಾಲ್ಕು ಜನ ಹೇಗಿರ್ತಾರೋ ಹಾಗಿಬೇìಕು..ನೀನು ಸ್ವಲ್ಪ ಬದಲಾಗು..ಮೊದ್ಲು’ ಅಂತ ನನ್ನ ಗೆಳತಿಯರೇ ಮಗಳ ಪರ ವಹಿಸುತ್ತ ವಿಲನ್‌ಗಳಾಗಿಬಿಟ್ಟರು ನನ್ನ ಪಾಲಿಗೆ.
“ಅಮ್ಮಾ, ನೀನು ಟೆನ್ಷನ್ ಮಾಡ್ಕೊಂಡ್ರೆ ನಂಗೆ ಕಷ್ಟ ಆಗುತ್ತೆ. ನಿನ್ನ ಆರೋಗ್ಯಾನೂ ಹಾಳಾಗುತ್ತೆ. ನಂಬು ನನ್ನ..I know how to manage. you don’t worry..’ ಅಂತ ಮಗಳೂ ಮಂಗಳಿಸಿಬಿಟ್ಟಳು ನನ್ನ. ಸುಮ್ಮನಾದೆ. ಪ್ರತೀ ದಿನ ಬೆಳಗ್ಗೆ ಎಲ್ಲಿಗೇ ಹೋಗುವುದಿದ್ದರೂ ತಯಾರಾದವಳು “ಅಮ್ಮಾ ಹೇಗೆ ಕಾಣಿ¤ದೀನಿ?’ ಅಂತ ಕೇಳುವುದು ರೂಢಿ. ಮರುದಿನ ಫ್ರೆಂಡ್ ಒಬ್ಬಳ ಬರ್ತ್‌ಡೇಗೆ ಹೊರಟವಳು ತಯಾರಾಗಿ ಕೇಳಿದಳು..ಇಲಿ ಕತ್ತರಿಸಿದಂತಿದ್ದ ಕೂದಲು ನೋಡಿ ಗುಂ ಅಂತ ಸಿಟ್ಟು ಬಂದರೂ ಸದ್ಯ ಮೈಕಾಣದಂಥ ಬಟ್ಟೆ ನೋಡಿ ಸಮಾಧಾನವಾಯಿತು. ಬೈ ಮಾ.. ಎನ್ನುತ್ತಾ ತಿರುಗಿದಳು…ನನಗಾಗ ಬವಳಿ ಬರೋದೊಂದು ಬಾಕಿ..ಹಿಂಭಾಗ ಬಟಾನುಬಯಲು…!
ಹರಿಯುವುದರಲ್ಲೂ ಅದೇನು ಕಲಾತ್ಮಕತೆ…!ಕುರುಡನ ಮಾಡಯ್ಯ ತಂದೆ… ಅಂತ ಇಂಥ ಸಂದರ್ಭಗಳಿಗಾಗಿಯೇ ಹೇಳಿದ್ದಾರೇನೋ.. ಮೊನ್ನೆ ಅಣ್ಣನ ಮಗಳ ಮದುವೆ. ಮಗಳಿಗೆ ಅವಳೆಂದರೆ ಜೀವ. ಅಕ್ಕ, ತಂಗಿಯಂತೆ ಬೆಳೆದವರು. ಮದುವೆಯಲ್ಲಿ ಪಾಲ್ಗೊಳ್ಳಲೆಂದೇ ಮಂಗಳೂರಿನಿಂದ ಮದುವೆಗೆ ಬರುವವಳಿದ್ದಳು.
“ಇದು ಕಾಲೇಜ್ ಫಂಕ್ಷನ್ ಅಲ್ಲ..ಮದುವೆ. ಒಂದೊಳ್ಳೆ ಲೆಹೆಂಗಾವೋ..ಲಂಗಾ ದಾವಣಿಯೋ..ಸೀರೆಯೋ..ತಗೋ.. ನೀಟಾಗಿರ್ಲಿ. ತಗೊಳ್ಳೋಕೂ ಮುಂಚೆ ನಂಗೊಂದ್ ಫೋಟೋ ಕಳುಹಿಸಿ ನಾನು ನೋಡ್ಬೇಕು.. ಹರ್ಕಟೆ, ಪರ್ಕಟೆ ತಗೊಂಡೊ ಸುಮ್ನಿರಲ್ಲ ನೋಡು..’ ಎಂಬ ಧಮಕಿಯೊಂದಿಗೆ ಎಚ್ಚರಿಸಿದೆ. ಅವಳು ಫೋಟೋ ಕಳಿಸಿದಳು.. ನಾನು ಅದಲ್ಲ, ಇದಲ್ಲವೆಂದು ಕ್ಯಾತೆ ತೆಗೆದೆ. ಮತ್ತೆ ಜಟಾಪಟಿ.. “ತಗೊಳ್ಳಲಿ ಬಿಡೇ.. ಅದೆಷ್ಟು ಕರ್ಕರೆ ಮಾಡ್ತಿ..’ ರಾಯರು ಮೂಗು ತೂರಿಸಿದರು.
“ನಿಮ್ಮಂಥ ಅಪ್ಪಂದ್ರು, ಅಣ್ಣಂದ್ರು..ಹಿಂಗೆ ತಲೆ ಮೇಲೆ ಕೂರಿಸ್ಕೊಂಡೇ ನಮ್ ಹೆಣ್ ಮಕ್ಳು ಹೆಚೊRಂಡಿರೋದು..’ ನನ್ನ ದುಸುದುಸು. “ಹೀಗೆಲ್ಲಾ ಹೇಳ್ಳೋದಾದ್ರೆ ನಾ ಬರೋಲ್ಲ ಬಿಡಿ ಮದ್ವೆಗೆ…’ ಅತ್ತಲಿಂದ ಫೋನ್‌ನಲ್ಲಿ ಮಗಳ ಧಮಕಿ..
“ಹಲೋ excuse meನಾ ಹೇಳ್ತಿದೀನಿ, ನೀ ಬರಕೂಡದು..ಮದ್ವೆಗೆ..ಅದೇ ಡ್ರೆಸ್ ತಗೊಳ್ಳೋದಿದ್ರೆ…’ (ಅವಳಿಗೆ ಮನಸಾಗಿದ್ದ ಡ್ರೆಸ್‌ದು ನೆಕ್ ಡೀಪ್ ಆಯ್ತು ಅಂತ ನನ್ನ ಕ್ಯಾತೆ)
“ಎರಡೂ ಒಂದೇ ಅಲ್ವಾ..’ ಈಗ ರಾಯರು ಉದ್ಗರಿಸಿದರು.. “ನಿಮಗೆ ಗೊತ್ತಾಗಲ್ಲ ಸುಮ್ನಿರಿ..’
“ಈಗ ಆಂಟಿಯರೇ ಹೆಂಗೆಲ್ಲ ಡ್ರೆಸ್ ಮಾಡ್ಕೊತಾರೆ..ಅವಳಿಗಿಷ್ಟ ಆಗಿದ್ದು ತಗೊಳ್ಳಲಿ ಬಿಡು..ಯಾಕೆ ಅಷ್ಟು ರಗಳೆ ಮಾಡ್ತಿದ್ದಿ..’ ರಾಯರು ಮತ್ತೆ ಮಾತಾಡಿದರು.
ಮುಖ ದುಮ್ಮಿಸಿಕೊಂಡು ಪುಸ್ತಕ ಹಿಡಿದು ಕೂತೆ. ರಾತ್ರಿ ಯಾಗಿ ಮಲಗುವ ಹೊತ್ತೂ ಬಂತು. ಯಾಕೋ ನನ್ನ ಬಗ್ಗೆ ನನಗೇ ಬೇಸರವಾಗುವಂತಾಯ್ತು. ನನ್ನ ಮಾತು ಕಟುವಾಯ್ತುನೋ.. ಕೊಂಚ ಕುತ್ತಿಗೆ ಅಗಲವಾಗಿದೆ ಬಿಟ್ಟರೆ..ಇದೇನೂ ಹರಕು ಗಿರಕು ಅಲ್ಲವಲ್ಲ. ಕುತ್ತಿಗೆಗೆ ಅಗಲವಾದ ಸರ ಹಾಕಿದರಾಯ್ತು.. ಹರಕು ಬಟ್ಟೆ ಹಾಕಿಕೊಳ್ಳಲು ಬಡವರು ಅದೆಷ್ಟು ಮುಜುಗರ ಪಟ್ಟುಕೊಳ್ತಿದ್ದರು ಹಿಂದೆಲ್ಲ. ಕಾಲೇಜಿಗೆ ಹರಕು ಲಂಗ ಹಾಕಿಕೊಂಡು ಬರುತ್ತಿದ್ದ ಸಹಪಾಠಿಯ ಅಸಹಾಯಕ ಮುಖ ನೆನಪಾಯ್ತು. ಹರಕು ಬಟ್ಟೆ ಫ್ಯಾಶನ್ ಆದರೆ, ಅಂಥ ಬಡವರ ಮುಜುಗರಕ್ಕೆ ಅವಕಾಶವೇ ಇರೋಲ್ಲ. ಅವರಿಗೂ ನಿರಾಳ. ಹೀಗೆಲ್ಲಾ ಯೋಚಿಸುತ್ತಲೇ ಮಗಳಿಗೆ ಮೆಸೇಜ್ ಮಾಡಿದೆ.. “ಸಾರಿ ಮಗಳೇ..ಸ್ವಲ್ಪ ರಫ್ ಆಗಿ ಹೇಳಿºಟ್ಟೆ. ಅದೇನೋ ಗೊತ್ತಿಲ್ಲ ನಿನ್ನ ಕೆಟ್ಟ ದೃಷ್ಟಿಯಿಂದ ಯಾರಾದ್ರೂ ನೋಡಿದ್ರೆ ಅಂತ ಹೊಟ್ಟೇಲಿ ಸಂಕಟ ಆಗುತ್ತೆ. ಅಂಥವರ ಕಣ್ಣಿಗೆ ಸೂಜಿಮೆಣಸು ನುರೀಬೇಕು ಅನಿಸುತ್ತೆ. ಬಹುಶಃ ಎಲ್ಲ ತಾಯಂದಿರಿಗೂ ಹೀಗೇನೆ. ಮುಂದೊಂದು ದಿನ ನೀನು ನನ್ನ ಜಾಗಕ್ಕೆ ಬಂದಾಗ ನಿನಗಿದು ಅರ್ಥವಾಗುತ್ತೆ. ನಿಂಗೆ ಇಷ್ಟವಾದ ಆ ಡ್ರೆಸ್ಸನ್ನೇ ತಗೋ..ನಂಗೆ ಅಡ್ಡಿಯಿಲ್ಲ..’ ಅಷ್ಟರಲ್ಲಿ ರಾಯರು ಅವರ ಮೊಬೈಲ್ ಕೊಟ್ಟರು..ಮಗಳ ಮೆಸೇಜು ಇದೆ ನೋಡಿಲ್ಲಿ ಅಂತ..ಅರ್ಧಗಂಟೆಯ ಹಿಂದೆಯೇ ಅವಳ ಮೆಸೇಜು ಬಂದಿದ್ದಕ್ಕೆ ಸಮಯ ಸಾಕ್ಷಿ ಹೇಳಿತ್ತು..
“ಅಪ್ಪಾ..ಈ ಬೇರೆ ಡ್ರೆಸ್ ತಗೊಂಡಿದೀನಿ. ಅಮ್ಮ ಬೇಡ ಅಂದ್ರೆ ಹಠ ಮಾಡಿ ತಗೊಂಡ್ರೂ ನಂಗೆ ನಿರಾಳ ಇರೋಲ್ಲ. ಅಲ್ಲದೆ, ಮದುವೆ ಮನೇಲಿ ಅವಳೂ ಖುಷಿಯಾಗಿ ಇರೋಲ್ಲ. ಒಂದೇ ದಿನ ನಿಮ್ಮ ಜೊತೆ ಇರ್ತೀದೀನಿ..ಅದನ್ನೂ ಬೇಜಾರು ಮಾಡ್ಕೊಂಡೇ ಕಳೀಬೇಕು ಅಂದ್ರೆ..ನಾ ಬರೋದ್ರಲ್ಲಿ ಏನು ಖುಷಿಯಿದೆ..? ಅಮ್ಮ ಹೇಳಿದ್ ರೀತಿಗೆ ನಂಗೆ ಸಿಟ್ಟು ಬಂದಿದೆ..ನೀನೇ ತೋರ್ಸು ಅವಿಳಿಗೆ..ಬೈ…’ ನಾನು ಮಾಡಿದ ಮೆಸೇಜ್ ತೋರಿಸಿದೆ..ಇಬ್ಬರೂ ಮುಖ ಮುಖ ನೋಡುತ್ತ ನಿಂತೆವು..ಏನೂ ಹೇಳಲು ತಿಳಿಯದೆ…….. -ಸುಮನಾ ಮಂಜುನಾಥ್