ಹೆಣ್ಣು ಮಕ್ಕಳ ಮನ ಗೆಲ್ಲುವ ಅದ್ಭುತವಾದ ಆಯುಧ ಎಂದರೆ ಅದು ಕಾಲ್ಗೆಜ್ಜೆ. ಘಲ್ ಎಂಬ ಶಬ್ದದಿಂದ ಆವೃತವಾದ ಗೆಜ್ಜೆ ಕಾಲಿನ ಪ್ರತೀಕವಾದರೆ,ಆ ಪಾದದ ಸೌಂದರ್ಯದಿಂದ ಹೆಣ್ಣಿನ ಜೀವನವೇ ಆಭರಣವಾಗುತ್ತದೆ.
ಹೆಣ್ಣು ಮಕ್ಕಳಿಗೆ ಕಾಲ್ಗೆಜ್ಜೆ ಎಂದರೆ ಅಪಾರವಾದ ಪ್ರೀತಿ ಇರುವುದು ಸಹಜ. ಹುಟ್ಟಿನಿಂದಲೂ ಹೆಣ್ಣು ಗೆಜ್ಜೆಯ ನಾದಕ್ಕೆ ಮಾರು ಹೋಗುತ್ತಾಳೆ. ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ಕುಣಿಯುವಂತಹ ಕನ್ಯೆಯನ್ನು ನೋಡಿದರೆ ಆ ಗೆಜ್ಜೆಯ ಸಪ್ಪಳಕ್ಕೆ ರೋಮಾಂಚನವಾಗುವುದಂತು ಖಂಡಿತ. ಚಿಕ್ಕ ಮಕ್ಕಳಿದ್ದಾಗ ಹೆಣ್ಣು ಮಗುವಿಗೆ ಗೆಜ್ಜೆ ತೊಡಿಸಿ ಖುಷಿ ಪಡುತ್ತಾರೆ. ಆ ಮಗುವಿನ ಕಾಲ ಸಪ್ಪಳ ಮನೆ ತುಂಬಾ ಸದ್ದು ಮಾಡುತ್ತಿದ್ದರೆ ಮನೆ ಮಂದಿಗೆಲ್ಲ ಸಂತಸ ತುಂಬಿರುವುದು ಎನ್ನಬಹುದು.
ಗೆಜ್ಜೆ ಕೇವಲ ಪಾದ ಶೃಂಗಾರಕ್ಕೆ ಮಾತ್ರವಲ್ಲ, ಸಂತೋಷವು ಅಡಗಿದೆ.ನಮ್ಮ ಭಾರತೀಯ ಶಾಸ್ತ್ರದಲ್ಲಿ ಕಾಲ್ಗೆಜ್ಜೆಗೂ ಮಹತ್ವವಿದೆ. ವಿವಾಹವಾಗಿ ಪತಿಯ ಮನೆಗೆ ಕಾಲಿಟ್ಟ ವಧುವಿಗೆ ಗೆಜ್ಜೆ ತೊಡಿಸುವ ಪದ್ಧತಿಯು ಇದೆ. ಇದರಿಂದ ಮನೆಯಲ್ಲಿ ಸದಾ ಸಂತೋಷ ನೆಲೆಸಿರುತ್ತದೆ ಎಂಬ ವಾಡಿಕೆ ಇದೆ.
ಅದಲ್ಲದೆ ಕಾಲ್ಗೆಜ್ಜೆಯ ಶಬ್ಧ ಮನೆಯನ್ನು ಪ್ರವೇಶಿಸುವಾಗ ಸಕಾರಾತ್ಮಕ ಕ್ರಿಯೆಯನ್ನು ತಡೆಯುತ್ತದೆ ಎಂಬ ನಂಬಿಕೆಯೂ ಇವೆ. ಗೆಜ್ಜೆ ಹೆಣ್ಣಿನ ಕಾಲಿನ ಬಲವನ್ನು ಹೆಚ್ಚಿಸುತ್ತದೆ ಹಾಗೂ ಪವಿತ್ರವಾಗಿದ್ಯಟ್ಟಿರುತ್ತದೆ. ಗೆಜ್ಜೆಗಳಿಲ್ಲದ ಕಾಲುಗಳು ಸಂಗೀತವೇ ಇಲ್ಲದ ಸಾಹಿತ್ಯದಂತೆ ಎಂಬ ಮಾತಿದೆ. ಯಾಕೆಂದರೆ ಹೆಣ್ಣಿನ ನುಣುಪಾದ ಆ ನಾಜೂಕು ಪಾದಕ್ಕೆ ಬೆಳ್ಳಿಯ ಸರಪಳಿ ಅಂಟಿ ನಾದ ಹೋರಾಡಿಸುವಾಗ ನಾಲ್ಕೆ ನಾಲ್ಕು ಗೆಜ್ಜೆಗಳು ಬೆಳ್ಳಿಯ ಪಾದವನ್ನು ಸೊಗಸಾಗಿ ಕಾಣುತ್ತದೆ. ಆದರೆ ಇತ್ತೀಚಿನ ಆಧುನಿಕ ಯುಗದಲ್ಲಿ ಹೆಣ್ಣು ಮಕ್ಕಳಿಗೆ ಕಾಲ್ಗೆಜ್ಜೆಯ ವ್ಯಾಮೋಹವು ತೀರಾ ಕಡಿಮೆಯಾಗಿದೆ. ಇಂದಿನವರು ಗೆಜ್ಜೆಯ ಬದಲಾಗಿ ಕಪ್ಪು ಬಣ್ಣದ ಧಾರದ ಮೇಲೆ ವ್ಯಾಮೋಹವನ್ನು ಹೊಂದಿದ್ದಾರೆ. ಗೆಜ್ಜೆ ಕಟ್ಟಿದ ಆ ಸುಂದರವಾದ ಪಾದಗಳನ್ನು ನೋಡಿದರೆ ಹೃದಯದ ನಾಡಿ ಮಿಡಿತಗಳು ಸುದ್ದಿಯಾಗುವುದು. ಅದೆಷ್ಟೋ ಪಾದಗಳು ಕಾಲ್ಗೆಜ್ಜೆ ತೊಡಿಸದೆ ಇದ್ದು ಕಾಲುಗಳು ಸದ್ದಿಲ್ಲದೆ ಮೌನವಾಗಿ ಬಿಟ್ಟಿದೆ. ಇದರಿಂದ ಭಾರತೀಯ ಸಂಸ್ಕೃತಿಯಲ್ಲಿ ಗೆಜ್ಜೆಯ ಮಹತ್ವ ಕಡಿಮೆಯಾಗುತ್ತಿದೆ. ನಮ್ಮ ಮಾತೃ ಭೂಮಿಯಲ್ಲಿ ಸಂಸ್ಕೃತಿ ಬೆಳೆಯಬೇಕಾದರೆ ಕಾಲ್ಗೆಜ್ಜೆಯ ಜತೆಗೆ ಇನ್ನಿತರ ಸಂಪ್ರದಾಯವನ್ನು ಅಳವಡಿಸಿಕೊಂಡರೆ ಭಾರತ ದೇಶವು ಉತ್ತಮ ಆಚಾರ ವಿಚಾರ, ಪದ್ಧತಿಗಳಿಂದ ಮುಂದೂಡಬಹುದು.
- ಆಶಾದಾಸಪ್ಪ ನಾಯ್ಕ
ಉಡುಪಿ