Advertisement

Agriculture: ಸೋಲಾರ್ ಮಿನಿ ಟ್ರ್ಯಾಕ್ಟರ್ ಬಳಸಿ ಗಮನ ಸೆಳೆದ ಯುವ ರೈತ

08:16 PM Aug 06, 2023 | Team Udayavani |

ಭರಮಸಾಗರ: ಇಲ್ಲೊಬ್ಬ ಯುವ ರೈತ ಸೋಲಾರ್ ಆಧಾರಿತ ಮಿನಿ ಟ್ರ್ಯಾಕ್ಟರ್ ಬಳಕೆ ಮಾಡಿಕೊಂಡು ಅದರಿಂದ ಬೆಳೆಗಳ ನಡುವೆ ಎಡೆಗುಂಟೆ ಸಾಲು ಮಾಡುವ ಮೂಲಕ ಗಮನ ಸೆಳೆದಿದ್ದಾನೆ.

Advertisement

ಸಿದ್ದವ್ವನದುರ್ಗ ಗ್ರಾಮದ ಶಿವಣ್ಣ ಮೇಷ್ಟ್ರು ಮಗ ಚನ್ನಬಸಪ್ಪ ನವರೇ ಸೋಲಾರ್ ಮಿನಿ ಟ್ರ್ಯಾಕ್ಟರ್ ಬಳಸಿ ಆಧುನಿಕ ರೈತಾಪಿಯಂತೆ ಯಂತ್ರ ಬಳಸಿ ಕೃಷಿ ಕೆಲಸವನ್ನು ಸುಲಭ ಮಾಡಿಕೊಂಡಿದ್ದಾರೆ.

ತಮ್ಮದೇ ಜಮೀನಿನಲ್ಲಿ‌ ರಾಗಿ, ಸಾವೆ ಬೆಳೆ ಬಿತ್ತನೆ ಮಾಡಿದ್ದಾರೆ. ಸಣ್ಣ ಫಸಲಿನಲ್ಲಿ ಸಾಲು ಮಾಡಿ ಕಳೆ ನಿಯಂತ್ರಿಸುವ ಜೀಬೂ ಹೆಸರಿನ ಸುಮಾರು ಮೂರುವರೆ ಲಕ್ಷ ವೆಚ್ಚದಲ್ಲಿ ಸೋಲಾರ್ ಕೈ ಟ್ರ್ಯಾಕ್ಟರ್ ಖರೀದಿಸಿದ್ದಾರೆ.

ಸಣ್ಣ ಫಸಲಿನಲ್ಲಿ ಈ ಮಿನಿ ಟ್ರ್ಯಾಕ್ಟರ್ ಗೆ ಹಿಂದೆ ನಗವನ್ನು ಕಟ್ಟಿ ಅದಕ್ಕೆ ಎರಡರಿಂದ ನಾಲ್ಕು ಎಡೆಗುಂಟೆ ಹಾಕಿ ರಾಗಿ ನಡುವೆ ಸಾಲು ಮಾಡುತ್ತಿದ್ದಾರೆ. ಬೆಳಗ್ಗೆ 12 ರಿಂದ ಸಂಜೆ 5 ರವರೆಗೆ ಬರೋಬ್ಬರಿ ,5 ಎಕರೆ ಎಡೆಗುಂಟೆ ನಿರ್ವಹಿಸಲಾಗಿದೆ. ಎತ್ತುಗಳಿಗೆ ಪರ್ಯಾಯವಾಗಿ ಈ ಯಂತ್ರ ಬಳಸಲಾಗುತ್ತಿದೆ. ಒಳ್ಳೆ ಪಿಕ್ ಅಪ್ ಇದೆ. ಓಡಿಸಲು ಸಮಸ್ಯೆ ಇಲ್ಲ. ಕೃಷಿಯ ಹಲವು ಕೆಲಸಗಳನ್ನು ಸುಲಭವಾಗಿ ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next