Advertisement

ಬೆಲೆ ಕುಸಿತಕ್ಕೆ ಕಂಗೆಟ್ಟ ಅನ್ನ ದಾತರು

02:56 PM Dec 15, 2019 | Suhan S |

ಮುದಗಲ್ಲ: ಸಿರಿಧಾನ್ಯಗಳಲ್ಲೊಂದಾದ ಸಜ್ಜೆ ಧಾರಣೆ ಕ್ರಮೇಣ ಇಳಿಮುಖವಾಗುತ್ತಿದ್ದು ಸಜ್ಜೆ ಬೆಳೆದ ಈ ಭಾಗದ ರೈತರಲ್ಲಿ ಆತಂಕ ಮನೆ ಮಾಡಿದೆ.

Advertisement

ಪ್ರಸಕ್ತ ವರ್ಷ ಮುಂಗಾರು ಮಳೆ ವಿಳಂಬದ ನಡುವೆಯೂ ಸಜ್ಜೆ ಬೆಳೆ ನಿರೀಕ್ಷಿತ ಮಟ್ಟದಲ್ಲಿ ಬಂದಿದೆ. ಕಟಾವು ಹಂತದಲ್ಲಿ ಒಂದೂವರೆ ತಿಂಗಳು ಕಾಡಿದ ಮಳೆಯಿಂದಾಗಿ ಅಲ್ಲಲ್ಲಿ ಸಜ್ಜೆ ತೆನೆ ತೋಯ್ದು ಅಲ್ಪಸ್ವಲ್ಪ ಕಪ್ಪು ಬಣ್ಣಕ್ಕೆ ತಿರುಗಿದ್ದು ಬಿಟ್ಟರೆಉಳಿದಂತೆ ಸಜ್ಜೆ ಫಸಲು ಉತ್ತಮವಾಗಿದೆ. ಜುಲೈ-ಆಗಸ್ಟ್‌ ತಿಂಗಳಲ್ಲಿ ಎಪಿಎಂಸಿಯಲ್ಲಿ ಸಜ್ಜೆ ಪ್ರತಿ ಕ್ವಿಂಟಲ್‌ಗೆ 2,400ರೂ.ವರೆಗೂ ದರವಿತ್ತು. ಈಗ ಮಾರುಕಟ್ಟೆಗೆ ಬೆಳೆ ಆಗಮನವಾಗುತ್ತಿದ್ದಂತೆ ಬೆಲೆ ಕುಸಿತ ಕಾಣುತ್ತಿದ್ದು ಪ್ರತಿ ಕ್ವಿಂಟಲ್‌ಗೆ 1600ರಿಂದ 1700ರೂ.ವರೆಗೆ ಮಾರಾಟವಾಗುತ್ತಿದೆ ಎಂದು ಸಜ್ಜೆ ಬೆಳೆದ ರೈತರಾದ ಶಂಕ್ರಪ್ಪ ದೇಸಾಯಿ ಭೋಗಾಪುರ, ಮಲ್ಲಪ್ಪ ಹಡಗಲಿ, ಲಿಂಬೆಪ್ಪ ಹಡಗಲಿ ತಾಂಡಾ ಪತ್ರಿಕೆಗೆ ತಿಳಿಸಿದ್ದಾರೆ.

ಸಜ್ಜೆ ಬೆಳೆ ರೈತರಿಗೆ ಲಾಭಾದಾಯಕ ಅಲ್ಲದಿದ್ದರೂ ರಾಸುಗಳಿಗೆ ಮೇವು ದೊರೆಯುತ್ತದೆ. ಅಲ್ಲದೇ ಕಡಿಮೆ ಖರ್ಚಿನ ಬೆಳೆಯಾಗಿದ್ದರಿಂದ ಈ ಬಾರಿ ಮುದಗಲ್ಲ ಭಾಗದ ರೈತರು ಹೆಚ್ಚಾಗಿ ಸಜ್ಜೆ ಬೆಳೆದಿದ್ದಾರೆ.

ಬೆಳೆ ಪ್ರದೇಶ: ಕೃಷಿ ಇಲಾಖೆ ಮಾಹಿತಿ ಪ್ರಕಾರ ಲಿಂಗಸುಗೂರ ತಾಲೂಕಿನಲ್ಲಿ 41,805 ಹೆಕ್ಟೇರ್‌ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಗುರಿ ಹೊಂದಲಾಗಿತ್ತು. ಇದರಲ್ಲಿ ಸಜ್ಜೆ 19,416 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದರೆ, ತೊಗರಿ 17,772 ಹೆಕ್ಟೇರ್‌ ಪ್ರದೇಶ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾಂತೇಶ ಹವಾಲ್ದಾರ ಪತ್ರಿಕೆಗೆ ತಿಳಿಸಿದ್ದಾರೆ.

ಪ್ರತಿದಿನ ಮುದಗಲ್ಲ ಎಪಿಎಂಸಿಗೆ 300ರಿಂದ500 ಚೀಲ ಸಜ್ಜೆ ಆವಕವಾಗುತ್ತಿದೆ. ಪ್ರತಿದಿನ ಮಾರುಕಟ್ಟೆಯಲ್ಲಿ ಸಜ್ಜೆ ಆವಕ ಹೆಚ್ಚಳವಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಸಜ್ಜೆ ಧಾರಣೆ ಕುಸಿಯುತ್ತಿದೆ. ಧಾರಣೆ ಗಮನಿಸುತ್ತಿರುವ ರೈತರು ಮುಂದೆ ಇದಕ್ಕಿಂತ ಕಡಿಮೆ ಬೆಲೆಗೆ ಕುಸಿದರೆ ಹೇಗೆಂದು ಈಗಲೇ ನಾ ಮುಂದೆ ತಾ ಮುಂದೆ ಎಂದು ಸಜ್ಜೆ ಮಾರಾಟದಲ್ಲಿ ತೊಡಗಿದ್ದಾರೆ.

Advertisement

 

ದೇವಪ್ಪ ರಾಠೊಡ

Advertisement

Udayavani is now on Telegram. Click here to join our channel and stay updated with the latest news.

Next