Advertisement
ಮಂಡ್ಯ ಜಿಲ್ಲೆಯ7ತಾಲೂಕುಗಳಲ್ಲಿ ಸುಮಾರು 57,488 ಹೆಕ್ಟರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಈಗಾಗಲೇ ವಿವಿಧ ತಾಲೂಕುಗಳಲ್ಲಿ ಭತ್ತದ ಫಸಲು ಕಟಾ ವಿಗೆ ಬಂದಿದ್ದು, ಕಟಾವು ಮಾಡಲು ರೈತರು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಕಟಾವು ಯಂತ್ರಗಳು ಕಡಿಮೆ ಇರುವುದರಿಂದ ಬೇಡಿಕೆ ಹೆಚ್ಚಾಗಿದೆ. ಇದರಿಂದ ಹೆಚ್ಚಿನ ದರ ನೀಡಬೇಕಾಗಿದೆ.
Related Articles
Advertisement
ಕಾಳು ಉದುರುವ ಆತಂಕ: ಈಗಾಗಲೇ ಭತ್ತ ಕಟಾವಿಗೆ ಬಂದಿರುವುದರಿಂದ ನಿಗದಿತ ಸಮಯದಲ್ಲಿ ಕಟಾವು ಮಾಡದಿದ್ದರೆ ಕಾಳು ಉದುರುವ ಆತಂಕ ಎದುರಾಗಿದೆ. ಒಂದು ವೇಳೆಕೃಷಿ ಕಾರ್ಮಿಕರಿಂದಕಟಾವು ಮಾಡಿಸಿದರೂ ಸಹ ಕಟಾವುಮಾಡುವಾಗಭತ್ತದ ಕಾಳುಹೆಚ್ಚುಉದುರುವ ಸಾಧ್ಯತೆ ಇದೆ. ಇದರಿಂದ ರೈತರಿಗೆ ನಷ್ಟವಾಗಲಿದೆ.
ಮಧ್ಯವರ್ತಿಗಳ ಹಾವಳಿ :
ಭತ್ತ ಕಟಾವು ಮಾಡುವ ಯಂತ್ರಗಳನ್ನು ಮುಂಚಿತವಾಗಿಯೇ ಮಧ್ಯವರ್ತಿಗಳು ಬುಕ್ಕಿಂಗ್ ಮಾಡಿಕೊಂಡಿರುವುದರಿಂದ ರೈತರಿಗೆ ನಿಗದಿತ ಸಮಯದಲ್ಲಿ ಸಿಗುತ್ತಿಲ್ಲ. ಮಧ್ಯವರ್ತಿಗಳ ಮೂಲಕವೇ ಯಂತ್ರಗಳ ಬುಕ್ಕಿಂಗ್ ಮಾಡಿಕೊಳ್ಳಬೇಕಾಗಿದೆ. ಮಧ್ಯವರ್ತಿಗಳಿಗೆ ಭತ್ತಕಟಾವು ಮಾಡಿಸುವ ರೈತರು ಹಣ ಸಂಗ್ರಹಿಸಿ ಕೊಟ್ಟರೆ ಮಾತ್ರ ಯಂತ್ರಗಳು ಬರಲಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಜಿಲ್ಲಾಧಿಕಾರಿ ಆದೇಶಕ್ಕಿಲ್ಲ ಕವಡೆ ಕಾಸಿನ ಕಿಮ್ಮತ್ತು : ಕಳೆದ ಡಿ.4ರಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು, ಜಿಲ್ಲೆಯಲ್ಲಿ ಭತ್ತದ ಬೆಳೆಯುಕಟಾವಿಗೆ ಬಂದಿರುವುದರಿಂದಕೃಷಿ ಕಾರ್ಮಿಕರ ಕೊರತೆ ಹೆಚ್ಚಾಗಿದೆ. ಇದರಿಂದ ಹೊರ ರಾಜ್ಯದ ಕಟಾವು ಯಂತ್ರಗಳನ್ನು ರೈತರು ಅವಲಂಬಿಸಿದ್ದಾರೆ. ಆದ್ದರಿಂದ ಜಿಪಂ ಸಿಇಒ ಅಧ್ಯಕ್ಷತೆಯಲ್ಲಿ ನಿರ್ಧರಿಸಿದಂತೆ ಭತ್ತ ಕಟಾವು ಮಾಡುವಕಂಬೈಂಡ್ ಹಾರ್ವೆಸ್ಟರ್ ಚೈನ್/ಟ್ರಾಕ್ ಮಾಡೆಲ್ ಹಾಗೂ ಟಯರ್ ಮಾಡೆಲ್ ಯಂತ್ರಗಳಿಗೆ ಪ್ರತಿ ಗಂಟೆಗೆ 2300 ರೂ. ಹಾಗೂ 2100 ರೂ. ದರನಿಗದಿಪಡಿಸಲಾಗಿದೆ. ಅದನ್ನು ಬಿಟ್ಟುಹೆಚ್ಚುವರಿ ಹಣವಸೂಲಿ ಮಾಡಬಾರದು ಎಂದು ಆದೇಶ ನೀಡಿದ್ದಾರೆ. ಆದರೂ, ಆದೇಶವನ್ನು ದಿಕ್ಕರಿಸಿ ಯಂತ್ರದಮಾಲೀಕರು ಬೇಡಿಕೆ ಹೆಚ್ಚಿರುವುದರಿಂದ ಹೆಚ್ಚಿನ ದರ ನೀಡಿದರೆ ಮಾತ್ರ ಕಟಾವು ಮಾಡಲು ಮುಂದಾಗುತ್ತಿದ್ದಾರೆ.
ಭಕ್ತ ಕಟಾವಿಗೆ ಬಂದಿದೆ. ನಿಗದಿತ ಸಮಯದಲ್ಲಿ ಭತ್ ಕಟಾವು ಮಾಡದಿದ್ದರೆ ಕಾಳು ಉದುರಲಿವೆ.ಇತ್ತ ಕೃಷಿ ಕಾರ್ಮಿಕರು ಸಿಗುತ್ತಿಲ್ಲ. ಹೇಗಾದರೂ ಮಾಡಿಕರೆ ತಂದರೆ ಕಟಾವು ಮಾಡುವಾಗ ಹೆಚ್ಚು ಕಾಳುಗಳು ಉದುರುತ್ತವೆ. ಇದರಿಂದ ನಷ್ಟವಾಗಲಿದೆ. ಇತ್ತ ಗಂಟೆಗೆ 3 ಸಾವಿರ ಕೊಡುತ್ತೇನೆ ಎಂದರೂಯಂತ್ರಗಳು ಸಿಗುತ್ತಿಲ್ಲ. ಏನುಮಾಡುವುದು ಎಂದು ತೋಚುತ್ತಿಲ್ಲ. –ಭಾಸ್ಕರ್, ರೈತ, ಚಿಕ್ಕ ಮಂಡ್ಯ
ಇವತ್ತು ನಾಳೆ ಎಂದು ಸಬೂಬು ಹೇಳುತ್ತಿದ್ದಾರೆ. ಆದರೆ,ಯಂತ್ರಗಳುಇನ್ನೂ ಬರುತ್ತಿಲ್ಲ.ಕಟಾವು ಅವಧಿ ಮೀರುತ್ತಿದೆ.ಇತ್ತ ಖರೀದಿಕೇಂದ್ರಗಳಿಗೆ ಭತ್ತ ಸಾಗಿಸುವ ದಿನವೂ ಹತ್ತಿರವಾಗುತ್ತಿದೆ. ಸಮಯಕ್ಕೆ ಸರಿಯಾಗಿ ಬೇಗ ಕಟಾವು ಮಾಡಿದರೆ ಇಳುವರಿಬರಲಿದೆ. ಇಲ್ಲದಿದ್ದರೆ ನಷ್ಟ ಉಂಟಾಗಲಿದೆ. ಆದ್ದರಿಂದ ಜಿಲ್ಲಾಡಳಿತಕ್ರಮಕೈಗೊಳ್ಳಬೇಕು. –ಈ.ಬಸವರಾಜು, ಇಂಡುವಾಳು ಗ್ರಾಮ
–ಎಚ್.ಶಿವರಾಜು