ಹಿರೇಬಾಗೇವಾಡಿ: ಬೆಳೆಗಳಿಗೆ ನೀರುಣಿಸಲು ಹಗಲಿನಲ್ಲಿ ಸತತವಾಗಿ 7 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕುಎಂದು ಆಗ್ರಹಿಸಿ ಹಿರೇಬಾಗೇವಾಡಿ ಹಾಗೂಸುತ್ತಮುತ್ತಲಿನ ಗ್ರಾಮಗಳ ರೈತರು ಸೋಮವಾರಇಲ್ಲಿನ ಹೆಸ್ಕಾಂ ಶಾಖಾಧಿ ಕಾರಿ ಕಚೇರಿಗೆ ಮುತ್ತಿಗೆ ಪ್ರತಿಭಟಸಿದರು.
ಭೆಂಡಿಗೇರಿಯ ರೈತ ಪ್ರಕಾಶಗೌಡ ಪಾಟೀಲಮಾತನಾಡಿ, ಇಲ್ಲಿನ ಹೆಸ್ಕಾಂ ಅಧಿ ಕಾರಿಗಳು ರಾತ್ರಿ1 ಗಂಟೆಯಿಂದ 4 ಗಂಟೆ ಅವಧಿ ಯಲ್ಲಿ 3 ಫೇಸ್‌ವಿದ್ಯುತ್ ಪೂರೈಸುತ್ತಿದ್ದು, ಇದರಿಂದ ಬೆಳೆಗಳನ್ನುಬದುಕಿಸಿಕೊಳ್ಳಲು ರೈತರು ರಾತ್ರಿ ಸಮಯದಲ್ಲಿತಮ್ಮ ಜೀವದ ಹಂಗು ತೊರೆದು ಹೊಲಗಳಲ್ಲಿಕೆಲಸಮಾಡಬೇಕಾದ ಅನಿವಾರ್ಯತೆ ಇದೆ. ಆದರೆ ಆಗಕೂಡ ಹತ್ತಾರು ಸಲ ವಿದ್ಯುತ್ ಕಡಿತಗೊಳಿಸುತ್ತಾರೆ. ವಿದ್ಯುತ ಕಡಿತಗೊಂಡ ಸಮಯದಲ್ಲಿ ಪೋನ್ ಮಾಡಿದರೆಯಾರೂ ಕರೆ ಸ್ವೀಕರಿಸುವುದಿಲ್ಲ ಎಂದು ಅಧಿಕಾರಿಗಳ ವಿರುದ್ದ ಹರಿಹಾಯ್ದರು.
ಈ ಸಮಯದಲ್ಲಿ ವಿದ್ಯುತ ಲೈನ್ ದುರಸ್ತಿ, ಕಂಬಗಳ ಬದಲಾವಣೆ ಸೇರಿದಂತೆ ಹಲವಾರು ದೂರುಗಳು ರೈತರಿಂದ ಬಂದವು, ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಂತೆ ಶಾಖಾಧಿಕಾರಿ ರಾಘವೇಂದ್ರ ಹೋಟಗಿ ಅವರಿಗೆ ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ್ ವೈಶಾಲಿ ತುಡುವೇಕಾರ ಸೂಚಿಸಿದರು.
ಸರ್ಕಾರದ ನಿಯಮದಂತೆ 3 ಗಂಟೆ ಬದಲಾಗಿ ರೈತರಿಗೆ 7 ಗಂಟೆ 3 ಫೇಸ್ ವಿದ್ಯುತ್ ನೀಡುವಂತೆ ಗ್ರಾಪಂ ಸದಸ್ಯ ಸುರೇಶ ಇಟಗಿ ತರಾಟೆಗೆ ತೆಗೆದುಕೊಂಡರೆ, ಬೇಡಿಕೆ ಈಡೆರದಿದ್ದರೆ ಇನ್ನೂ ಹೆಚ್ಚು ರೈತರನ್ನು ಸೇರಿಸಿ ಉಗ್ರಹೋರಾಟ ಮಾಡಲಾಗುವುದು ಎಂದು ಗ್ರಾಪಂ ಸದಸ್ಯಈರಪ್ಪ ಅರಳೀಕಟ್ಟಿ ಅಧಿ ಕಾರಿಗಳಿಗೆ ಎಚ್ಚರಿಗೆ ನೀಡಿದರು.
ಮಾ. 26 ರಿಂದ ಹಗಲಿನಲ್ಲಿ 5 ಗಂಟೆ ಹಾಗೂ ರಾತ್ರಿ ವೇಳೆ 2 ಗಂಟೆ ವಿದ್ಯುತ ಪೂರೈಕೆ ಮಾಡುತ್ತೇವೆ. ಅಲ್ಲದೇಹಿರೇಬಾಗೇವಾಡಿಯಲ್ಲಿ 20 ಎಂವಿಎ ಪರಿವರ್ತಕಅಳವಡಿಕೆಯ ನಂತರ ಹಗಲಿನಲ್ಲಿ ಹೆಚ್ಚು ಸಮಯವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಅಧಿಕಾರಿಗಳು ಲಿಖೀತ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ನಿಂಗಪ್ಪ ರಾಮಾಪುರ,ರುದ್ರಯ್ನಾ ಹಿರೇಮಠ, ಬಸವರಾಜ ಡಮ್ಮಣಗಿ,ದುಂಡಪ್ಪ ಮೆಳೇದ, ಸಂತೋಷ ಅಂಗಡಿ, ಚಂದ್ರಪ್ಪ ಉಪ್ಪೀನ, ಪ್ರಕಾಶ ಪಾಟೀಲ, ಈರಣ್ಣ ಅರಳೀಕಟ್ಟಿ, ಸಿ.ಸಿಪಾಟೀಲ, ಆನಂದ ಪಾಟೀಲ, ಮಲಗೌಡ ಪಾಟೀಲ,ಶ್ರೀಕಾಂತ ಮಾಧುಬರಮನ್ನವರ, ಗೌಸಮೋದ್ದೀನಜಾಲಿಕೊಪ್ಪ, ಪಕ್ಕೀರಗೌಡ ಪಾಟೀಲ ಹಾಗೂ ಮುತ್ನಾಳ,ವಿರಪನಕೊಪ್ಪ, ಕುಕಡೊಳ್ಳಿ, ಭೆಂಡಿಗೇರಿ, ಗಜಪತಿ, ಬಡಸ, ಅಂಕಲಗಿ ಗ್ರಾಮಗಳಿಂದ ಬಂದಿದ್ದ ನೂರಾರು ರೈತರು ಇದ್ದರು.