Advertisement

ಭೂ ಹಗರಣ ತನಿಖೆ ಮಾಡಲು ರೈತ ಸಂಘ ಒತ್ತಾಯ   

04:00 PM Apr 27, 2022 | Team Udayavani |

ಮುಳಬಾಗಿಲು: ತಾಲೂಕಿನಲ್ಲಿ ನಡೆದಿರುವ ಭೂ ಹಗರಣವನ್ನು ತನಿಖೆ ನಡೆಸಿ, ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸದೇ ಇರುವ ಕಂದಾಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಮಂಗಳವಾರ ನಗರದ ಶಾಸಕ ಎಚ್‌ .ನಾಗೇಶ್‌ ಅವರ ಕಚೇರಿಯಲ್ಲಿ ಮನವಿ ಸಲ್ಲಿಸಿದರು.

Advertisement

ರೈತ ಸಂಘದ ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್‌ ಈ ಸಂದರ್ಭದಲ್ಲಿ ಮಾತನಾಡಿ, ಪ್ರತಿಯೊಂದು ದಾಖಲೆಗೂ ತಿಂಗಳಾನುಗಟ್ಟಲೇ ತಾಲೂಕು ಕಚೇರಿಗೆ ಮತ್ತು ಬೆಳೆ ಪರಿಹಾರಕ್ಕೆ ಸರ್ಕಾರದ ಸೌಲಭ್ಯಗಳ ಪಡೆಯಲು ತೋಟಗಾರಿಕೆ, ಕೃಷಿ ಇಲಾಖೆಗೆ ಅಲೆದಾಡಿದರೂ ಸಮಸ್ಯೆ ಪರಿಹಾರವಾಗುತ್ತಿಲ್ಲ ಎಂದು ಆರೋಪಿಸಿದರು.

ಯುವ ರೈತ ಮುಖಂಡ ಪದ್ಮಘಟ್ಟ ಧರ್ಮ ಮಾತನಾಡಿ, ಪ್ರಮುಖ ಕಡತಗಳು ರಾತ್ರೋರಾತ್ರಿ ಭೂಗಳ್ಳರ ಮತ್ತು ದಲ್ಲಾಳಿಗಳ ಮನೆ ಬಾಗಿಲಿಗೆ ನಿಯತ್ತಾಗಿ ತಲುಪಿಸಿ ತಿದ್ದುಪಡಿ ಮಾಡುವ ಮಟ್ಟಕ್ಕೆ ಅಲ್ಲಿನ ಸಿಬ್ಬಂದಿಗಳಾದ ಚೀಕೂರು ಮಣಿ ಇಡೀ ವ್ಯವಸ್ಥೆಯನ್ನೇ ಅಂಗೈಯಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದಾನೆ, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ತಾಲೂಕು ದಂಡಾಧಿಕಾರಿಗಳು ಮೌನವಾಗಿದ್ದಾರೆ ಎಂದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ವಡ್ಡಹಳ್ಳಿ ಶಶಿಕುಮಾರ್‌, ಸೋಮಶೇಖರ್‌, ಹಸಿರುಸೇನೆ ತಾಲೂಕು ಅಧ್ಯಕ್ಷ ವೇಣು, ನವೀನ್‌, ಕೇಶವ, ನಂಗಲಿ ನಾಗೇಶ್‌, ಲಾಯರ್‌ ಮಣಿ, ರಾಮಕೃಷ್ಣಪ್ಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next