Advertisement

ಮತ್ತೂಮ್ಮೆ ಸಮೀಕ್ಷೆ ನಡೆಸಲು ರೈತರ ಆಗ್ರಹ

12:15 PM Jan 25, 2020 | Suhan S |

ಚಿಕ್ಕೋಡಿ: ಕೃಷ್ಣಾ ಮತ್ತು ಉಪನದಿಗಳ ಭೀಕರ ಪ್ರವಾಹದಲ್ಲಿ ಬಿದ್ದ ಮನೆಗಳಿಗೆ ಮತ್ತೂಮ್ಮೆ ಸರ್ವೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯಿಂದ ತಾಲೂಕಿನ ಯಡೂರ ಗ್ರಾಪಂ ಪಿಡಿಒಗೆ ಮನವಿ ಸಲ್ಲಿಸಿದರು. ಭೀಕರ ಪ್ರವಾಹದಿಂದ ತತ್ತರಿಸಿಹೋದ ಪ್ರವಾಹ ಪೀಡಿತ ಯಡೂರ, ಕಲ್ಲೋಳ, ಇಂಗಳಿ, ಚಂದೂರ, ಮಾಂಜರಿ ಗ್ರಾಮದಲ್ಲಿ ಪ್ರವಾಹದಿಂದ ತತ್ತರಿಸಿ ಮನೆಗಳನ್ನು ಕಳೆದುಕೊಂಡು ಸಂತ್ರಸ್ತರು ಇನ್ನೂ ಬೀದಿಯಲ್ಲಿ ವಾಸ ಮಾಡುತ್ತಿದ್ದಾರೆ.

Advertisement

ಈಗ ಮಾಡಿರುವ ಸಮೀಕ್ಷೆ ಅಷ್ಟೊಂದು ಸಮರ್ಪಕವಾಗಿಲ್ಲ, ರಾಜ್ಯ ಸರ್ಕಾರ ಮತ್ತೂಮ್ಮೆ ಸರ್ವೇ ಮಾಡಿ ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ಮನೆಗಳು ಸಿಗುವಂತೆ ಮಾಡಬೇಕೆಂದು ಒತ್ತಾಯಿಸಿದರು. ಕಳೆದ ಜುಲೈ, ಆಗಸ್ಟ್‌ ತಿಂಗಳಲ್ಲಿ ಪ್ರವಾಹ ಬಂದು ಹೋಗಿದೆ. ಇನ್ನೂವರೆಗೆ ಸಂತ್ರಸ್ತರಿಗೆ ಮನೆಗಳು ಲಭಿಸುತ್ತಿಲ್ಲ, ಸರ್ಕಾರ ಬಿಡುಗಡೆ ಮಾಡಿರುವ ಮೊದಲನೆ ಕಂತು ಬಂದು ಮೂರು ತಿಂಗಳು ಕಳೆದಿವೆ. ಆದರೆ ಎರಡನೆ ಕಂತು ಬಿಡುಗಡೆಯಾಗುತ್ತಿಲ್ಲ, ಮತ್ತು ಯಡೂರ ಗ್ರಾಮದಲ್ಲಿ ನಿಜವಾದ ಫಲಾನುಭವಿಗಳಿಗೆ ಮನೆಗಳು ಸಿಕ್ಕಿಲ್ಲ, ಹೀಗಾಗಿ ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯತ್‌ ಅಧಿ ಕಾರಿಗಳು ಎಚ್ಚೆತ್ತುಕೊಂಡು ಮತ್ತೂಮ್ಮೆ ಸರ್ವೇಮಾಡಬೇಕೆಂದು ರೈತ ಸಂಘದ ಸದಸ್ಯರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪಾಂಡು ಕೋಳಿ, ಮಂಜುನಾಥ ಪರಗೌಡ, ಲಕ್ಷ್ಮಣ ಉಮರಾಣಿ, ಬಾಬು ವಾಳಕೆ, ದಾದು ನರವಾಡೆ, ಮಹೇಶ ಬೇಳವಿ, ದುಂಡಯ್ನಾ ಮಠಪತಿ, ಕೃಷ್ಣಾಬಾಯಿ ಸೂರ್ಯವಂಶಿ, ಚಂದು ಕಮತೆ, ಶ್ರೀಕಾಂತ್‌ ಬೋರಗಾಂವೆ, ಗುಂಡು ಶಿಂಗಾಡೆ,ಅಶೊಕ ಜಾಧವ, ರವಿ ಜಡೆ, ಚೇತನ ಕಾಂಬಳೆ, ವೀರಗೌಡ ಪಾಟೀಲ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next