Advertisement

24ರಂದು ರೈತ ಸಂಘದಿಂದ ಹೆದ್ದಾರಿ ಬಂದ್‌ಗೆ ನಿರ್ಧಾರ

04:29 PM Oct 21, 2019 | Team Udayavani |

ಕೋಲಾರ: ಕೃಷಿ ಮತ್ತು ಹೈನೋದ್ಯಮಕ್ಕೆ ಮಾರಕವಾಗಿರುವ ಮುಕ್ತ ಮಾರುಕಟ್ಟೆ ಒಪ್ಪಂದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದೆಂದು ಅ.24ಕ್ಕೆ ಹಸುಗಳ ಸಮೇತ ಕೊಂಡರಾಜನಹಳ್ಳಿಯ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಲು ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.

Advertisement

ಸಭೆಯಲ್ಲಿ ಮಾತನಾಡಿದ ರೈತ ಸಂಘ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಆರ್‌ಸಿಇಪಿ (ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ) ಒಪ್ಪಂದಕ್ಕೆ ಸಹಿ ಹಾಕಿದ್ದಲ್ಲಿ 156ಮಿಲಿಯನ್‌ ಹಾಲು ಉತ್ಪಾದಕರು ಬೀದಿಗೆ ಬರಲಿದ್ದಾರೆ. ಆದ್ದರಿಂದ ಅ.24ರಂದು ರಾಷ್ಟ್ರಾದ್ಯಾಂತ ರೈತ ಚಳವಳಿ ಮಾಡಲಾಗುತ್ತಿದೆ ಎಂದರು. ಜಿಲ್ಲಾಧ್ಯಕ್ಷ ಮರಗಲ್‌ ಶ್ರೀನಿವಾಸ್‌, ರೈತನೇ ದೇಶದ ಬೆನ್ನೆಲಬು ಎಂದು ಅವರ ಮೇಲೆ ಪ್ರಮಾಣ ಮಾಡುವ ಸರ್ಕಾರಗಳು, ದಿನೇ ದಿನೆ ರೈತರನ್ನು ಒಂದಲ್ಲಾ ಒಂದು ನೀತಿ ಜಾರಿ ಮಾಡಿ ಸಂಪೂರ್ಣವಾಗಿ ರೈತ ಕುಲವನ್ನೇ ಸರ್ವನಾಶ ಮಾಡಲು ಮುಂದಾಗಿವೆ ಎಂದು ಆರೋಪಿಸಿದರು. ಮಹಿಳಾ ಜಿಲ್ಲಾಧ್ಯಕ್ಷೆ

ಎ.ನಳಿನಿ, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಬಂಗವಾದಿ ನಾಗರಾಜಗೌಡ, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್‌, ಹುಲ್ಕೂರ್‌ ಹರಿಕುಮಾರ್‌, ಕ್ಯಾಸಂಬಳ್ಳಿ ಪ್ರತಾಪ್‌, ವಡ್ಡಹಳ್ಳಿ ಮಂಜುನಾಥ್‌‌, ತೆರ್ನಹಳ್ಳಿ ಆಂಜಿನಪ್ಪ, ಮಾಲೂರು ತಾಲೂಕು ಅಧ್ಯಕ್ಷ ಹೊಸಹಳ್ಳಿ ವೆಂಕಟೇಶ್‌, ಐತಂಡಹಳ್ಳಿ ಅಂಬರೀಶ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next