ಮಹಾಲಿಂಗಪುರ: ಕಳೆದ 5-6 ದಿನಗಳಿಂದ ಸುರಿದ ಚಿತ್ತಾ ಮಳೆ ರೈತರನ್ನು ಹೈರಾಣಾಗಿಸಿದೆ. ಅಗತ್ಯಕಿಂತ ಅಧಿಕ ಮಳೆಯಾಗಿ ಕಷ್ಟ-ನಷ್ಟ ಅನುಭವಿಸುವಂತಾಗಿದೆ. ನಿರಂತರ ಮಳೆಯಾದ ಕಾರಣ ಪಟ್ಟಣ ಹಾಗೂ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಲ್ಲಿನ ರೈತರು ಬೆಳೆದ ಗೋವಿನಜೋಳ,ಕಬ್ಬು, ಅರಿಷಿನ, ಬಾಳೆ, ತರಕಾರಿ, ಹೂ ಸೇರಿದಂತೆ ಪ್ರತಿಯೊಂದು ಬೆಳೆ ಜಲಾವೃತಗೊಂಡಿವೆ.
ಅಪಾರ ಪ್ರಮಾಣದ ಗೋವಿನ ಜೋಳದ ಬೆಳೆಹಾನಿ: ರೈತರು ಬೆಳೆದ ಒಟ್ಟು ಬೆಳೆಯ ಶೇ. 40ರಷ್ಟು ಗೋವಿನಜೋಳದ ಬೆಳೆ ಹಾನಿಯಾಗಿದೆ. ಪ್ರತಿವರ್ಷ ಎಕರೆಗೆ ಬೆಳೆಯುತ್ತಿದ್ದ ಇಳುವರಿ ಪ್ರಮಾಣದಲ್ಲೂ ಕಡಿಮೆಯಾಗಿದೆ. ಅಕ್ಟೋಬರ್ ಗೋವಿನ ಜೋಳದ ಕಟಾವು ಸಮಯ. ಈ ಸಮಯದಲ್ಲೇ ಹೆಚ್ಚಾದ ಮಳೆಯಿಂದ ಬೆಳೆ ನೀರಲ್ಲಿ ನಿಂತು ಹಾನಿಯಾಗಿದೆ.ಜತೆಗೆ ರೈತರ ಜಾನುವಾರುಗಳ ಮೇವಿಗೆ ಆಸರೆಯಾಗಿದ್ದ ಗೋವಿನಜೋಳದ ಕಣಿಕೆಯೂ ನಾಶವಾಗಿದೆ.
ರಾಶಿಗೆ ಮುನ್ನ ಮೊಳಕೆಯೊಡೆದ ತೆನೆಗಳು: ರನ್ನಬೆಳಗಲಿ ಪಟ್ಟಣದ ಶೇಖರ ಕಟ್ಟಿಮನಿ ಎಂಬುವರ ಜಮೀನಿನಲ್ಲಿ ಗೋವಿನಜೋಳದ ತೆನೆಮುರಿದು, ಮಳೆಯಿಂದ ರಾಶಿಗೆ ಅಡಚಣೆಯಾಗಿ ಹೊಲದಲ್ಲಿ ಒಂದೆಡೆ ಶೇಖರಿಸಿ ಇಟ್ಟಿದ್ದಾರೆ.ವಾರದಿಂದ ನಿರಂತರ ಮಳೆಯಾಗಿ ರಾಶಿ ಮಾಡುವಮುನ್ನವೇ ಅರ್ಧದಷ್ಟು ತೆನೆಗಳು ಮಳೆಗೆ ನೆನೆದುಮೊಳಕೆಯೊಡದಿವೆ. ಇದರಿಂದ ಕೈಗೆ ಬಂದು ತುತ್ತು ಬಾಯಿಗೆ ಬರದಂತಾಗಿ, ಬಿತ್ತನೆಗೆ ಹಾಕಿದಬೀಜ, ಗೊಬ್ಬರ, ಕಸ, ತೆನೆ ಮುರಿಯಲು ಕೊಟ್ಟಕೂಲಿಯೂ ಸಹ ವಾಪಸ್ ಬರುವದಿಲ್ಲ ಎಂದು ತಮ್ಮ ನಷ್ಟದ ಅಳಲನ್ನು ಉದಯವಾಣಿಯೊಂದಿಗೆ ತೋಡಿಕೊಂಡಿದ್ದಾರೆ.
ನೆಲಕಚ್ಚಿದ ಕಬ್ಬು: ಮಹಾಮಳೆ ಮತ್ತು ಗಾಳಿಗೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೂರಾರು ಎಕರೆ ಕಬ್ಬು ನೆಲಕ್ಕೆ ಬಿದ್ದಿದೆ. ಇದರಿಂದ ಕಬ್ಬಿನ ಬೆಳವಣಿಗೆಕುಂಠಿತವಾಗಿ, ಇಳುವರಿಯು ಕಡಿಮೆ ಆಗುತ್ತದೆ ಎಂಬ ಆತಂಕರೈತರದ್ದಾಗಿದೆ. ಪಟ್ಟಣದಲ್ಲಿ ಬಾಳಕೃಷ್ಣಮಾಳವದೆ ಎಂಬುವರ ಸುಮಾರು 6-7 ಎಕರೆ ಕಬ್ಬು ನೆಲಕ್ಕೆ ಬಿದ್ದು ಚಾಪೆ ಹಾಸಿದಂತಾಗಿದೆ. ಇದರಿಂದಇಳುವರಿ ಕಡಿಮೆಯಾಗಿ ಲಕ್ಷಾಂತರ ನಷ್ಟವಾಗಲಿದೆಎನ್ನುತ್ತಾರೆ. ಮಹಾಲಿಂಗಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೈತರು ಬೆಳೆದ ನೂರಾರು ಎಕರೆ ಅರಿಷಿನ ಬೆಳೆ ಜಲಾವೃತಗೊಂಡಿದೆ. ವರ್ಷದಆರಂಭದಲ್ಲಿ ಲಾಕ್‌ಡೌನ್ ಸಮಸ್ಯೆ, ನಂತರ ಪ್ರವಾಹ, ಈಗ ವಿಪರೀತ ಮಳೆಯಿಂದಾಗಿ ತರಕಾರಿ, ಗೋವಿನಜೋಳ, ಅರಿಷಿನ, ಬಾಳೆ, ಹೂವಿನ ತೋಟ ನಷ್ಟವಾಗುತ್ತಿದೆ. 2020 ಕರಾಳ ವರ್ಷವಾಗಿ ತೀವ್ರ ತೊಂದರೆಯಾಗಿದೆ ಎನ್ನುತ್ತಾರೆ ವಿವಿಧ ಗ್ರಾಮಗಳ ರೈತರಾದ ಎ.ಟಿ.ಪಾಟೀಲ, ಶಿವಲಿಂಗ ತೇಲಿ,ಬಸವರಾಜ ಸತ್ತಿಗೇರಿ, ಬಾಬು ಹಾದಿಮನಿ, ರಾಜು ಸೈದಾಪುರ, ಪರಸಪ್ಪ ಕೌಜಲಗಿ.
1271 ಹೆಕ್ಟೇರ್‌ನಷ್ಟು ಬೆಳೆಹಾನಿರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಭಾಗದ 10 ಗ್ರಾಮಗಳಲ್ಲಿಮಳೆಯಿಂದಾಗಿ ಕಬ್ಬು 838 ಮತ್ತುಗೋವಿನಜೋಳ 433 ಹೆಕ್ಟೇರ್ ಸೇರಿ ಒಟ್ಟು1271 ಹೆಕ್ಟೇರನಷ್ಟು ಬೆಳೆಹಾನಿಯಾಗಿದೆ.ಬೆಳೆ ಹಾನಿಯ ಸಮೀಕ್ಷೆ ನಡೆಸಿ, ಬೆಳೆಹಾನಿಯ ವರದಿಯನ್ನು ಕೃಷಿ ಇಲಾಖೆಯ ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ.
–ತಸ್ಕೀನ ಡಾಂಗೆ, ಗ್ರೇಡ್-2 ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ
-ಚಂದ್ರಶೇಖರ ಮೋರೆ