Advertisement

ಮೇವಿಲ್ಲದೆ ಕೃಷಿಕರ ಪರದಾಟ

04:20 PM Mar 08, 2020 | Suhan S |

ಅಂಕೋಲಾ: ಕಳೆದ ಆಗಸ್ಟ್‌ನಲ್ಲಿ ನಡೆದ ಭೀಕರ ನೆರೆ ಹಾವಳಿಯಿಂದ ಕೃಷಿ ಭೂಮಿಯಲ್ಲಿ ವಾರಗಳ ಕಾಲ ನೀರು ತುಂಬಿಕೊಂಡು ಭತ್ತದ ಬೆಳೆ ಸಂಪೂರ್ಣ ನೆಲಕ್ಕಚ್ಚಿರುವ ಪರಿಣಾಮ ರೈತರ ದನ ಕರುಗಳಿಗೆ ಮೇವಿಲ್ಲದೆ ರೈತರು ಪರದಾಡುವ ಪರಿಸ್ಥಿತಿ ಬಂದೊದಗಿದೆ.

Advertisement

ತಾಲೂಕಿನ ಶಿರೂರು, ಬೆಳಸೆ, ಚಂದುಮಠ, ತೆಂಕನಾಡ ಭಾಗದ ದನ ಕರುಗಳಿಗೆ ಮೇವಿಲ್ಲದೆ ಬರಡಾಗುತ್ತಿದೆ. ರೈತರ ಬತ್ತದ ಬೆಳೆ ನೆರೆಯಿಂದ ನಾಶವಾಗಿದ್ದು ಸಾಕಿರುವ ಜಾನುವಾರುಗಳ ಸಂರಕ್ಷಣೆಗೆ ಜುಲೈ 2020ರ ಕೊನೆಯವರೆಗೆ ಅವಶ್ಯವಿರುವ ಮೇವಿನ ಸಂಗ್ರಹಣೆ ಮಾಡಿ ಇಡಲು ಸಾಧ್ಯವಾಗಲಿಲ್ಲ. ಈಗ ಈ ಭಾಗದಲ್ಲಿ ಜಾನುವಾರುಗಳಿಗೆ ಅವಶ್ಯವಿರುವ ಮೇವು ಒದಗಿಸಿಕೊಳ್ಳುವ ಯಾವುದೇ ಮೂಲವು ಇಲ್ಲ. ಸಂಬಂಧಿಸಿದ ಅಧಿಕಾರಿಗಳು ನೆರೆ ಬಂದಿರುವ ಸಂದರ್ಭದಲ್ಲಿ ಬೆಳೆ ನಾಶವಾದ ಮತ್ತು ಜಾನುವಾರುಗಳ ಪರಶೀಲನೆ ನಡೆಸಿದ್ದಾರೆ.

ಪರಿಶೀಲನೆ ನಡೆಸಿದ ಬಳಿಕ ವರದಿಯನ್ನು ಸರಕಾರಕ್ಕೆ ಸರಿಯಾದ ಸಮಯದಲ್ಲಿ ಸಲ್ಲಿಸದೆ ಈ ಬಾಗದ ಹಲವು ಕುಟುಂಬಗಳ ಹೆಸರಗಳೆ ಇಲ್ಲವಾಗಿದೆ. ಈ ಮಧ್ಯೆ ದನಕರುಗಳಿಗೆ ಮೇವು ನಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು. ಮಾರ್ಚ ಆರಂಭವಾದರು ಮೇವಿನ ಮಾತು ಎತ್ತುತ್ತಿಲ್ಲ. ರೈತರು ಕಚೇರಿಗೆ ಅಲೆದಾಡಿದರು ಯಾವ ಅಧಿಕಾರಿಗಳೂ ಸರಿಯಾಗಿ ಸ್ಪಂದಿಸುತ್ತಿಲ್ಲವೆ ಎಂದು ರೈತರು ದೂರಿದ್ದಾರೆ. ದನಕರುಗಳ ಸಂರಕ್ಷಣೆಗೆ ಅವಶ್ಯವಿರುವ ಮೇವು ಪೂರೈಸುವ ವ್ಯವಸ್ಥೆಯನ್ನು ಸರಕಾರದಿಂದ ಈ ಕೂಡಲೆ ಪ್ರಾರಂಭಿಸಿ ಎಂಬುದು ಕೃಷಿಕರ ಅಳಲಾಗಿದೆ.

ಈ ಹಿಂದೆ ಮಾಡಿದ ವರದಿ ಆಧಾರದಲ್ಲಿ ರೈತರ ಕುಟುಂಬಗಳ ಮತ್ತು ಜಾನುವಾರುಗಳ ಪರಶೀಲನೆ ಮತ್ತೂಮ್ಮೆ ನಡೆಸಿ ಕುಟುಂಬಕ್ಕೆ ಯೋಗ್ಯ ಪರಿಹಾರವನ್ನು ಶೀಘ್ರದಲ್ಲಿಯೆ ಮಂಜೂರು ಮಾಡುವುದರೊಂದಿಗೆ ತಕ್ಷಣ ದನಕರುಗಳಿಗೆ ಮೇವು ಪೂರೈಸಲು ಆಗ್ರಹಿಸಿದ್ದಾರೆ.

ನಮ್ಮ ಗದ್ದೆಯಲ್ಲಿ ನೆರೆಯಿಂದ ನೀರು ತುಂಬಿದ ಪರಿಣಾಮ ಬೆಳೆದಿರುವ ಭತ್ತ ಎಲ್ಲವು ಕೊಳೆತು ಹೋಗಿದೆ. ನಮ್ಮ ದನಗಳಿಗೆ ಬೇಕಾಗುವ ಹುಲ್ಲು ಸಿಗದಂತಾಗಿದೆ. ಅಧಿಕಾರಿಗಳು ಇಲ್ಲಿಗೆ ಬಂದಾಗ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು. ಮಾರ್ಚ್‌ ಬಂದರು ಮೇವಿಲ್ಲದೆ ದನಗಳು ಬರಡಾಗುತ್ತಿವೆ. ದಿನಗೂಲಿ ಮಾಡಿ ಜೀವನ ನಡೆಸುವ ನಮಗೆ ಮೇವು ಖರೀದಿ ಮಾಡಲು ನಮ್ಮಿಂದ ಸಾಧ್ಯವಾಗದು. -ಮಾಣಿ ಸಣ್ಣು ಗೌಡ, ಗ್ರಾಮಸ್ಥ

Advertisement

ಈಗಾಗಲೇ ಸರಕಾರದಿಂದ ನೆರೆ ಪರಿಹಾರ ನೀಡಲಾಗುತ್ತಿದೆ. ಮೇವನ್ನು ಕೂಡ ಸಕಾಲದಲ್ಲಿ ಆಯಾ ಸ್ಥಳಗಳಿಗೆ ಕಲ್ಪಿಸಿ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು. ಈ ಕುರಿತು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.  -ರೂಪಾಲಿ ನಾಯ್ಕ, ಶಾಸಕಿ

 

-ಅರುಣ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next