Advertisement

ಕೃಷಿ ನೀತಿಗೆ ವಿರೋಧ: ಬೃಹತ್ ಪ್ರತಿಭಟನೆ- ಆರು ರಾಜ್ಯಗಳ ರೈತರಿಗೆ ದೆಹಲಿ ಪ್ರವೇಶಿಸಲು ಅನುಮತಿ

03:07 PM Nov 27, 2020 | Nagendra Trasi |

ನವದೆಹಲಿ: ಕೇಂದ್ರದ ಕೃಷಿ ನೀತಿ ವಿರೋಧಿಸಿ ಪಂಜಾಬ್ ಸೇರಿದಂತೆ ಆರು ರಾಜ್ಯಗಳ ಸಾವಿರಾರು ರೈತರ ದೆಹಲಿ ಚಲೋ ಪ್ರತಿಭಟನೆಯನ್ನು ತಡೆಯುವ ನಿಟ್ಟಿನಲ್ಲಿ ಹರಸಾಹಸ ಪಡುತ್ತಿದ್ದು, ಏತನ್ಮಧ್ಯೆ ಪಂಜಾಬ್-ಹರ್ಯಾಣ ಗಡಿಭಾಗದಲ್ಲಿ ಘರ್ಷಣೆ ನಡೆದಿತ್ತು. ಇದೀಗ ಶುಕ್ರವಾರ ವಿವಿಧ ಭಾಗದಿಂದ ಆಗಮಿಸುತ್ತಿರುವ ಪ್ರತಿಭಟನಾ ನಿರತ ರೈತರಿಗೆ ದೆಹಲಿ ಪ್ರವೇಶಿಸಲು ಅನುಮತಿ ನೀಡಲಾಗಿದೆ ಎಂದು ವರದಿ ತಿಳಿಸಿದೆ.

Advertisement

ಕೇಂದ್ರದ ಕೃಷಿ ನೀತಿ ವಿರೋಧಿಸಿ ಉತ್ತರಪ್ರದೇಶ, ಹರ್ಯಾಣ, ಉತ್ತರಾಖಂಡ್, ರಾಜಸ್ಥಾನ್, ಕೇರಳ ಮತ್ತು ಪಂಜಾಬ್ ಸೇರಿದಂತೆ ಆರು ರಾಜ್ಯಗಳ ರೈತರು ಟ್ರ್ಯಾಕ್ಟರ್ ಮೂಲಕ ಹಲವು ದಿನಗಳಿಗೆ ಸಾಕಾಗುವಷ್ಟು ಆಹಾರ, ನೀರಿನ ಜತೆಗೆ ದೆಹಲಿ ಚಲೋ ಆರಂಭಿಸಿದ್ದರು. ಆರು ರಾಜ್ಯಗಳಿಂದ ಆಗಮಿಸುತ್ತಿರುವ ಸಾವಿರಾರು ರೈತರು ರಾಜಧಾನಿ ಕೇಂದ್ರಭಾಗವಾಗಿರುವ ರಾಮ್ ಲೀಲಾ ಮೈದಾನದಲ್ಲಿ ಧರಣಿ ನಡೆಸಲು ಉದ್ದೇಶಿಸಿರುವುದಾಗಿ ವರದಿ ತಿಳಿಸಿದೆ.

ರೈತರು ಆದೇಶವನ್ನು ಪಾಲಿಸುವ ಮೂಲಕ ಬುರಾರಿ ನಿರಾಂಕಾರಿ ಮೈದಾನದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕೆಂದು ದೆಹಲಿ ಪೊಲೀಸ್ ಕಮಿಷನರ್ ಮನವಿ ಮಾಡಿಕೊಂಡಿದ್ದಾರೆ. ಪ್ರತಿಭಟನಾನಿರತ ರೈತರಿಗೆ ರಾಮ್ ಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡುವುದಾಗಿ ಈ ಮೊದಲು ಪೊಲೀಸ್ ಕಮಿಷನರ್ ತಿಳಿಸಿದ್ದರು. ಆದರೆ ಇದೀಗ ನಿರಾಂಕಾರಿ ಮೈದಾನದಲ್ಲಿ ರೈತರಿಗೆ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗಿದೆ ಎಮದು ತಿಳಿಸಿದ್ದಾರೆ.

ಇದನ್ನೂ ಓದಿ:ದ್ವೇಷದಿಂದ ಕಂಗನಾ ನಿವಾಸ ಭಾಗಶಃ ಧ್ವಂಸ, ಇದು ಕಾನೂನು ಸಮ್ಮತವಲ್ಲ: ಹೈಕೋರ್ಟ್

Advertisement

Udayavani is now on Telegram. Click here to join our channel and stay updated with the latest news.

Next