Advertisement
2014ರಲ್ಲಿ ಇಲ್ಲಿ ಶಿವಸೇನೆ ಮತ್ತು ಬಿಜೆಪಿ ಮೈತ್ರಿಕೂಟ ಕ್ಲೀನ್ ಸ್ವೀಪ್ ಮಾಡಿತ್ತು. 2009ರಲ್ಲಿ ಈ ಮೈತ್ರಿಕೂಟಕ್ಕೆ ಮಿಶ್ರ ಫಲ ಸಿಕ್ಕಿದ್ದು ಬಿಜೆಪಿ-ಶಿವಸೇನೆಗೆ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ)-ಕಾಂಗ್ರೆಸ್ ಮೈತ್ರಿಕೂಟ ತಲಾ ಐದು ಸ್ಥಾನಗಳನ್ನು ಪಡೆದಿದ್ದವು.
ವಿದರ್ಭ ಭಾಗದಲ್ಲಿ 10 ಲೋಕಸಭಾ ಸ್ಥಾನಗಳಿದ್ದು, ಪೂರ್ವ ಮತ್ತು ಪಶ್ಚಿಮ ವಿದರ್ಭ ಎಂದು ಗುರುತಿಸಲಾಗುತ್ತದೆ. ಪೂರ್ವ ಭಾಗದಲ್ಲಿ ನಾಗ್ಪುರ, ಭಂಡಾರ, ಚಂದ್ರಾಪುರ್, ಗಢ್‌ಚಿರೋಲಿ, ಗೊಂಡಿಯಾ ಮತ್ತು ವಾರ್ಧಾ ಜಿಲ್ಲೆಗಳಿದ್ದರೆ, ಪಶ್ಚಿಮದಲ್ಲಿ ಅಕೋಲಾ, ಅಮರಾವತಿ, ಬುಲಾœನಾ, ಯಾವತ್ಮಾಲ್, ವಾಶಿಮ್ ಲೋಕಸಭಾ ಕ್ಷೇತ್ರಗಳಿವೆ. ಕ್ಲೀನ್‌ಸ್ವೀಪ್
2014ರಲ್ಲಿ ಬಿಜೆಪಿ ಮೈತ್ರಿಕೂಟ 10 ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಂಡಿತ್ತು. 2004ರಲ್ಲಿ ಇದು 9 ಸ್ಥಾನಗಳಲ್ಲಿ ಗೆದ್ದಿತ್ತು. ಮೋದಿ ಅಲೆ ಹೊರತಾಗಿ ಈ ಭಾಗವನ್ನು ಎನ್‌ಸಿಪಿ-ಕಾಂಗ್ರೆಸ್ ರಾಜ್ಯ ಸರಕಾರ ಇದ್ದಾಗ ತಿರಸ್ಕಾರದಿಂದ ನೋಡಿದ್ದ ಕಾರಣ ಮತದಾರರು ಬಿಜೆಪಿ ಮೈತ್ರಿಕೂಟಕ್ಕೆ ಜೈ ಎಂದಿದ್ದರು.
Related Articles
ಈ ಬಾರಿಯ ಚುನಾವಣೆಯಲ್ಲಿ ಹಲವು ಖ್ಯಾತನಾಮರು ಈ ಭಾಗದಿಂದ ಸ್ಪರ್ಧಿಸುತ್ತಿದ್ದಾರೆ. ಸಚಿವರಾದ ನಿತಿನ್ ಗಡ್ಕರಿ ನಾಗ್ಪುರದಿಂದ ಹನ್ಸರಾಜ್ ಅಹಿರ್ ಅವರು ಚಂದ್ರಾಪುರ್‌ನಿಂದ ಸ್ಪರ್ಧಿಸಲಿದ್ದಾರೆ. ವರೊಂದಿಗೆ ಕಾಂಗ್ರೆಸ್‌ನ ಮಾಜಿ ರಾಜ್ಯಾಧ್ಯಕ್ಷ ಮಾಣಿಕ್‌ರಾವ್ ಠಾಕ್ರೆ ಯಾವತ್ಮಾಲ್-ವಾಶಿಮ್‌ನಿಂದ ಸ್ಪರ್ಧಿಸಲಿದ್ದಾರೆ.
Advertisement
ಸಮಸ್ಯೆಗಳೇನು?ಕಳೆದ 5 ವರ್ಷಗಳಲ್ಲಿ ಇಲ್ಲಿನ ಗ್ರಾಮೀಣ ಆರ್ಥಿಕತೆ ಬದಲಾವಣೆ ಕಂಡಿಲ್ಲ. ರೈತರ ಬೆಳೆಗಳಿಗೆ ಕನಿಷ್ಠ ದರ ನೀಡುವ ಪ್ರಸ್ತಾಪ ಕಾಗದದಲ್ಲೇ ಉಳಿದಿದೆ. ಕೇಂದ್ರ ತೊಗರಿಗೆ 5650 ರೂ. ಬೆಂಬಲ ಬೆಲೆ ಘೋಷಿಸಿದ್ದರೂ, ಇಲ್ಲಿ 5 ಸಾವಿರ ರೂ. ಮಾತ್ರ ಬೆಲೆ ನೀಡಲಾಗುತ್ತಿದೆ. 2018ರಲ್ಲಿ 1297 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ವಿದರ್ಭ ಮತ್ತು ಮರಾಠವಾಡದಲ್ಲಿ 2244 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.