Advertisement
ಎನ್‌ಸಿಆರ್‌ಬಿ ಹಂಚಿಕೊಂಡ ಮಾಹಿತಿಯ ಪ್ರಕಾರ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ.21ರಷ್ಟು ಇಳಿಕೆಯಾಗಿದ್ದು, 2018ರಲ್ಲಿ ಒಟ್ಟು 10,349 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2017ರಲ್ಲಿ 10,655 ಮತ್ತು 2016ರಲ್ಲಿ 11,379 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.
ವರದಿಯ ಪ್ರಕಾರ 2018ರಲ್ಲಿ ತಿಂಗಳಿಗೆ ಸರಾಸರಿ 948ರಂತೆ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರತಿದಿನ 31 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. 5,763 ಬಲಿ
2018ರಲ್ಲಿ ಭೂ ಮಾಲಕರು ಮತ್ತು ಸಾಗುವಳಿದಾರರು ಸೇರಿದಂತೆ ಒಟ್ಟಾರೆ 5,763 ರಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2015ರ ಅಂಕಿ ಅಂಶಗಳಿಗೆ ಹೋಲಿಸಿದರೆ 2,244ರಷ್ಟು ಪ್ರಕರಣಗಳು ಕಡಿಮೆಯಾಗಿವೆ. 2015ರಲ್ಲಿ 8,007 ಭೂಮಾಲಕರು ಮತ್ತು ಸಾಗುವಳಿದಾರರು ಆತ್ಮಹತ್ಯೆ ಮಾಡಿಕೊಂಡಿದ್ದರು.
Related Articles
2018ರಲ್ಲಿ 4,586 ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿ ಕೊಂಡಿದ್ದು, 2016ಕ್ಕೆ ಹೋಲಿಸಿದ್ದರೆ 532 ಪ್ರಕರಣಗಳು ಕಡಿಮೆಯಾಗಿವೆ. 2015ರಲ್ಲಿ 4,595 ಕೃಷಿಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದರು.
Advertisement
ರಾಜ್ಯಕ್ಕೆ 2ನೇ ಸ್ಥಾನ2018ರಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ 10,349 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 5,763 ಮಂದಿ ಬೆಳೆಗಾರರು ಮತ್ತು 4,586 ಮಂದಿ ಕೃಷಿ ಕಾರ್ಮಿಕರು. ಮಹಾರಾಷ್ಟ್ರ ಮತ್ತು ಕರ್ನಾಟಕ ರೈತರ ಆತ್ಮಹತ್ಯೆಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿವೆ. ಅಂದರೆ ಈ ರಾಜ್ಯಗಳಲ್ಲಿ ಕ್ರಮವಾಗಿ 3,594 ಮತ್ತು 2,405 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಹಾರ, ಪಶ್ಚಿಮ ಬಂಗಾಲ, ಒಡಿಶಾಗಳಲ್ಲಿ ರೈತರು ಆತ್ಮಹತ್ಯೆಯನ್ನೇ ಮಾಡಿಕೊಂಡಿಲ್ಲ. ಸತತ ಮೂರನೇ ವರ್ಷ ಈ ಕ್ಷೇತ್ರದಿಂದ ವರದಿಯಾದ ಆತ್ಮಹತ್ಯೆಗಳ ಸಂಖ್ಯೆ ಕಡಿಮೆ.
ರಾಷ್ಟ್ರವ್ಯಾಪ್ತಿಯಾಗಿ ದಾಖಲಾದ 5,763 ರೈತರ ಆತ್ಮಹತ್ಯೆಗಳ ಪೈಕಿ ಸುಮಾರು 2,043 ಪ್ರಕರಣಗಳು ಮಹಾರಾಷ್ಟ್ರದಲ್ಲೇ ದಾಖಲಾಗಿವೆ. ಮಹಿಳೆಯರೂ ಇದ್ದಾರೆ ಒಟ್ಟು 5,763 ಕೃಷಿ ಆತ್ಮಹತ್ಯೆ ಪ್ರಕರಣಗಳಲ್ಲಿ 306 ರೈತ ಮಹಿಳೆ ಯರು ಸೇರಿದ್ದಾರೆ. 5,109 ಕೃಷಿ ಕಾರ್ಮಿಕ ಆತ್ಮಹತ್ಯೆ ಪ್ರಕರಣಗಳಲ್ಲಿ 515 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2016ರ ವರೆಗೆ ದೇಶದಲ್ಲಿ 3,33, 407 ರೈತರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ. ಏನು ಕಾರಣ?
-ಆತ್ಮಹತ್ಯೆಗಳಿಗೆ ಪ್ರಮುಖ ಕಾರಣವೆಂದರೆ ದಿವಾಳಿತನ, ಋಣಭಾರ, ಕುಟುಂಬದ ಸಮಸ್ಯೆಗಳು. ಕೃಷಿ ಆತ್ಮಹತ್ಯೆಗೆ ಪ್ರಮುಖ ಕಾರಣವೆಂದರೆ ಬೆಳೆ ವೈಫಲ್ಯ, ಅನಾರೋಗ್ಯ ಮತ್ತು ಮಾದಕ ದ್ರವ್ಯ ಸೇವನೆ /ಮದ್ಯದ ಚಟ.