Advertisement

ರಸ್ತೆ ಸಂಚಾರಕ್ಕೆ ರೈತರ ನಿರ್ಬಂಧ: ನಿವಾಸಿಗಳ ಆಕ್ರೋಶ

04:32 PM Sep 05, 2018 | |

ಕುಷ್ಟಗಿ: ಹಿರೇಮನ್ನಾಪುರ ಗ್ರಾಮದ ಬಳಿ ಇರುವ ಏಕಲವ್ಯ ಕಾಲೋನಿಗೆ ಸರ್ಕಾರ ನಿರ್ಮಿಸುತ್ತಿರುವ ರಸ್ತೆಗೆ ಕೆಲವು ಜಮೀನು ಮಾಲೀಕರು ಕ್ಯಾತೆ ತೆಗೆದು ಕಾಮಗಾರಿ ಬಂದ್‌ ಮಾಡಿಸಿ, ರಸ್ತೆ ಸಂಚಾರ ನಿರ್ಬಂಧಿ ಸಿದ ಹಿನ್ನೆಲೆಯಲ್ಲಿ ಹಿರೇಮನ್ನಾಪುರ ಏಕಲವ್ಯ ಕಾಲೋನಿ ಗ್ರಾಮಸ್ಥರು ಇಲ್ಲಿನ ತಹಶೀಲ್ದಾರ್‌, ಪೊಲೀಸ್‌ ಠಾಣೆಯಲ್ಲಿ ಪ್ರತ್ಯೇಕ ಮನವಿ ಸಲ್ಲಿಸಿದರು.

Advertisement

ಹಿರೇಮನ್ನಾಪುರ ಗ್ರಾಮದಿಂದ 3 ಕಿಮೀ ದೂರದಲ್ಲಿರುವ ಏಕಲವ್ಯ ನಗರಕ್ಕೆ ಹಿರೇಮನ್ನಾಪುರ-ನೀರಲೂಟಿ ಸಂಪರ್ಕ ರಸ್ತೆಯಿಂದ ಎರಡೂವರೆ ಕಿಮೀ ರಸ್ತೆ ನಿರ್ಮಾಣಕ್ಕೆ ಸರ್ಕಾರ 80 ಲಕ್ಷ ರೂ. ಬಿಡುಗಡೆಗೊಳಿಸಿದೆ. ಈಗಾಗಲೇ ರಸ್ತೆ ಕಾಮಗಾರಿ ಕೈಗೆತ್ತಿಕ್ಕೊಳ್ಳಲಾಗಿದ್ದು ಶೇ.50 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಉಳಿದ ಕಾಮಗಾರಿಗೆ ರಸ್ತೆಯ ಅಂಚಿನ ಜಮೀನಿನ ಮಾಲೀಕರು ಕ್ಯಾತೆ ತೆಗೆದು ರಸ್ತೆ ಕಾಮಗಾರಿ ತಡೆ ಹಿಡಿದಿದ್ದರೆ. ರಸ್ತೆ ನಿರ್ಮಿಸುವ ಪೂರ್ವದಲ್ಲಿ ಗುತ್ತಿಗೆದಾರ ಡಿ.ಎಸ್‌. ಕಂದಕೂರು ಹಾಗೂ ಸಂಬಂಧಿಸಿದ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ಸದರಿ ರಸ್ತೆ ಮಾರ್ಗ ಉದ್ದ, ಅಗಲದ ವ್ಯಾಪ್ತಿ ಗುರುತಿಸಿ ಒಪ್ಪಿಗೆ ಪಡೆದೇ ಕಾಮಗಾರಿ ಆರಂಭಿಸಲಾಗಿದ್ದರೂ ಏಕಲವ್ಯ ನಗರದ ಜನರು ಈ ರಸ್ತೆಯಲ್ಲಿ ಸಂಚರಿಸದಂತೆ ಮುಳ್ಳು ಕಂಟಿಗಳನ್ನು ಹಾಕಿ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಇದರಿಂದ ಏಕಲವ್ಯ ನಗರದ ಶಾಲೆ, ಕಾಲೇಜು ವಿದ್ಯಾರ್ಥಿಗಳು, ಗ್ರಾಮಸ್ಥರು, ಏಕಲವ್ಯ ನಗರದ ವಾಹನ ಬೈಕ್‌ ಸಂಚರಿಸದಂತೆ ನಿರ್ಬಂಧ ಹೇರಿದ್ದಾರೆ. 

ಹಿರೇಮನ್ನಾಪುರ, ಕುಷ್ಟಗಿ ತಾಲೂಕು ಕೇಂದ್ರಕ್ಕೆ ಹೋಗಿ ಬರಲು ಏಕೈಕ ಮಾರ್ಗ ಇದಾಗಿದ್ದು, ಈ ರಸ್ತೆಯಲ್ಲಿ ಸಂಚರಿಸಿದರೆ ಜಮೀನು ಮಾಲೀಕರಿಂದ ಅವಾಚ್ಯವಾಗಿ ಬೈಸಿಕೊಳ್ಳಬೇಕಿದೆ. ಈ ತೊಂದರೆ ಕುಷ್ಟಗಿ ಠಾಣೆಯ ಪಿಎಸೈ ವಿಶ್ವನಾಥ ಹಿರೇಗೌಡ್ರು ಅವರ ಬಳಿ ನಿವೇದಿಸಿಕೊಂಡರು ಏಕಲವ್ಯ ನಗರದ ಕಿರಿಕಿರಿ ಮುಂದುವರಿಸಿದ್ದಾರೆ. ಇವರ ಬೈಗುಳಕ್ಕೆ ಹೆದರಿ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಹಿಂಜರಿಯುತ್ತಿದ್ದಾರೆ. ಏಕಲವ್ಯ ಕಾಲೋನಿಯಲ್ಲಿ ಜನರ ಆರೋಗ್ಯದಲ್ಲಿ ಏರುಪೇರಾದರೂ ಅರೆ ಬರೆ ನಿರ್ಮಾಣದ
ರಸ್ತೆಯಲ್ಲಿ ಸಂಚರಿಸಲು ದಾರಿ ಇಲ್ಲವಾಗಿದೆ. ಈ ಕಾಲೋನಿಗೆ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಬರಲು ತೊಂದರೆಯಾಗಿದೆ ಎಂದು ಕಾಲೋನಿಯ ನಿವಾಸಿಗಳು ಅಳಲು ತೋಡಿಕೊಂಡರು.

ಏಕಲವ್ಯ ಕಾಲೋನಿಯ ನಿವಾಸಿಗಳ ಮನವಿ ಸ್ವೀಕರಿಸಿದ ಪಿಎಸೈ ವಿಶ್ವಾನಾಥ ಹಿರೇಗೌಡ್ರು ಅವರು, ಈ ರಸ್ತೆಯಿಂದ ಜಮೀನು ಮಾಲೀಕರಿಗೆ ಹೆಚ್ಚು ಅನುಕೂಲ ಸಿಗಲಿದೆ. ಈ ಅನುಕೂಲತೆ ಅರಿಯದೇ ಏಕಲವ್ಯ ನಿವಾಸಿಗಳೊಂದಿಗೆ ಕ್ಯಾತೆ ತೆಗೆದಿರುವುದು ಸರಿ ಅಲ್ಲ. ಸರ್ಕಾರ ನಿರ್ಮಿಸಿರುವ ರಸ್ತೆಗೆ ಅಡ್ಡಿ ಪಡಿಸುವುದು, ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಧಿಸುವುದು ಕಾನೂನಿಗೆ ವಿರುದ್ಧವಾಗಿದ್ದು, ಖುದ್ದಾಗಿ ಭೇಟಿ ನೀಡಿ ಸಮಸ್ಯೆ ಇತ್ಯರ್ಥಗೊಳಿಸುವ ಭರವಸೆ ನೀಡಿದರು.

ಈ ವೇಳೆ ದೇವಪ್ಪ ನೆರೆಬೆಂಚಿ, ದೊಡ್ಡಪ್ಪ ಹುಂಚಗೇರಿ, ದುರುಗಪ್ಪ ಹುಂಚಗೇರಿ, ಪರಸಪ್ಪ ಹುಂಚಗೇರಿ, ನಿರುಪಾದೆಪ್ಪ ಓತಗೇರಿ, ಹಿರೇಪರಸಪ್ಪ ಹುಂಚಗೇರಿ, ಕಳಕಪ್ಪ ಗಡಾದ, ಯಮನಪ್ಪ ಜಬ್ಲಿದ್‌, ಹನಮಂತ ಹುಂಚಗೇರಿ, ನಿರುಪಾದೆಪ್ಪ ಹುಂಚಗೇರಿ ಮತ್ತಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next