Advertisement

ವಿದ್ಯುತ್‌ ಸಮಸ್ಯೆ ಪರಿಹಾರಕ್ಕೆ ರೈತರಿಂದ ಪ್ರತಿಭಟನೆ

04:51 PM Apr 30, 2022 | Shwetha M |

ಮುದ್ದೇಬಿಹಾಳ: ತಾಲೂಕಿನ ಕೃಷ್ಣಾ ನದಿ ದಂಡೆಯಲ್ಲಿನ ಹಂಡರಗಲ್‌ ಗ್ರಾಮವು ಮೂರು ವರ್ಷಗಳ ಹಿಂದೆ ಪ್ರವಾಹ ಪೀಡಿತಗೊಂಡಿತ್ತು. ಆ ವೇಳೆ ನೆಲಕ್ಕುರುಳಿದ್ದ ವಿದ್ಯುತ್‌ ಕಂಬಗಳನ್ನು ಮರಳಿ ಅಳವಡಿಸಿ ವಿದ್ಯುತ್‌ ಸಂಪರ್ಕ ಕಲ್ಪಿಸಿ ಸಮಸ್ಯೆ ಬಗೆಹರಿಸುವಲ್ಲಿ ಹೆಸ್ಕಾಂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ಹಂಡರಗಲ್‌ ರೈತರು ಇಲ್ಲಿನ ಹೆಸ್ಕಾಂ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

Advertisement

ಈ ವೇಳೆ ಹೆಸ್ಕಾಂ ಎಇಇ ಮತ್ತು ಸೆಕ್ಷನ್‌ ಅಧಿಕಾರಿ ಜೊತೆ ವಾಗ್ವಾದ ನಡೆಸಿದರು. ರೈತ ಬಸವರಾಜ ನರಸಣ, ಪ್ರಮುಖರಾದ ಸಂಗನಗೌಡ ಪಾಟೀಲ, ಸಾಹೇಬಪಟೇಲ ಮೊಕಾಶಿ, ರಾಮಣ್ಣ ತುರುಡಗಿ ಮತ್ತಿತರರು ಮಾತನಾಡಿದರು.

ಎಇಇ ಆರ್‌. ಎನ್‌. ಹಾದಿಮನಿ, ರೈತರ ಅಹವಾಲು ಆಲಿಸಿದರು. ಆದರೆ ಇದಕ್ಕೊಪ್ಪದ ರೈತರು ಎಇಇ ಅವರನ್ನೇ ತಮ್ಮೂರಿಗೆ ಕರೆದೊಯ್ದು, ಊರೆಲ್ಲ ಸುತ್ತಾಡಿಸಿ, ಬಳಿಕ ಕಚೇರಿಗೆ ಆಗಮಿಸಿ ವಾಸ್ತವ ಪರಿಸ್ಥಿತಿ ಅರಿತುಕೊಳ್ಳುವಂತೆ ಮಾಡಿದರು. ವಾಸ್ತವ ತಿಳಿದ ಬಳಿಕ 15 ದಿನಗಳ ಕಾಲಾವಕಾಶ ಬೇಡಿಕೆಗೆ ಒಪ್ಪಿ ಪ್ರತಿಭಟನೆ ಕೈಬಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next