Advertisement
ನಿಮ್ಮ ಜೊತೆ ಮಗಳಂತೆ ನಿಲ್ಲುವೆ ಎಂದ ಪೋಗಟ್ಫೆ. 13ರಿಂದ ರೈತರು ದೆಹಲಿಗೆ ಪ್ರವೇಶಿಸಲು ತಡೆದ ನಂತರ ರೈತರು ಶಂಭು ಗಡಿಯಲ್ಲಿ ಠಿಕಾಣಿ ಹೂಡಿ ಸಭೆ ನಡೆಸುತ್ತಿದ್ದಾರೆ. ಶಂಭು ಗಡಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ವಿನೇಶ್ ಪೋಗಟ್ ರೈತರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು, ರೈತರು ಬಹಳ ಸಮಯದಿಂದ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಆದರೆ ಅವರ ಶಕ್ತಿ ಮತ್ತು ದೃಢತೆ ಕಡಿಮೆಯಾಗಿಲ್ಲ ಎಂದರು. ರೈತ ಕುಟುಂಬದಲ್ಲಿ ಜನಿಸಿರುವ ಹೆಮ್ಮೆಯನ್ನು ಹಂಚಿಕೊಂಡ ಅವರು ಪ್ರತಿಭಟನಾಕಾರರ ಜೊತೆ ತಮ್ಮ ಮಗಳಂತೆ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು.
‘ನಾನು ರೈತ ಕುಟುಂಬದಲ್ಲಿ ಹುಟ್ಟಿದ್ದು ನನ್ನ ಅದೃಷ್ಟ. ನಿಮ್ಮ ಮಗಳು ನಿಮ್ಮೊಂದಿಗಿದ್ದಾಳೆ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ನಮ್ಮ ಹಕ್ಕುಗಳಿಗಾಗಿ ನಾವು ನಿಲ್ಲಬೇಕು ಏಕೆಂದರೆ ಯಾರೂ ನಮಗಾಗಿ ಬರುವುದಿಲ್ಲ. ನಿಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಮತ್ತು ನಿಮ್ಮ ಹಕ್ಕುಗಳನ್ನು ಪಡೆಯದೆ ಹಿಂತಿರುಗಬೇಡಿ’ ಎಂದು ಪೋಗಟ್ ಹೇಳಿದರು.
Related Articles
ಪ್ರತಿಭಟನೆ ಶಾಂತಿಯುತವಾಗಿದ್ದರೂ ಅತ್ಯಂತ ತೀವ್ರತೆಯಿಂದ ನಡೆಸಲಾಗುತ್ತಿದೆ ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಹೇಳಿದ್ದಾರೆ. ಕೇಂದ್ರವು ನಮ್ಮ ಸ್ಥೈರ್ಯ ಪರೀಕ್ಷಿಸುತ್ತಿದೆ. ಇನ್ನೂ ಕೂಡ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದರು. ‘ನಾವು ಮತ್ತೊಮ್ಮೆ ನಮ್ಮ ಬೇಡಿಕೆಗಳ ಸರ್ಕಾರಕ್ಕೆ ಸಲ್ಲಿಸುತ್ತೇವೆ ಮತ್ತು ಹೊಸ ಘೋಷಣೆಗಳ ಕೂಡ ಮಾಡಲಾಗುವುದು’ ಎಂದು ಪಂಧೇರ್ ತಿಳಿಸಿದ್ದಾರೆ. ಪ್ರತಿಭಟನೆಯು 200 ದಿನಗಳ ಪೂರ್ಣಗೊಳಿಸಿರುವುದು ಮಹತ್ವದ ಮೈಲುಗಲ್ಲು ಎಂದು ಒತ್ತಿ ಹೇಳಿದರು.
Advertisement
ರಣಾವತ್ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಬಾಲಿವುಡ್ ನಟಿ ಹಾಗೂ ಸಂಸದೆ (MP) ಕಂಗನಾ ರಣಾವತ್ ವಿರುದ್ಧ ಕಠಿಣ ಕ್ರಮಕ್ಕೆ ರೈತರು ಒತ್ತಾಯಿಸಿದ್ದಾರೆ. ರಣಾವತ್ ಅವರ ಹೇಳಿಕೆಗಳು ಈ ಹಿಂದೆ ರೈತ ಸಮುದಾಯದಲ್ಲಿ ವಿವಾದ ಮತ್ತು ವಿರೋಧಕ್ಕೆ ಕಾರಣವಾಗಿದ್ದವು. ಕಂಗನಾ ವಿರುದ್ಧ ದೃಢವಾದ ನಿಲುವು ತೆಗೆದುಕೊಳ್ಳಲು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಒತ್ತಾಯಿಸಿದರು. ಮುಂಬರುವ ಹರಿಯಾಣ ಚುನಾವಣೆಗೆ ರೈತರು ತಮ್ಮ ಕಾರ್ಯತಂತ್ರ ಬಹಿರಂಗಪಡಿಸುವ ಸುಳಿವು ನೀಡಿದ್ದಾರೆ. ಅವರು ಮುಂದಿನ ದಿನಗಳಲ್ಲಿ ತಮ್ಮ ನಿಲುವುಗಳ ಘೋಷಿಸಲು ಯೋಜಿಸಿದ್ದಾರೆ. ರಾಜ್ಯದ ರಾಜಕೀಯದಲ್ಲಿ ಸಕ್ರಿಯ ಪಾತ್ರ ವಹಿಸುವ ಉದ್ದೇಶವನ್ನು ಒತ್ತಿಹೇಳಿದ್ದಾರೆ.