Advertisement

22ನೇ ದಿನ ಪೂರೈಸಿದ ರೈತರ ಪ್ರತಿಭಟನೆ

12:40 AM Dec 18, 2020 | mahesh |

ಹೊಸದಿಲ್ಲಿ: ಕೇಂದ್ರ ಸರಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 22ನೇ ದಿನ ಪೂರೈಸಿದ್ದು, ಹೋರಾಟದ ಬಿಸಿ ಮತ್ತಷ್ಟು ಹೆಚ್ಚಾಗಿದೆ. ದಿಲ್ಲಿ ಸಂಪರ್ಕಿಸುವ ಮತ್ತಷ್ಟು ರಸ್ತೆಗಳು ಬಂದ್‌ ಆಗಿವೆ.

Advertisement

ಬುಧವಾರವಷ್ಟೇ ಧಾರ್ಮಿಕ ನಾಯಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಿಂದಾಗಿ ರೈತರ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ. ಇತ್ತ ದಿಲ್ಲಿ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಆದಿಯಾಗಿ ಆಪ್‌ ಶಾಸಕರು ಕಾಯ್ದೆಗಳ ಪ್ರತಿಗಳನ್ನು ಹರಿದು ಹಾಕಿದ್ದಾರೆ. ರಾಜ್ಯ ಸಭೆಯಲ್ಲಿ ವೋಟಿಂಗ್‌ ಇಲ್ಲದೇ ಹೇಗೆ ಈ ಕಾಯ್ದೆ ಪಾಸ್‌ ಮಾಡಲಾಯಿತು ಎಂದು ಕೇಜ್ರಿವಾಲ್‌ ಪ್ರಶ್ನಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ಬಿಜೆಪಿ ಹಿರಿಯ ನಾಯಕರು, ಸಚಿವರ ಜತೆ ಮಾತುಕತೆ ನಡೆಸಿದ್ದಾರೆ. ಕೃಷಿ ಕಾಯ್ದೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಂಬಂಧ ಚರ್ಚಿಸಲಾಗಿದೆ. ಜತೆಗೆ ಕೆಲವು ರೈತ ಮುಖಂಡರನ್ನೂ ಶಾ ಭೇಟಿ ಮಾಡಿದ್ದಾರೆ. ಇಂದು ಕಿಸಾನ್‌ ಸಮ್ಮೇಳನ: ಪ್ರಧಾನಿ ಮೋದಿ ಶುಕ್ರವಾರ ಮಧ್ಯಪ್ರದೇಶದಲ್ಲಿ ನಡೆಯಲಿರುವ ವರ್ಚುವಲ್‌ ಕಿಸಾನ್‌ ಸಮ್ಮೇಳನದಲ್ಲಿ ಭಾಗಿಯಾಗಿ 23 ಸಾವಿರ ಹಳ್ಳಿಗಳ ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇ-ಪುಸ್ತಿಕೆ ಬಿಡುಗಡೆ
ಕೃಷಿ ಕಾಯ್ದೆಗಳ ಜಾರಿಯಿಂದ ಲಾಭ ಪಡೆದ ರೈತರ ಯಶೋಗಾಥೆಗಳನ್ನು ಒಳಗೊಂಡ “ಇ-ಪುಸ್ತಿಕೆ’ಯನ್ನು ಕೇಂದ್ರ ಸರಕಾರ ಅನಾವ ರಣ ಮಾಡಿದೆ. 100 ಪುಟಗಳ ಇ-ಪುಸ್ತಿಕೆ ಯಲ್ಲಿ ಕೃಷಿ ಸುಧಾರಣೆಯ ಸತ್ಯಗಳು, ಕಾಯ್ದೆಯಿಂದ ಏನು ಆಗಲಿದೆ, ಏನು ಆಗುವುದಿಲ್ಲ ಎಂಬ ವಿವರ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next