ರಾಯಚೂರು: ಕೇಂದ್ರ- ರಾಜ್ಯ ಸರ್ಕಾರಗಳು ಜಾರಿಗೊಳಿಸಿದ ರೈತ ವಿರೋಧಿ ಮಸೂದೆ ಕೈಬಿಡುವಂತೆ ಆಗ್ರಹಿಸಿ ಅಖೀಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘಟನೆಗಳಿಂದ ಅಸ್ಕಿಹಾಳ ಮತ್ತು ಕೆರೆ ಬೂದುರು ಬಳಿ ಹೆದ್ದಾರಿ ತಡೆದು ಗುರುವಾರ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ರಸ್ತೆಗೆ ಅಡ್ಡ ಕುಳಿತು ಪ್ರತಿಭಟನೆ ನಡೆಸಿದ ಸಂಘಟನೆಗಳು, ಭೂ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ಪ್ರತಿ ಸುಡುವ ಆಕ್ರೋಶ ವ್ಯಕ್ತಪಡಿಸಿದರು. ಒಂದು ಸಂಘಟನೆ ಅಸ್ಕಿಹಾಳ ಬೈಪಾಸ್ ರಸ್ತೆಯಲ್ಲಿ ರಸ್ತೆ ತಡೆ ಚಳವಳಿ ನಡೆಸಿದರೆ, ಮತ್ತೂಂದು ಸಂಘಟನೆ ಮಂತ್ರಾಲಯ ರಸ್ತೆಯಲ್ಲಿನ ಕೆರೆ ಬೂದುರು ಬಳಿ ಹೋರಾಟ ನಡೆಸಿತು. ಇದರಿಂದ ಕೆಲಕಾಲ ಸಂಚಾರಕ್ಕೆ ಅಡಚಣೆಯಾಯಿತು.
ಟ್ರಾಫಿಕ್ ಸಮಸ್ಯೆ ಉಲ್ಬಣಿಸಿ ಪ್ರಯಾಣಿಕರು ಪರದಾಡುವಂತಾಯಿತು. ಜನ ವಿರೋಧಿ ಧೊರಣೆಯಿಂದ ಕಾರ್ಪೊರೇಟ್ ಕಂಪನಿಗಳಿಗೆ ಕೃಷಿ ಭೂಮಿ ಧಾರೆ ಎರೆಯಲು ಮತ್ತೆ ಸುಗ್ರೀವಾಜ್ಞೆ ಹೊರಡಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ. ರೈತರು, ಕೃಷಿಕೂಲಿಕಾರರ ಸಂಕಷ್ಟಗಳಿಗೆ ಸ್ಪಂದಿಸದ ಸರ್ಕಾರಗಳು ಇಡೀ ಕೃಷಿ ಉತ್ಪಾದನೆ, ಕೃಷಿ ಮಾರುಕಟ್ಟೆ, ಚಿಲ್ಲರೆ ವ್ಯಾಪಾರ, ವಿದ್ಯುತ್ ಕ್ಷೇತ್ರ ಕಾರ್ಪೊರೇಟ್ ಕಂಪನಿಗಳಿಗೆ ಒಪ್ಪಿಸಲು ನಾಲ್ಕು ಹೊಸ ಕಾಯ್ದೆಗಳನ್ನು ಮಾಡಿರುವುದು ಖಂಡನೀಯ ಎಂದರು.
ಕೃಷಿಯಲ್ಲಿ ಖಾಸಗಿ ಬಂಡವಾಳಹೂಡಿಕೆಯಿಂದ ಕೃಷಿ ವಲಯದುರ್ಬಲಗೊಂಡಿದೆ. ಶೇ.85ಕ್ಕಿಂತ ಹೆಚ್ಚಿನ ಸಣ್ಣ, ಅತಿ ಸಣ್ಣ, ಮಧ್ಯಮರೈತರನ್ನು ಕಾರ್ಪೊರೇಟ್ ಕಂಪನಿಗಳಿಗೆ ಗುಲಾಮರನ್ನಾಗಿ ಮಾಡಲು ಬಿಜೆಪಿ ರಾಜ್ಯ ಸರ್ಕಾರ, ಕರ್ನಾಟಕ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿದೆ. ಗುತ್ತಿಗೆ ಕೃಷಿ, ಕಂಪನಿ ಕೃಷಿ, ಜಾರಿಗೆ ತರುವುದು ಮಾತ್ರವಲ್ಲ ಕೃಷಿ ಮಾರುಕಟ್ಟೆ, ಚಿಲ್ಲರೆ ವ್ಯಾಪಾರ ಮತ್ತು “ವಿದ್ಯುತ್‌ನ್ನು ಕಾರ್ಪೊರೇಟ್ ಕಂಪನಿಗಳಿಗೆ ಒಪ್ಪಿಸಲು ಕೇಂದ್ರ ಸರ್ಕಾರ ಈಗಾಗಲೇ ನಾಲ್ಕು ಹೊಸ ಕಾಯ್ದೆ ಅಂಗೀಕರಿಸಿ ಜಾರಿ ಮಾಡಲು ಹೊರಟಿರುವುದು ಖಂಡನೀಯ ಎಂದರು.
ಈ ವೇಳೆ ಸಮಿತಿ ಮುಖಂಡರಾದ ಕೆ.ಜಿ. ವೀರೇಶ, ಕರಿಯಪ್ಪ ಅಚ್ಚೊಳ್ಳಿ, ಶರಣಪ್ಪ ಮರಳಿ, ಜಿಂದಪ್ಪ ವಡೂÉರು, ಡಿ. ವೀರನಗೌಡ, ಮಾರೆಪ್ಪ ಹರವಿ ಈ. ರಂಗನಗೌಡ, ಡಿ.ಎಸ್. ಶರಣಬಸವ, ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಬಂದಯ್ಯಸ್ವಾಮಿ ಸೇರಿದಂತೆ ಅನೇಕರು ಇದ್ದರು.