Advertisement

ಬಿತ್ತನೆ ಬೀಜಕ್ಕಾಗಿ ರೈತರಿಂದ ಪ್ರತಿಭಟನೆ-ಘೇರಾವ್‌

10:38 AM Jun 07, 2020 | Suhan S |

ಜಮಖಂಡಿ: ರೈತರಿಗೆ ಸರಿಯಾದ ಸಮಯಕ್ಕೆ ಬೀಜಗಳನ್ನು ವಿತರಿಸದ ಅಧಿಕಾರಿಗಳ ವಿರುದ್ಧ ತಾಲೂಕಿನ ರೈತರು ಪ್ರತಿಭಟನೆ ನಡೆಸಿ ಸಹಾಯಕ ಕೃಷಿ ನಿರ್ದೇಶಕರ ಮೇಲೆ ಘೇರಾವ್‌ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದ ರೈತ ಸಂಪರ್ಕ ಕೇಂದ್ರದಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ರೈತರು ಪ್ರತಿನಿತ್ಯ ಬೀಜ ಪಡೆಯಲು ರೈತ ಸಂಪರ್ಕ ಕೇಂದ್ರಕ್ಕೆ ಅಲೆದಾಡಿ ಸುಸ್ತಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಬೇಕಾದ ಬೀಜ ಕೇಳಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಮುಂಗಾರು ಬಿತ್ತನೆಗೆ ಸೂರ್ಯಕಾಂತಿ, ಉದ್ದು, ತೊಗರಿ, ಸೋಯಾಬಿನ್‌ ಬೀಜಗಳು ಅವಶ್ಯವಾಗಿದ್ದು, ಬೀಜ ಕೇಳಿದರೆ ನಮ್ಮಲ್ಲಿ ಸ್ಟಾಕ್‌ ಇರುವುದಿಲ್ಲ ಎಂದು ಜಾರಿಕೊಳ್ಳುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಪರ್ಕ ಕೇಂದ್ರದಲ್ಲಿ 5 ಕೆ.ಜಿ ಬೀಜಗಳು 380 ರೂ.ಗಳಿಗೆ ದೊರೆಯುತ್ತವೆ. ಅದೇ ಬೀಜಗಳು ಖಾಸಗಿ ವ್ಯಾಪಾರಸ್ಥರಲ್ಲಿ 1 ಸಾವಿರವರೆಗೆ ಲಭಿಸುತ್ತಿವೆ. ಅಧಿಕಾರಿಗಳು ಹಾಗೂ ಖಾಸಗಿ ವ್ಯಾಪಾರಿಗಳು ಸೇರಿಕೊಂಡು ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಈ ವೇಳೆ ಮಲ್ಲಪ್ಪ ಈಟ್ಟಿ, ನಿಂಗಣ್ಣಗೌಡ ಪಾಟೀಲ, ಮಾಯಪ್ಪ ಹುಣಸಿಕಟ್ಟಿ, ರಾಮಣ್ಣ ಚಿನಗುಂಡಿ, ಶಿವನಗೌಡ ಪಾಟೀಲ, ಹಣಮಂತ ಬಿರಾದಾರ, ರಮೇಶ ಧರಣೆ, ಬಾಳಪ್ಪ ಬಿರಾದರ, ಮುದ್ದುಗೌಡರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next