ಕೋಲಾರ: ಸ್ವ-ಉದ್ಯೋಗ ರೂಪಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರುದ್ಯೋಗಿ ಗಳಿಗೆ ವಿವಿಧ ಯೋಜನೆ ಜಾರಿ ಮಾಡುತ್ತಿ ದ್ದರೂ ಅದಕ್ಕೆ ಬ್ಯಾಂಕ್ ಅಧಿಕಾರಿಗಳು ಸಾಲ ನೀಡದೆ ಬೇಜಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ಲೀಡ್ ಬ್ಯಾಂಕ್ ಕಚೇರಿ ಮುಂದೆ ಭಿಕ್ಷೆ ಬೇಡುವ ಮೂಲಕ ಪ್ರತಿಭಟನೆ ನಡೆಸಿದರು.
ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಂಡು ಕೂಡಲೇ ಸಾಲವನ್ನು ಫಲಾನುಭವಿಗಳಿಗೆ ಬಿಡುಗಡೆ ಮಾಡ ಬೇಕು, ಜೊತೆಗೆ ಫೆ.3ರೊಳಗೆ ಸಭೆ ಕರೆಯಬೇಕು. ಇಲ್ಲದಿದ್ದರೆ ಏಕಕಾಲದಲ್ಲಿ ಎಲ್ಲಾ ಬ್ಯಾಂಕ್ ಬಂದ್ ಮಾಡುವ ಎಚ್ಚರಿಕೆ ನೀಡುವ ಜೊತೆಗೆ ಸಾಲ ಕ್ಕಾಗಿ ಭಿಕ್ಷೆ ಬೇಡುವ ಮೂಲಕ ಪ್ರತಿಭಟನೆ ನಡೆಸಿ, ವ್ಯವಸ್ಥಾಪಕರಿಗೆ ಮನವಿ ನೀಡಲಾಯಿತು.
ಪದವೀಧರರ ಮೂಲೆಗುಂಪು: ಹೋರಾಟದ ನೇತೃತ್ವ ವಹಿಸಿದ್ದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ದೇಶದಲ್ಲಿ ಕೈಗಾರಿಕಾ ಕ್ರಾಂತಿ ಮೂಲಕ ನಿರುದ್ಯೋಗ ಸಮಸ್ಯೆ ಸಂಪೂರ್ಣವಾಗಿ ನಿವಾರಣೆ ಮಾಡುತ್ತೇನೆ ಎಂದು ಭರವಸೆ ನೀಡುವ ಸರ್ಕಾರಗಳು, ಅಧಿಕಾರಕ್ಕೆ ಬಂದ ನಂತರ ಪದವೀಧರರನ್ನು ಮೂಲೆಗುಂಪು ಮಾಡುತ್ತಿವೆ ಎಂದು ದೂರಿದರು.
ಸ್ವ-ಉದ್ಯೋಗದತ್ತ ಮುಖ: ಮತ್ತೂಂದು ಕಡೆ ಕೈಗಾರಿಕಾ ಹೆಸರಿನಲ್ಲಿ ರೈತರ ಕೃಷಿ ಜಮೀನನ್ನು ವಶಪಡಿಸಿಕೊಂಡು ಕೈಗಾರಿಕೆ ಸ್ಥಾಪನೆಯಾದ ನಂತರ ಸ್ಥಳೀಯರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುವುದು ಒಂದು ಕಡೆಯಾದರೆ, ಮತ್ತೂಂದು ಕಡೆ ಕೆಲಸಕ್ಕಾಗಿ ಲಂಚ ಕೊಡಲಾಗದೆ, ಬಡಪಾಯಿ ನಿರುದ್ಯೋಗಿಗಳು ತನ್ನ ಜೀವನಕ್ಕಾಗಿ ಸ್ವ- ಉದ್ಯೋಗದತ್ತ ಮುಖ ಮಾಡುತ್ತಿದ್ದಾನೆ ಎಂದು ಹೇಳಿದರು. ಮತ್ತೂಂದಡೆ ಜನಪ್ರತಿನಿಧಿಗಳು ಕೆಡಿಪಿ ಸಭೆ ಹಾಗೂ ಮತ್ತಿತರ ಸಾರ್ವಜನಿಕರ ಸಮಾ ರಂಭಗಳಲ್ಲಿ ನೆಪಮಾತ್ರಕ್ಕೆ ಬ್ಯಾಂಕ್ ಅಧಿಕಾರಿ ಗಳಿಗೆ ನಿರುದ್ಯೋಗಿಗಳಿಗೆ ಸಾಲ ನೀಡುವಂತೆ ಎಚ್ಚರಿಕೆ ನೀಡಲು ಸೀಮಿತವಾಗಿದ್ದಾರೆಂದು ಅಸಮಧಾನ ವ್ಯಕ್ತಪಡಿಸಿದರು.
ಸಾಲ ತೀರುವವರೆಗೂ ನೀಡಲ್ಲ: ರೈತ ಸಂಘದ ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ, ಕೈಗಾರಿಕಾ ಜಂಟಿ ನಿರ್ದೇಶಕರು, ಜವಳಿ ನಿರ್ದೇಶಕರು ಹಾಗೂ ಬ್ಯಾಂಕ್ ಅಧಿ ಕಾರಿಗಳು ಫಲಾನುಭವಿಗಳಿಗೆ ಸಾಲ ನೀಡಲು ನೂರೊಂದು ನೆಪ ಹೇಳುತ್ತಾರೆ. ಜೊತೆಗೆ ಮನೆಯಲ್ಲಿ ತಂದೆ ಅಥವಾ ಅಣ್ಣನಿಗೆ ಸಾಲ ನೀಡಿದರೆ, ಆ ಸಾಲ ಪಾವತಿ ಮಾಡುವ ವರೆಗೂ ಮತ್ತೂಂದು ಸಾಲ ನೀಡುವುದಿಲ್ಲ ಎಂದು ದೂರಿದರು.
ಹಣ ವಾಪಸ್ ಹೋಗುತ್ತಿದೆ: ದೇಶಬಿಟ್ಟು ಹೋಗುವ ಕಾರ್ಪೋರೇಟ್ ಕಂಪನಿಗಳು ಮತ್ತು ಉದ್ಯಮಿಗಳಿಗೆ ಸಾವಿರ, ಲಕ್ಷ ಕೋಟಿ ರೂ.ಗಳಲ್ಲಿ ಸಾಲ ನೀಡುವ ಬ್ಯಾಂಕ್ ಅಧಿಕಾರಿಗಳು, ಸ್ವಉದ್ಯೋಗ ಕೈಗೊಳ್ಳುವ ವರಿಗೆ 1 ಲಕ್ಷ ರೂ. ಸಾಲ ನೀಡಲು ಹಿಂದೇಟು ಹಾಕುತ್ತಾರೆ. ಇದರಿಂದ ಸರ್ಕಾರದಿಂದ ಬರುವ ಸಬ್ಸಿಡಿ ಅನುದಾನ ವಾಪಸ್ ಹೋಗುತ್ತಿದೆ ಎಂದು ವಿವರಿಸಿದರು.
ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿ, ಜಿಲ್ಲಾ ಗೌರವಾಧ್ಯಕ್ಷ ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ನಾಗೇಶ್, ಈಕಂಬಳ್ಳಿ ಮಂಜುನಾಥ, ನಲ್ಲಂಡಹಳ್ಳಿ ಕೇಶವ, ವೇಣು, ಪುತ್ತೇರಿ ರಾಜು, ಮೀಸೆ ವೆಂಕಟೇಶಪ್ಪ, ಸಹ ದೇವಣ್ಣ, ಮಾಸ್ತಿ ವೆಂಕಟೇಶ್, ವಡ್ಡಹಳ್ಳಿ ಮಂಜುನಾಥ ಗಣೇಶ್, ಪ್ರತಾಪ್, ಸುಪ್ರಿಂ ಚಲ, ರಂಜಿತ್, ಸಾಗರ್, ಶಿವ ಮುಂತಾದವರಿದ್ದರು.