ಹೊಸದಿಲ್ಲಿ: 2ನೇ ವಾರಕ್ಕೆ ಕಾಲಿಟ್ಟಿರುವ ಸರಕಾರ ಮತ್ತು ರೈತರ ನಡುವಿನ ಬಿಕ್ಕಟ್ಟು ಸದ್ಯಕ್ಕೆ ಕೊನೆಗಾಣುವ ಲಕ್ಷಣ ಕಾಣುತ್ತಿಲ್ಲ. ಮೂರು ವಿಧದ ಬೇಳೆ ಕಾಳುಗಳು, ಮೆಕ್ಕೆಜೋಳ ಮತ್ತು ಹತ್ತಿಯನ್ನು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಅಡಿಯಲ್ಲಿ 5 ವರ್ಷಗಳವರೆಗೆ ಗುತ್ತಿಗೆ ಆಧಾರದಲ್ಲಿ ಖರೀದಿಸುವ ಪ್ರಸ್ತಾವವನ್ನು ಕೇಂದ್ರ ಸರಕಾರಮುಂದಿಟ್ಟಿತ್ತಾದರೂ, ರೈತರು ಈ ಆಫರನ್ನು ತಿರಸ್ಕರಿಸಿದ್ದಾರೆ. ಹೀಗಾಗಿ ರೈತರ ಪ್ರತಿಭಟನೆ ಮುಂದುವರಿದಿದೆ.
ರವಿವಾರ ರಾತ್ರಿ ನಡೆದ 4ನೇ ಸುತ್ತಿನ ಮತುಕತೆ ಬಳಿಕ, ದ್ವಿದಳ ಧಾನ್ಯಗಳು, ಮೆಕ್ಕೆ ಜೋಳ, ಹತ್ತಿಯನ್ನು ಎಂಎಸ್‌ಪಿ ಅಡಿಯಲ್ಲಿ 5 ವರ್ಷಗಳವರೆಗೆ ಖರೀದಿಸುವ ಪ್ರಸ್ತಾವವನ್ನು ಸರಕಾರರೈತರ ಮುಂದಿಟ್ಟಿತ್ತು. ಅದನ್ನು ನಿರಾಕರಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ), ಎಲ್ಲ 23 ಬೆಳೆಗಳನ್ನು ಎಂಎಸ್‌ಪಿ ಅಡಿ ತರುವಂತೆ ಒತ್ತಾಯಿಸಿದೆ.
ಸರಕಾರದ ಪ್ರಸ್ತಾವವು ರೈತರ ಬೇಡಿಯನ್ನು ದಿಕ್ಕುತಪ್ಪಿಸುತ್ತಿದೆ. 2014ರ ಸಾರ್ವತ್ರಿಕ ಚುನಾವಣೆಯ ವೇಳೆ ಬಿಜೆಪಿ ನೀಡಿದ್ದ ಆಶ್ವಾಸನೆಯಂತೆ ಎಲ್ಲ 23 ಬೆಳೆಗಳನ್ನು ಎಂಎಸ್‌ಪಿ ಅಡಿ ತರಬೇಕು. ಇದಲ್ಲದೆ ಕನಿಷ್ಠ ಬೆಂಬಲ ಬೆಲೆಯು ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಇ2+50 ಸೂತ್ರದಲ್ಲಿ ಇರಬೇಕೇ ಹೊರತು, ಈಗಿನಂತೆ ಅ2+ಊಔ+50 ಸೂತ್ರದಲ್ಲಿ ಇರಬಾರದು ಎಂದು ಮೋರ್ಚಾ ಪಟ್ಟುಹಿಡಿದಿದೆ.
ಜತೆಗೆ, ಕೃಷಿ ಸಚಿವ ಅರ್ಜುನ್ ಮುಂಡಾ ಸೇರಿ 3 ಸಚಿವರನ್ನು ಒಳಗೊಂಡ ಕೇಂದ್ರದ ಸಮಿತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಎಸ್‌ಕೆಎಂ, 4 ಸುತ್ತಿನ ಮಾತುಕತೆ ಬಳಿಕವೂ ಸಮಿತಿಯಲ್ಲಿ ಪಾರದರ್ಶಕತೆಯ ಕೊರತೆಯಿತ್ತು ಎಂದು ಟೀಕಿಸಿದೆ.
ಇದಲ್ಲದೆ, ಸಮರ್ಗ ಸಾರ್ವಜನಿಕ ವಲಯದ ಬೆಳೆ ವಿಮಾ ಯೋಜನೆ, 60 ವರ್ಷ ಮೇಲ್ಪಟ್ಟ ರೈತರಿಗೆ ಮಾಸಿಕ 10 ಸಾವಿರ ಪಿಂಚಣಿ ಮುಂತಾದ ಬೇಡಿಕೆಗಳು ಯಾವುದೇ ಪ್ರಗತಿ ಸಾಧಿಸಿಲ್ಲ. ಲಖೀಂಪುರ ಖೇರಿಯಲ್ಲಿ ರೈತರ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಅಜಯ್ ಮಿಶ್ರಾ ತೇನಿ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎನ್ನುವ ನಮ್ಮ ಬೇಡಿಕೆಯೂ ಈಡೇರಿಲ್ಲ ಎಂದು ಕಿಸಾನ್ ಮೋರ್ಚಾ ದೂರಿದೆ.
ರೈತರ ಬೇಡಿಕೆಯಲ್ಲೇನಿತ್ತು ?
(ಎನ್‌ಸಿಸಿಎಫ್), ಭಾರತದ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (ಎನ್‌ಎಎಫ್ಇಡಿ)ದಂತಹ ಒಕ್ಕೂಟ ಸಹಕಾರ ಸಂಘಗಳು 5 ವರ್ಷಗಳ ಗುತ್ತಿಗೆಯಲ್ಲಿ ತೊಗರಿಬೇಳೆ ಮತ್ತು ಮೆಕ್ಕೆಜೋಳವನ್ನು ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕುವುದು. ಇದೇ ಒಪ್ಪಂದದಲ್ಲಿ ಎಲ್ಲÉ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಯಡಿಯಲ್ಲಿ ತರಲು ಪ್ರಸ್ತಾವನೆ. ಎಂಎಸ್‌ಪಿಯಡಿ ಖರೀದಿಸು ವಾಗ ಖರೀದಿ ಪ್ರಮಾಣದ ಮೇಲೆ ಯಾವುದೇ ಮಿತಿ ಹೇರದಿರುವುದು. ಇದಕ್ಕೆ ಸಂಬಂಧಿಸಿ ಒಂದು ವೆಬ್‌ಸೈಟ್ ಸ್ಥಾಪಿಸುವುದು.
ಪ್ರಸ್ತುತ ಎಂಎಸ್‌ಪಿ ಯೋಜನೆಯಲ್ಲೇನಿದೆ?
ಭತ್ತ, ಗೋಧಿ, ಬೇಳೆ ಕಾಳುಗಳು ಮತ್ತು ಮೆಕ್ಕೆ ಜೋಳದಂತಹ ಪ್ರಧಾನ ಆಹಾರಗಳನ್ನು ಹೊರತುಪಡಿಸಿ, ಉಳಿದ 23 ಬೆಳೆಗಳಿಗೆ ಎಂಎಸ್‌ಪಿ ನೀಡಲಾಗುತ್ತಿದೆ. ಇದರಲ್ಲಿ ರಾಗಿ, ನೆಲಗಡಲೆ, ಸೂರ್ಯಕಾಂತಿ ಬೀಜಗಳು, ಬಾರ್ಲಿ, ಸಾಸಿವೆ ಮೊದಲಾದವು ಸೇರಿವೆ.