Advertisement

ಬೆಳೆವಿಮೆ ಅವಧಿ  ವಿಸ್ತರಣೆಗೆ ಆಗ್ರಹಿಸಿ ರೈತರ ಪ್ರತಿಭಟನೆ

02:06 PM Aug 05, 2017 | |

ವಿಜಯಪುರ: ರೈತರ ಬೆಳೆವಿಮೆ ಅವಧಿಯನ್ನು ವಿಸ್ತರಣೆ ಮಾಡುವುದು ಸೇರಿದಂತೆ ವಿವಿಧ ರೈತ ಪರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ ಜಿಲ್ಲಾ ಘಟಕ ವಿಜಯಪುರ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ವೇಳೆ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರಾಜ್ಯದಲ್ಲಿ ಸತತ ಮೂರ್‍ನಾಲ್ಕು ವರ್ಷಗಳಿಂದ ಸಕಾಲದಲ್ಲಿ ಮಳೆಯಾಗದೇ ಭೀಕರ ಬರಗಾಲ ಆವರಿಸಿ ರೈತರು ಬೆಳೆದ ಎಲ್ಲ ಮುಂಗಾರು ಹಾಗೂ ಹಿಂಗಾರು ಬೆಳೆಗಳು ನಾಶವಾಗಿವೆ. ಸರ್ಕಾರ ಹಾನಿಗೊಳಗಾದ ಬೆಳೆಗಳಿಗೆ ವಿಮೆ ಮಾಡಲು ಸರಕಾರ  ಈಗಾಗಲೇ ಆದೇಶ ನೀಡಿತ್ತು. ವಿಮೆ ತುಂಬಲು ಅಲ್ಪ ಕಾಲಾವಧಿ ನಿಗದಿಪಡಿಸಿ ಕಳೆದ ಜು. 31ರವರೆಗೆ ಅಲ್ಪ ಗಡುವು ನೀಡಿತ್ತು. ಇದರಿಂದ ಬಹುತೇಕ ರೈತರು ವಿಮೆ ಕಂತು ಕಟ್ಟಲು ಸಾಧ್ಯವಾಗಿಲ್ಲ ಎಂದು ದೂರಿದರು.

ಕಳೆದ ನಾಲ್ಕು ವರ್ಷಗಳಿಂದ ಬರಗಾಲದಿಂದ ತೊಂದರೆ ಅನುಭವಿಸುತ್ತಿರುವ ರೈತರಿಗೆ ಹಾನಿಗೊಳಗಾದ ಬೆಳೆಗಳಿಗೆ ವಿಮೆ ಮಾಡಿಸುವುದು ಇಂದಿನ ಜರೂರಾಗಿದೆ. ಅಲ್ಪಸ್ವಲ್ಪ ಬಿತ್ತಿದ ಖರ್ಚು, ಬೀಜ-ಗೊಬ್ಬರ ಹಾಗೂ ಎಲ್ಲ ರೀತಿಯ ಕೃಷಿ ಚಟುವಟಿಕೆಗಳಿಗೆ ತಗಲುವ ಖರ್ಚಿನ ಹಣವಾದರೂ ಬರುತ್ತದೆ ಎಂಬ ಆಶಾಭಾವನೆ ಹೊಂದಿದ್ದಾರೆ. ಸರ್ಕಾರದ ಅಲ್ಪಾವಧಿ ನೀತಿಯಿಂದ ರೈತರು ಅನ್ಯಾಯ ಅನುಭವಿಸುವಂತಾಗಿದೆ. ಕೂಡಲೇ ಬೆಳೆವಿಮೆ ಪಾವತಿಸುವ ದಿನಾಂಕವನ್ನು ಆ. 31ರವರೆಗೆ ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ಸಂಘಟನೆ ನಗರ ಘಟಕ ಅಧ್ಯಕ್ಷ ಧೋಂಡಿಬಾ ಪವಾರ, ಜಿಲ್ಲಾ ಸಂಚಾಲಕ ಗೌಡಪ್ಪಗೌಡ ಮೈಗೂರ ಬಾಪುಗೌಡ ಬಿರಾದಾರ, ಶಂಕರೆಪ್ಪ ತೊರವಿ, ತಾನಾಜಿ ಜಗತಾಪ, ವಿಶ್ವನಾಥ ಶಾಹಾಪೇಟೆ, ಚನ್ನಮಲ್ಲಪ್ಪ ಕಡೂರ, ರಾಮಣ್ಣ ಮರನೂರ, ಹಮೀದ ಮುಶ್ರೀಫ್‌, ಅಲ್ತಾಫ್‌ ಅಸ್ಕಿ, ಸಿದ್ದನಗೌಡ ಬಿರಾದಾರ, ಬಾಬು ಜಗತಾಪ, ಶಂಕ್ರೆಪ್ಪ ಶಾಹಾಪೇಟಿ, ಹಾಜಿ ಪಿಂಜಾರ, ಸದಾಶಿವ ಬರಟಗಿ, ರಾಮಣ್ಣ ಮರನೂರ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next