ರಾಯಚೂರು: ಹತ್ತಿ ಖರೀದಿಗೆ ವರ್ತಕರು ಮುಂದಾಗದ ಕಾರಣ ರೈತರು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಇಲ್ಲಿ ಹತ್ತಿ ಮಾರುಕಟ್ಟೆ ಪ್ರಾಂಗಣ ನಡೆದಿದೆ.
ಲೋಡ್ ಅನ್ ಲೋಡಿಂಗ್ ಗೆ ಹಣ ಪಡೆಯುತ್ತಿರುವುದನ್ನು ಖಂಡಿಸಿ ಲಾರಿ ಮಲೀಕರು ಮುಷ್ಕರ ನಡೆಸುತ್ತಿದ್ದಾರೆ. ಇದರಿಂದ ಹತ್ತಿ ಸಾಣೆಗೆ ಸಮಸ್ಯೆ ಎದುರಾಗಿದೆ. ಇದರಿಂದ ಹತ್ತಿ ಖರೀದಿ ಮೇಲೆ ನೇರ ಪರಿಣಾಮ ಬೀರಿದೆ. ರೈತರಿಂದ ಖರೀದಿ ಹತ್ತಿ ಸಂಗ್ರಹಿಸಲು ಸ್ಥಳಾವಕಾಶ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಖರೀದಿಗೆ ಮುಂದಾಗಿಲ್ಲ. ಆದರೆ, ಈ ಬಗ್ಗೆ ಮಾಹಿತಿ ಇಲ್ಲದೆ ಮಾರುಕಟ್ಟೆಗೆ ಹತ್ತಿ ತರಲಾಗಿದೆ. ಬೆಳಗ್ಗೆ 9 ಗಂಟೆಯಾದರು ವರ್ತಕರು ಬಾರದಿರುವುದನ್ನು ಕಂಡು ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ಜಿ.ಟಿ.ದೇವೆಗೌಡ ಬಗ್ಗೆ ಇನ್ನೂ ಯಾವುದೇ ಚರ್ಚೆ ನಡೆದಿಲ್ಲ : ಸಿದ್ದರಾಮಯ್ಯ
ಹೈದರಾಬಾದ್ ಮುಖ್ಯ ರಸ್ತೆ ತಡೆದು ಹೋರಾಟ ನಡೆಸಿದರು. ನಾವು ದೂರದೂರುಗಳಿಂದ ಬಂದಿದ್ದು ವರ್ತಕರು ಯಾವುದೇ ಮಾಹಿತಿ ನೀಡಿಲ್ಲ. ಹತ್ತಿ ಖರೀದಿಗೂ ಮುಂದಾಗುತ್ತಿಲ್ಲ. ಬೆಲೆ ಕೂಡ ಒಂದು ಸಾವಿರಕ್ಕಿಂತ ಹೆಚ್ಚು ಕಡಿಮೆ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ರಸ್ತೆ ತಡೆ ತೆರವುಗೊಳಿಸಿದರು. ಬಳಿಕ ಸಹಾಯಕ ಆಯುಕ್ತ ಸಂತೋಷ ಕಾಮಗೌಡ , ಎಪಿಎಂಸಿ ಅಧಿಕಾರಿಗಳು ರೈತ ಮುಖಂಡರು, ವರ್ತಕರೊಂದಿಗೆ ಮಾತುಕತೆ ಮುಂದುವರಿಸಿದ್ದಾರೆ.