Advertisement
ರಾಜ್ಯ ಸಮಿತಿ ಅಧ್ಯಕ್ಷರಾದ ಶರಣಪ್ಪ ಹಾಗೂ ಉಪಾಧ್ಯಕ್ಷ ಅಮರೇಶ ಮಾತನಾಡಿ ರಾಜ್ಯ ಸರ್ಕಾರವು ಬೆಲೆ ನಿಗದಿ ಮಾಡುವಂತೆ ನಾವುಗಳು ಕೂಡಾ ಬೆಲೆ ನಿಗದಿ ಕಾರ್ಯ ಮಾಡುತ್ತೇವೆ. ಬ್ಯಾಂಕ್ ಕೊಟ್ಟ ಸಾಲಕ್ಕೆ ಬೆಳೆದ ಬೆಳೆಯನ್ನು ಬ್ಯಾಂಕ್ ಮುಂದೆ ಹಾಕುವ ಕೆಲಸ ಮಾಡುತ್ತೇವೆ ಎಂದರು.
Related Articles
Advertisement
ಪ್ರತಿಭಟನೆಯನ್ನು ಉದ್ದೇಶಿಸಿ ಕುರುಗೋಡು ತಾಲೂಕು ಸಮಿತಿ ಅಧ್ಯಕ್ಷ ಕೆ.ಕಲ್ಗುಡೆಪ್ಪ ಮಾತನಾಡಿ ಕುರುಗೋಡಿನಲ್ಲಿ ಆದಷ್ಟು ಬೇಗನೇ ಭತ್ತ ಖರೀದಿ ಕೇಂದ್ರ ತೆರೆಯಬೇಕೆಂದು ಆಗ್ರಹಿಸಿದರು. ಜೊತೆಗೆ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನಿಗದಿ ಮಾಡಬೇಕೆಂದರು.
ಪ್ರತಿಭಟನೆಯಲ್ಲಿ ನವಕರ್ನಾಟಕ ಯುವಶಕ್ತಿಯ ವಿರುಪಾಕ್ಷಿ, ನಾರಾಯಣಿ ಯಡಿಗಿರಿ, ಕುರುಗೋಡಿನ ಮುಖಂಡ ಚಾನಾಳ್ ಅಮರೇಶ ಪ್ರತಿಭಟನೆಯಲ್ಲಿ ಭಾಗವಹಿಸಿ ರೈತರ ಸಂಘಕ್ಕೆ ಬೆಂಬಲ ಸೂಚಿಸಿದರು.
ಪ್ರತಿಭಟನಾ ಸ್ಥಳಕ್ಕೆ ಕುರುಗೋಡಿನ ತಹಶೀಲ್ದಾರ್ ಕೆ.ರಾಘವೇಂದ್ರರಾವ್ ಮತ್ತು ಪಿಎಸ್ಐ ಮಣಿಕಂಠ ಭೇಟಿ ನೀಡಿ ಮನವಿ ಪತ್ರ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ಕೆ.ರಾಮಚಂದ್ರ, ಹನುಮಂತಪ್ಪ ನಾಯಕ, ತಾಲೂಕು ಸಮಿತಿಯ ಉಪಗೌರವಾಧ್ಯಕ್ಷರಾದ ಪಿ.ಮರಿಬಸಪ್ಪ, ಉಪಾಧ್ಯಕ್ಷ ಎಸ್.ಗುರು, ಪ್ರಧಾನ ಕಾರ್ಯದರ್ಶಿ ಕೆ.ಗಿರೀಶ್ ಗೌಡ, ಸಹಕಾರ್ಯದರ್ಶಿ ಎ.ಕರಿಬಸಪ್ಪ, ಖಜಾಂಚಿ ಎಂ.ಗಾದಿಲಿಂಗಪ್ಪ, ಕುರುಗೋಡು ತಾಲೂಕು ಯುವ ಘಟಕದ ಅಧ್ಯಕ್ಷ ಹೆಚ್.ಬಸವರಾಜ, ಉಪಾಧ್ಯಕ್ಷ ಮಂಜುನಾಥ, ಕಾರ್ಯದರ್ಶಿ ಎಸ್.ದೇವೇಂದ್ರಪ್ಪ, ವದ್ದಟ್ಟಿ ಗ್ರಾಮ ಘಟಕದ ಅಧ್ಯಕ್ಷ ಎಂ.ರಾಜಶೇಖರ, ಉಪಾಧ್ಯಕ್ಷರಾದ ಜಿ.ನಾಗರಾಜ, ಬಾದನಹಟ್ಟಿ ಗ್ರಾಮ ಘಟಕದ ಅಧ್ಯಕ್ಷರಾದ ಕುಮಾರಗೌಡ, ಉಪಾಧ್ಯಕ್ಷರಾದ ಚಿದಾನಂದ, ಕಾರ್ಯದರ್ಶಿ ಜೀರು ಮಲ್ಲಪ್ಪ, ಸಹಕಾರ್ಯದರ್ಶಿ ನಾಯಕರ ರುದ್ರಪ್ಪ, ಸದಸ್ಯರಾದ ಎಸ್.ಬಸವ, ಎ.ಚಿದಾನಂದ, ಗೂಳ್ಯದ ಶಿವರಾಜ, ವಿಘ್ನೇಶ್ವರ, ಸೋಮೇಶ, ಹೂಗಾರ್ ತಿಮ್ಮಪ್ಪ ಇನ್ನಿತರರು ಸೇರಿದಂತೆ ಪಟ್ಟಣದ ಸುತ್ತ ಮುತ್ತಲಿನ ಗ್ರಾಮಗಳ ನೂರಾರು ರೈತರು ಭಾಗವಹಿಸಿದ್ದರು.