ಗುಂಡ್ಲುಪೇಟೆ: ತಾಲೂಕಿನ ರೈತರಿಗೆ ಅಂತರ್ಜಲ ಪ್ರಮುಖಮೂಲವಾಗಿರುವ ಹಿನ್ನೆಲೆ ಸಮರ್ಪಕವಾಗಿ ತ್ರಿಫೇಸ್ ಹಾಗೂ ಸಿಂಗಲ್ ಫೇಸ್ ವಿದ್ಯುತ್ ನೀಡುವಂತೆ ಒತ್ತಾಯಿಸಿ ರೈತ ಮುಖಂಡರು ಪ್ರತಿಭಟಿಸಿದರು.
ಪಟ್ಟಣದ ಸೆಸ್ಕ್ ಕಚೇರಿ ಮುಂದೆ ಮಂಗಳವಾರ ನಡೆದಪ್ರತಿಭಟನೆಯಲ್ಲಿ ಬಿಜೆಪಿ ಬರಗಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಾಡ್ರಹಳ್ಳಿ ನಾಗೇಂದ್ರ ಮಾತನಾಡಿ, ರೈತರಿಗೆ ವಿದ್ಯುತ್ ನೀಡಲುಹಿಂದೆ ಮುಂದೆ ನೋಡುವ ಅಧಿಕಾರಿಗಳು ಕ್ರಷರ್, ಕಾರ್ಖಾನೆಸೇರಿದಂತೆ ಖಾಸಗಿಯವರ ಬಳಕೆಗೆ ಬೆಳಗಿನ ವೇಳೆಯಲ್ಲಿಯೇಹೆಚ್ಚಿನ ಕರೆಂಟ್ ಕೊಡುತ್ತೀರಿ. ರೈತರಿಗೆ ಮಾತ್ರ ರಾತ್ರಿ ಸಂದರ್ಭಏಕೆ, ರಾತ್ರಿ 11 ಗಂಟೆ ನಂತರ ಜಮೀನಿನಲ್ಲಿ ವ್ಯವಸಾಯ ಮಾಡಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.
ಈ ಮಧ್ಯೆ ಕಾಡುಹಂದಿ, ಹಾವು ಸೇರಿದಂತೆ ಹಲವು ಕಾಡುಪ್ರಾಣಿಗಳ ಹಾವಳಿ ಹೆಚ್ಚಿನ ರೀತಿಯಲ್ಲಿದೆ. ರಾತ್ರಿ ವೇಳೆಜಂಪ್ ಹೋದರೆ ಅದನ್ನು ದುರಸ್ತಿ ಪಡಿಸುವ ಗೋಜಿಗೆ ಸೆಸ್ಕ್ಸಿಬ್ಬಂದಿ ಹೋಗುವುದಿಲ್ಲ. ಇದರಿಂದ ಆ ಭಾಗದಲ್ಲಿ ಕರೆಂಟ್‌ಇರುವುದಿಲ್ಲ. ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಪ್ರಸ್ತುತ ಸಾಲ ಮಾಡಿ ಫಸಲು ಬೆಳೆದಿದ್ದು, ನೀರಿಲ್ಲದೆ ಒಣಗುತ್ತಿದೆ. ಈ ಮಧ್ಯೆವಿದ್ಯುತ್ ಸಮಸ್ಯೆ ಬೇರೆ. ಹೀಗಾಗಿ ಸಮರ್ಪಕವಾಗಿ ಕರೆಂಟ್ ನೀಡಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹಸಿರು ಸೇನೆ ತಾಲೂಕು ಅಧ್ಯಕ್ಷ ಲೋಕೇಶ್,ಮಾಡ್ರಹಳ್ಳಿ ಮಲ್ಲೇಶ್, ಕೆ.ನಾಗೇಂದ್ರ, ಗ್ರಾಪಂ ಸದಸ್ಯ ಕುಮಾರ್,ಪ್ರತಾಪ್, ವೀರಭದ್ರಪ್ಪ, ಬೆಂಡಗಳ್ಳಿ ಮಾದಪ್ಪ, ಮೂರ್ತಿ, ಗ್ರಾಪಂಸದಸ್ಯ ಮೂರ್ತಿ, ಬಿ.ಕುಮಾರ್, ಸಿದ್ದಪ್ಪ ಸೇರಿದಂತೆ ರೈತ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.
ಬೆಳಗ್ಗೆ 4 ಗಂಟೆ, ರಾತ್ರಿ 3ಗಂಟೆ ತ್ರಿಫೇಸ್ : ಸೆಸ್ಕ್ : ರಾಜ್ಯದಲ್ಲಿ 2 ಸಾವಿರ ಮೆಗಾವ್ಯಾಟ್ ವಿದ್ಯುತ್ ಕೊರತೆಯಿದೆ. ಆದರೂ ಸಹ ರೈತರಿಗೆ ಸಮಸ್ಯೆ ಆಗದರೀತಿಯಲ್ಲಿ ಮಳೆ ಬೀಳುವವರೆಗೂ ಬೆಳಗ್ಗೆ ವೇಳೆ 4 ಗಂಟೆ,ರಾತ್ರಿ 3 ಗಂಟೆ ತ್ರಿಫೇಸ್ ಕರೆಂಟ್ ನೀಡುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಅದರಂತೆ ಕ್ರಮ ವಹಿಸಲಾಗುವುದು ಎಂದು ಸೆಸ್ಕ್ ಎಇಇ ಸಿದ್ದಲಿಂಗಪ್ಪ ತಿಳಿಸಿದರು.
ತಾಲೂಕಿನಲ್ಲಿ ಕೆರೆಗಳು ತುಂಬಿರುವ ಹಿನ್ನೆಲೆ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ಇದರಿಂದ ನಿಂತು ಹೋಗಿದ್ದ ಪಂಪ್‌ಸೆಟ್‌ಗಳಲ್ಲಿ ನೀರು ಬರಲಾರಂಭಿಸಿದೆ.ಕಳೆದ ವರ್ಷ ತಾಲೂಕಿನಲ್ಲಿ 55 ಮೆಗಾ ವ್ಯಾಟ್‌ಬಳಕೆಯಾಗಿತ್ತು. ಈ ಸಾಲಿನಲ್ಲಿ 70 ಮೆಗಾ ವ್ಯಾಟ್‌ಅವಶ್ಯಕತೆ ಇದೆ. ಹೀಗಾಗಿ ಬೇಸಿಗೆ ಸಂದರ್ಭದಲ್ಲಿ ತುಂಬಾಸಮಸ್ಯೆ ತಲೆದೋರಲಿದೆ. ರೈತರು ಇದಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.