Advertisement
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜಾಧ್ಯಕ್ಷ ಚೂನಪ್ಪ ಪೂಜೇರಿ ಮಾತನಾಡಿ, ಅಪಾರ ಮಳೆಯಿಂದ ಹಾಳಾದ ರೈತನ ಬೆಳೆ ಈಗ ಬಂದ ಅಲ್ಪ ಸ್ವಲ್ಪ ಬೆಳೆಗೆ ಮೊದಲು ಇದ್ದ 10,000 ರೂ. ದರ ಈಗ ಕುಸಿತ ಕಂಡು 5200 ರೂ. ಆಗಿ ರೈತರ ಬಾಳು ತೀರಾ ಸಂಕಷ್ಟಕ್ಕೆ ತಲುಪಿದ್ದು ಇದ್ದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಕಾರಣ ಎಂದು ದೂರಿದರು.
Related Articles
Advertisement
ಜಿ.ಪಂ ಸದಸ್ಯ ನಿಂಗಪ್ಪ ಅರಕೇರಿ, ಬೈಲಹೊಂಗಲ ತಾಲೂಕ ರೈತ ಸಂಘದ ಅದ್ಯಕ್ಷ ಮಹಾಂತೇಶ ಹಿರೇಮಠ, ನ್ಯಾಯವಾದಿ ಎಂ.ವಾಯ್. ಸೋಮಣ್ಣವರ ಮಾತನಾಡಿ, ಬ್ರಿಟಿಷ್ ಆಡಳಿತಕ್ಕಿಂತ ಕೆಟ್ಟದಾಗಿ ರೈತರನ್ನು ಮತ್ತು ಜನರನ್ನು ತುಳಿಯುವ ಕೆಲಸ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಆಗುತ್ತಿದ್ದು ಅದನ್ನು ಬಿಟ್ಟು ಸಾಮಾನ್ಯ ಜನರ ,ರೈತ ಪರ ಯೋಜನೆಗಳನ್ನು ತರಬೇಕೆಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ದ್ವನಿ)ರಾಜ್ಯಾದ್ಯಕ್ಷ ಸುರೇಶ ರಾಯಪ್ಪಗೋಳ, ಜೈಭೀಮ ಸಂಘರ್ಷ ಸಮಿತಿ(ಅಂಬೇಡ್ಕರ ವಾಣಿ) ರಾಜ್ಯಾಧ್ಯಕ್ಷ ರಮೇಶ ರಾಯಪ್ಪಗೋಳ ಮಾತನಾಡಿ, ರೈತರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರದ ವಿರುದ್ದ ರೈತರ ಬಾರುಕೋಲು ಚಳುವಳಿ ಪ್ರಾರಂಭಿಸಬೇಕಾಗುತ್ತದೆ ಎಂದರು.
ಬೈಲಹೊಂಗಲ ಉಪವಿಭಾಗಾದಿಕಾರಿ ಶಶಿಧರ ಬಗಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ, ಮಾತನಾಡಿ, ಈ ಎಲ್ಲ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವದೆಂದು ಹೇಳಿದರು. ಮೂರು ಘಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.
ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ರಾಮದುರ್ಗ,ಮಲ್ಲಿಕಾರ್ಜುನ ಹುಂಬಿ, ಪ್ರಕಾಶ ನಾಯ್ಕ, ಸಮರ್ಥ ಪಾಟೀಲ, ನಾನಾಸಾಹೇಬ ಪಾಟೀಲ, ಚಂದ್ರಯ್ಯ ಚರಂತಿಮಠ, ನಿಂಗಪ್ಪ ತಳವಾರ, ಬಸವರಾಜ ಚಿಕ್ಕನಗೌಡರ, ದೀಪಕಗೌಡ ಪಾಟೀಲ, ಪ್ರಕಾಶ ಮುಂಗರವಾಡಿ, ಸಂಕನಗೌಡ ಪಾಟೀಲ, ರಾಜೇಂದ್ರ ಇನಾಮದಾರ, ಆಕಾಶ ಪಾಟೀಲ, ಪ್ರಕಾಶ ತೋಟಗಿ, ವಾಸು ಹಮ್ಮನವರ, ಸುರೇಶ ಅಗಸಿಮನಿ, ಮುದಕಪ್ಪ ಮರಡಿ, ಮಹಾಂತೇಶ ಗುಜನಾಳ, ಬಸಣೆಪ್ಪ ಹುದ್ದಾರ, ಬಾಬು ಮರಿಗೌಡರ, ಸೋಮಪ್ಪ ಕೊಳದೂರ, ನಾಮದೇವ ಸಿದ್ದಮ್ಮನವನರ, ಸೋಮಪ್ಪ ಕೊಳದೂರ, ಸಾಗರ ದೇಸಾಯಿ, ಮಹಾಂತೇಶ ಗೌಡರ, ಹನಮಂತ ಕಿವಡ, ಚಂದ್ರಯ್ಯ ಚರಂತಿಮಠ, ರಾಜು ಕಡಕೋಳ, ಮಂಜು ಹೊಸಮನಿ, ಕಾಸಿಮ ಜಮಾದಾರ, ಲಕ್ಷ್ಮಿ ತಳವಾರ, ಮನೋಜ ಕೆಳಗೇರಿ, ಅಬ್ಬಾಶ ಪೀರಜಾದೆ, ಸುರೇಶ ಕೆಳಗೇರಿ, ಅಡಿವೆಪ್ಪಾ ಮೋದಗಿ, ಯಲ್ಲಪ್ಪ ತಿಗಡಿ, ಬಸಪ್ಪ ಕೊಳವಿ, ಸಂತೋಷ ಉಳವಿ, ಕಾಶಿನಾಥ ಹಡಪದ, ಯಲ್ಲಪ್ಪ ತಳವಾರ, ಸಿದ್ದಪ್ಪ ಕುಮರಿ, ಗಜಾನನ ಹೊಸಕೋಟಿ, ಅಯುಬ ಗಣಾಚಾರಿ, ಅಣ್ಣಪ್ಪ ಕಡಕೋಳ , ಹಂಪಣ್ಣ ಕೌಜಲಗಿ, ನಾಗೇಶ ಬಾಗೇವಾಡಿ, ರಮೇಶ ಮೂಲಿಮನಿ, ವಿನಾಯಕ ಮಾಸ್ತಮರ್ಡಿ, ಸೊಯಲ್ ಮೋಖಾಸಿ ಸೇರಿದಂತೆ ಅನೇಕ ರೈತ ಮಹಿಳೆಯರು, ರೈತರು ಪಾಲ್ಗೊಂಡಿದ್ದರು.