Advertisement

ಕೃಷಿ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆ

12:17 PM Jan 27, 2021 | Team Udayavani |

ಚಾಮರಾಜನಗರ:ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಜಿಲ್ಲಾ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟಿಸಿದರು.

Advertisement

ನಗರದ ಪ್ರವಾಸಿಮಂದಿರದ ಬಳಿ ಸಮಾವೇಶ ಗೊಂಡ ಪ್ರತಿಭಟನಾಕಾರರು ಅಣಕು ಶವಯಾತ್ರೆ ನಡೆಸಲು ಸಿದ್ಧತೆ ಕೈಗೊಂಡಿದ್ದರು. ಈ ವೇಳೆ ಪ್ರವಾಸಿ ಮಂದಿರಕ್ಕೆ ತೆರಳಿದ ಪೊಲೀಸರು ಅಣಕು ಶವಯಾತ್ರೆ ನಡೆಸದಂತೆ ಸೂಚಿಸಿದರು. ಈ ವೇಳೆ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಇದನ್ನೂ ಓದಿ:ವಿಶ್ವಕ್ಕೆ ಹೊಸ ಸಂದೇಶ ನೀಡಿದ ಸ್ವಾತಂತ್ರ್ಯ ಚಳವಳಿ

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್‌, ಮುಖಂಡರಾದ ವಿಜಿ ಹೆಗ್ಗೊàಠಾರ, ಪೃಥ್ವಿ, ಮಾಡ್ರಹಳ್ಳಿ ಮಹದೇವಪ್ಪ, ಶಿವಕುಮಾರ್‌, ಮಹೇಶ್‌, ದಡದಹಳ್ಳಿ ಷಣ್ಮುಗ ಸ್ವಾಮಿ, ಗುರು, ರಘು, ಮಹೇಶ ಇತರರಿದ್ದರು. ಬೆಂಗಳೂರಿನಲ್ಲಿ ನಡೆದ ಟ್ರ್ಯಾಕ್ಟರ್‌ ಮತ್ತು ವಾಹನಗಳ ಪೆರೇಡ್‌ನ‌ಲ್ಲಿ ಜಿಲ್ಲಾ ರೈತ ಸಂಘದ ಕಾರ್ಯಕರ್ತರು ಸಹ ಭಾಗವಹಿಸಿದ್ದರು. ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್‌, ಹಸಿರು ಸೇನೆಸಂಚಾಲಕ ಕಡಬೂರು ಮಂಜು, ಹಾಲಹಳ್ಳಿಮಹೇಶ್‌. ಹೊನ್ನೂರು ಬಸವಣ್ಣ, ಅಂಬಳೆ  ಶಿವಕುಮಾರ್‌, ಪಾಳ್ಯದ ರಘು, ಕುಂದಕೆರೆ ಸಂಪತ್ತು, ಕಂದೇಗಾಲ ವೃಷಭೇಂದ್ರ ಮತ್ತಿತರರು ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next