ಶ್ರೀರಂಗಪಟ್ಟಣ: ತಾಲೂಕಿನ ದೊಡ್ಡಪಾಳ್ಯ ಗ್ರಾಮದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಿರು ಜಲ ವಿದ್ಯುತ್ ಘಟಕಕ್ಕೆ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಅಕ್ರಮದಿಂದ ಕಿರು ಘಟಕದ ತಡೆಗೋಡೆಯನ್ನು ಎತ್ತರ ಮಾಡಿದರೆ, ರೈತರ ಜಮೀನು ಮುಳುಗಡೆ ಸಾಧ್ಯತೆ ಹಿನ್ನೆಲೆ ರೈತ ಸಂಘದಮುಖಂಡ ಮಂಜೇಶ್ ಗೌಡ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ತಗ್ಗು ಪ್ರದೇಶದ ಜಮೀನುಗಳು ಸಂಪೂರ್ಣಮುಳುಗಡೆಗೊಂಡು, ಬೇಸಾಯ ಮಾಡಿದ ಫಸಲು ಕೈಗೆ ಸಿಗುವುದಿಲ್ಲ ಎಂದು ಕಾಮಗಾರಿ ತಡೆಗೆ ಪ್ರಯತ್ನ ಮಾಡಲು 50ಕ್ಕೂ ಹೆಚ್ಚು ಜನ ಮುಂದಾದರು. ಡಿವೈಎಸ್‌ಪಿ ಮುರುಳಿ ನೇತೃತ್ವದಲ್ಲಿ ನಂತರ 70ಕ್ಕೂ ಹೆಚ್ಚು ಪೊಲೀಸರನ್ನು ಈ ಮೊದಲೇ ಕಾಮಗಾರಿ ನಡೆಯುವ ಸ್ಥಳದಲ್ಲಿ ನಿಯೋಜನೆ ಮಾಡಿದ್ದರಿಂದ ಭದ್ರತೆ ಗೊಳಿಸಲಾಯಿತು. ಪೊಲೀಸರು ಅಡ್ಡಿಪಡಿಸಿದ್ದರಿಂದ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಚರ್ಚಿಸದೆ ಕಾಮಗಾರಿ: ಉದ್ಯಮಿಗಳ ಪರವಿರುವ ಎಲ್ಲಾ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರುರೈತರಿಗೆ ಅನ್ಯಾಯವಾಗಿರುವ ಬಗ್ಗೆ ಚರ್ಚೆಮಾಡದೆ ಕಾಮಗಾರಿ ನಡೆಸುತ್ತಿದ್ದು, ಕಾವೇರಿನೀರು ಹೆಚ್ಚಿನ ಪ್ರವಾಹ ಬಂದ ವೇಳೆ ತಗ್ಗು ಪ್ರದೇಶದ ಜಮೀನುಗಳಿಗೆ ಕಾವೇರಿ ನದಿ ಹಿನ್ನೀರು ತುಂಬಿ, ಬೇಸಾಯ ಮಾಡದೆ ಜಮೀನುಗಳುಪಾಳು ಬಿದ್ದಿವೆ. ಇದರಿಂದ ಪರಿಹಾರವನ್ನು ನೀಡದಜಿಲ್ಲಾ, ತಾಲೂಕು ಆಡಳಿತ ರೈತರ ಸಮಸ್ಯೆಗೆ ಮುಂದಾಗದೆ, ಉದ್ಯಮಿಗಳ ಪರ ನಿಂತು ರೈತರನ್ನುಗುಳ್ಳೆ ಹೋಗುವ ರೀತಿ ಮಾಡಿದೆ ಎಂದು ರೈತರು ಆರೋಪಿಸಿದರು.
ಮಧ್ಯ ಪ್ರವೇಶಿಸಿದ ಡಿವೈಎಸ್ಪಿ ಮುರುಳಿ, ನಿಮ್ಮ ಸಮಸ್ಯೆಗಳ ಬಗ್ಗೆ ತಹಶೀಲ್ದಾರ್ ಬಳಿ ಚರ್ಚೆ ಮಾಡಿ,ಇದಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ, ಜಲ ವಿದ್ಯುತ್ ಘಟಕದ ಅಧಿಕಾರಿಗಳ ಜೊತೆ ಮಾತನಾಡಿ, ರೈತರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಇಂದು ಡಿವೈಎಸ್‌ಪಿ ಕಚೇರಿ ಬಳಿ ಮುಷ್ಕರ: ಕಿರು ಜಲವಿದ್ಯುತ್ ಯೋಜನೆ ಕಾಮಗಾರಿ ನಡೆಸುವವರು ನದಿಯಲ್ಲಿ ಗೋಡೆಗಳನ್ನು ಇನ್ನಷ್ಟು ಎತ್ತರ ಮಾಡುತ್ತಿದ್ದು, ಇದರಿಂದ ನೂರಾರು ಎಕರೆ ಜಮೀನು ನದಿ ಹಿನ್ನೀರಿನಲ್ಲಿ ಮುಳುಗುವಸಾಧ್ಯತೆಯಿದೆ. ಆದ್ದರಿಂದ ರೈತರಿಗೆ ಶಾಶ್ವತ ಪರಿಹಾರಕ್ಕಾಗಿ ಒತ್ತಾಯಿಸಿ ಫೆ.28ರ ಮಂಗಳವಾರ ಬೆಳಗ್ಗೆಯಿಂದ ಡಿವೈಎಸ್‌ಪಿ ಕಚೇರಿ ಮುಂದೆ ರೈತರು ಅನಿಧಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗುವುದು ಎಂದು ರೈತ ಮುಖಂಡ ಮಂಜೇಶ್‌ಗೌಡ ತಿಳಿಸಿದ್ದಾರೆ.
ರೈತ ಮುಖಂಡರಾದ ನಾಗೇಂದ್ರಸ್ವಾಮಿ, ಚಂದ್ರಶೇಖರ್, ಸಿಪಿಐ ಬಿ.ಜಿ.ಕುಮಾರ್, ಪುನೀತ್ ಸೇರಿದಂತೆ ರೈತರು ಹಾಜರಿದ್ದರು.