ಕೊಳ್ಳೇಗಾಲ: ತಾಲೂಕಿನ ಕುಂತೂರು ಬಣ್ಣಾರಿ ಅಮ್ಮಾನ್ ಸಕ್ಕರೆ ಕಾರ್ಖಾನೆಯ ಮಾಲೀಕರು, ಕಬ್ಬಬೆಳೆದ ರೈತರಿಗೆ ನೀಡಬೇಕಾಗಿರುವ 12 ಕೋಟಿ ರೂ. ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಉಪವಿಭಾಗಾಧಿಕಾರಿ ಕಚೇರಿಯ ಆವರಣದಲ್ಲಿ
ನಡೆಯುತ್ತಿರುವ ಅಹೋರಾತ್ರಿ ಧರಣಿ ಶನಿವಾರ ಮೂರನೇ ದಿನಕ್ಕೆ ಕಾಲ್ಟಿದೆ. ಸ್ಥಳಕ್ಕೆ ಶಾಸಕ ಎನ್, ಮಹೇಶ್ ಆಗಮಿಸಿ, ರೈತರ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿದರು. ರೈತರ ನಾಲ್ಕು ಬೇಡಿಕೆಗಳನ್ನು ಶೀಘ್ರದಲ್ಲಿ ಪರಿಹರಿಸಿಕೊಡುವಂತೆ ತಾಲೂಕು ಘಟಕದ ಅಧ್ಯಕ್ಷ ನಂಜುಂಡಸ್ವಾಮಿ ಮನವಿ ಮಾಡಿದರು.
ಸಕ್ಕರೆ ಸಚಿವರೊಂದಿಗೆ ಸಮಾಲೋಚನೆಯ ಭರವಸೆ: ರೈತ ಮುಖಂಡರ ಅಹವಾಲನ್ನು ಸ್ವೀಕರಿಸಿದ ಶಾಸಕರು, ನೀವು ಕೇಳಿರುವ ಬೇಡಿಕೆ ಕಾನೂನು ಬದ್ಧವಾಗಿದೆ. ಇದನ್ನು ಕಾರ್ಖಾನೆಯ ಮಾಲೀಕರು ಚಾಚು ತಪ್ಪದೇ ನೀಡಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಕೂಡಲೇ ಸಂಬಂಧಿಸಿದ ಸಕ್ಕರೆ ಸಚಿವರೊಂದಿಗೆ ಸಮಾಲೋಚನೆ ಮಾಡುವ ಭರವಸೆಯನ್ನು ನೀಡಿದರು.
ರೈತರಿಗೆ ನ್ಯಾಯ ಕೊಡಿಸಿ: ಹಾಲು ಒಕ್ಕೂಟದವರು ಗ್ರಾಮಸ್ಥರಿಂದ ಹಾಲು ಅಳತೆಗೊಲಿ ನಿಂದ ಅಳೆದು ಅದರ ಗುಣಮಟ್ಟವನ್ನು ಹೇಳುತ್ತಾರೆ. ಅದೇ ರೀತಿ ರೈತರು ಬೆಳೆದ ಕಬ್ಬಿನ ಗುಣಮಟ್ಟವನ್ನು ಕೂಡಲೇ ಹೇಳುವಲ್ಲಿ ಕಾರ್ಖಾನೆಯ ಮಾಲೀಕರು ಮೀನಮೇಷ ವೆಸಗುತ್ತಿದ್ದಾರೆ. ರೈತರಿಗೆ ಈ ರೀತಿಯಾಗಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ, ಕೂಡಲೇ ರೈತರ ಧರಣಿಯನ್ನು ಅಂತ್ಯಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ತೀರ್ಮಾನವಾಗುವವರೆಗೂ ಧರಣಿ ಕೈಬಿಡಲ್ಲ: ಜಿಲ್ಲಾಧಿಕಾರಿಗಳೊಂದಿಗೆ ಪೋನ್ ಮೂಲಕ ಸಮಾಲೋಚನೆ ನಡೆಸಿದ ಬಳಿಕ ಧರಣಿಯನ್ನು ಕೈಬಿಡುವಂತೆ ಮನವಿ ಮಾಡಿದರು. ಶಾಸಕ ಮನವಿಗೆ ಸ್ಪಂದಿಸದ ರೈತ ಮುಖಂಡರು ಸೂಕ್ತ ತೀರ್ಮಾನವಾಗುವವರೆಗೂ ಅಹೋ ರಾತ್ರಿ ಧರಣಿ ಕೈಬಿಡುವುದಿಲ್ಲ ಎಂದು ರೈತ ಮು ಖಂಡರು ಧರಣಿಯತ್ತ ಮುಖ ಮಾಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ.ಕುನಾಲ್ ಮತ್ತು ರೈತ ಮುಖಂಡರು, ಕಚೇರಿ ಸಿಬ್ಬಂದಿ ಹಾಜರಿದ್ದರು.